Connect with us

Latest

ಜಿಯೋಫಿ ಹೊಸ ಸಾಧನ ಬಿಡುಗಡೆ: ಬೆಲೆ ಎಷ್ಟು? ಎಷ್ಟು ಡಿವೈಸ್ ಕನೆಕ್ಟ್ ಮಾಡಬಹುದು?

Published

on

ಮುಂಬೈ: ರಿಲಯನ್ಸ್ ಜಿಯೋ ಹೊಸ ಮಾದರಿಯ ಜಿಯೋಫಿ 4ಜಿ ಎಲ್‍ಟಿಇ ಹಾಟ್ ಸ್ಪಾಟ್ ಸಾಧನವನ್ನು ಬಿಡುಗಡೆ ಮಾಡಿದ್ದು 999 ರೂ. ಬೆಲೆಯಲ್ಲಿ ಆನ್‍ಲೈನ್ ಶಾಪಿಂಗ್ ತಾಣದಲ್ಲಿ ಲಭ್ಯವಿದೆ.

ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದ್ದು, ಒಂದು ವರ್ಷ ವಾರಂಟಿ ಸಿಗಲಿದೆ. ಹಿಂದೆ ಬಿಡುಗಡೆ ಮಾಡಿದ್ದ ಸಾಧನ ಮೊಟ್ಟೆ ಆಕಾರದಲ್ಲಿ ಇದ್ದರೆ ಈಗ ಬಿಡುಗಡೆಯಾಗಿರುವ ಸಾಧನ ವೃತ್ತಾಕಾರದಲ್ಲಿದೆ.

ಆನ್, ಆಫ್, ಡಬ್ಲ್ಯೂಪಿಎಸ್(ವೈಫೈ ಪ್ರೊಟೆಕ್ಟೆಡ್ ಸೆಟಪ್), ಬ್ಯಾಟರಿ ನೋಟಿಫಿಕೇಶನ್ ಲೈಟ್, 4ಜಿ, ವೈಫೈ ಸಿಗ್ನಲ್ ನೋಡಲು ಸಾಧ್ಯವಿದೆ. 150 ಎಂಬಿಎಸ್ ಡೌನ್ಲೋಡ್ ಸ್ಪೀಡ್ ಇದ್ದರೆ 50 ಎಂಬಿ ಅಪ್ಲೋಡ್ ಸ್ವೀಡ್ ಇದೆ.

ಒಂದು ಬಾರಿ ಗರಿಷ್ಟ 32 ಸಾಧನಗಳನ್ನು ಕನೆಕ್ಟ್ ಮಾಡುವ ಸಾಮರ್ಥ್ಯ ಈ ಸಾಧನಕ್ಕಿದೆ. ಮೈಕ್ರೋ ಎಸ್‍ಡಿ ಸ್ಲಾಟ್ ನೀಡಲಾಗಿದ್ದು, ಗರಿಷ್ಟ 64 ಜಿಬಿ ಮೆಮೊರಿ ಕಾರ್ಡ್ ಹಾಕಬಹುದಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಸಾಧನ 2300 ಎಂಎಎಚ್ ಬ್ಯಾಟರಿ ಹೊಂದಿದ್ದರೆ ಹೊಸ ಸಾಧನ 3000 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ.