Bengaluru City

ಜಿಂದಾಲ್‍ಗೆ 3,665 ಎಕರೆ ಪರಭಾರೆ ಆದೇಶ ವಾಪಸ್ – ಕ್ಯಾಬಿನೆಟ್‍ನಲ್ಲಿ ಏನಾಯ್ತು?

Published

on

Share this

ಬೆಂಗಳೂರು: ಜಿಂದಾಲ್‍ಗೆ ಭೂಮಿ ಪರಭಾರೆ ವಿಚಾರ ಬಿಜೆಪಿಯಲ್ಲಿಯೇ ಅಸಮಾಧಾನಕ್ಕೆ ಕಾರಣವಾಗಿತ್ತು. ಬಿಎಸ್‍ವೈ ವಿರೋಧಿಗಳಿಗೆ ಇದೇ ದೊಡ್ಡ ಅಸ್ತ್ರವಾಗಿ ಪರಿಣಮಿಸಿತ್ತು. ಇದರಿಂದಾಗಬಹುದಾದ ಅಪಾಯವನ್ನು ಮನಗಂಡ ಸಿಎಂ ಯಡಿಯೂರಪ್ಪ, ಇವತ್ತು ವಿರೋಧಿ ಪಾಳಯಕ್ಕೆ ಜಿಂದಾಲ್ ಅಸ್ತ್ರವೂ ಸಿಗದಂತೆ ಮಾಡಿಬಿಟ್ಟಿದ್ದಾರೆ.

ಇಂದಿನ ಸಭೆಯಲ್ಲಿ ದಿಢೀರ್ ಎಂದು ಜಿಂದಾಲ್‍ಗೆ 3,665 ಎಕರೆ ಭೂಮಿ ಪರಭಾರೆ ಮಾಡುವ ತೀರ್ಮಾನವನ್ನು ಹಿಂಪಡಿದ್ದಾರೆ. ಸಚಿವ ಸಂಪುಟ ಆರಂಭ ಆಗ್ತಿದ್ದಂತೆ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ಈ ವೇಳೆ ಈಶ್ವರಪ್ಪ ಇದಕ್ಕೆ ಕಾರಣ ತಿಳಿಸಬೇಕು ಅಲ್ವಾ ಎಂದು ಪ್ರಶ್ನಿಸಿದ್ದಾರೆ. ಕೂಡ್ಲೇ ಮಾಧುಸ್ವಾಮಿ ಮಧ್ಯಪ್ರವೇಶಿಸಿ ಇರಲಿ ಬಿಡಿ. ಅದ್ರಿಂದ ಏನು ಸಮಸ್ಯೆ ಎಂದು ಈಶ್ವರಪ್ಪರನ್ನು ಸುಮ್ಮನಾಗಿಸಿದ್ರು. ಈ ಬಗ್ಗೆ ಚರ್ಚೆ ಬೇಡ ಎಂದು ಯಡಿಯೂರಪ್ಪ ಹೇಳ್ತಿದ್ದಂತೆ ಉಳಿದವರೆಲ್ಲಾ ಸೈಲೆಂಟಾದ್ರು ಎಂದು ತಿಳಿದುಬಂದಿದೆ. ಇದನ್ನೂ ಓದಿ : ಎರಡು ಅಲೆಗಳಲ್ಲಿಯೂ ಈ ಗ್ರಾಮಗಳಿಗೆ ಕೊರೊನಾ ನೋ ಎಂಟ್ರಿ- ಎಂಥ ಕಟ್ಟುನಿಟ್ಟಿನ ನಿಯಮ ಪಾಲಿಸ್ತಿದ್ದಾರೆ ಗೊತ್ತಾ?

ಸಂಪುಟ ಸಭೆ ಬಳಿಕ ಮಾತನಾಡಿದ ಗೃಹ ಸಚಿವ ಬೊಮ್ಮಾಯಿ, ಕಳೆದ ಸಂಪುಟದಲ್ಲಿ ಜಿಂದಾಲ್‍ಗೆ ಭೂಮಿ ಕೊಡುವ ಬಗ್ಗೆ ನಿರ್ಣಯವನ್ನು ಜಾರಿಗೊಳಿಸಲ್ಲ. ಸದ್ಯ ಇದು ಕೋರ್ಟ್‍ನಲ್ಲಿದೆ. ಕೋರ್ಟ್ ತೀರ್ಪು ನೋಡಿ ಮುಂದೆ ತೀರ್ಮಾನ ಮಾಡಲಾಗುವುದು. ದೊಡ್ಡಬಳ್ಳಾಪುರದ ಆದಿನಾರಯಣಹಳ್ಳಿಯ 18 ಎಕರೆ ಭೂಮಿಯನ್ನು ಹೋಂಡಾ ಆಕ್ಟೀವಾ ಕಂಪನಿಗೆ ನೀಡಲು ಸಂಪುಟ ಒಪ್ಪಿಗೆ ಸೂಚಿಸಿದೆ ಎಂದರು.

ಜಿಂದಾಲ್‍ಗೆ ಭೂಮಿ ಮಾರಾಟ ಮಾಡಲು ಕಳೆದ ಸಂಪುಟದಲ್ಲಿ ಒಪ್ಪಿಗೆ ನೀಡಿದ್ರಿಂದ ಅಸಮಾಧಾನಗೊಂಡಿದ್ದ ಸಚಿವ ಆನಂದ್ ಸಿಂಗ್, ತಂದೆಗೆ ಅನಾರೋಗ್ಯ ಎಂಬ ನೆಪ ಹೇಳಿ ಇವತ್ತಿನಿಂದ ಕ್ಯಾಬಿನೆಟ್‍ನಿಂದ ದೂರ ಉಳಿದಿದ್ದರು.

Click to comment

Leave a Reply

Your email address will not be published. Required fields are marked *

Advertisement
Advertisement