Connect with us

Bellary

ಬಳ್ಳಾರಿಯ ಜಿಂದಾಲ್ ಬಂದ್‍ಗೆ ಸರ್ಕಾರದ ಸಿದ್ಧತೆ

Published

on

ಬಳ್ಳಾರಿ: ನಂಜನಗೂಡಿನ ಜುಬಿಲೆಂಟ್ ರೀತಿ ಬಳ್ಳಾರಿಯ ಜಿಂದಾಲ್ ಕೊರೊನಾ ಫ್ಯಾಕ್ಟರಿಯಾಗಿದೆ. ಸಂಡೂರು ತಾಲೂಕಿನ ತೋರಣಗಲ್ ಬಳಿಯಿರುವ ಜಿಂದಾಲ್‍ನಲ್ಲಿ ಇವತ್ತು ಹೊಸದಾಗಿ ಮತ್ತೆರಡು ಕೇಸ್ ದಾಖಲಾಗಿದೆ. ಈ ಮೂಲಕ ಜಿಂದಾಲ್ ಕಾರ್ಖಾನೆಯ ಸೋಂಕಿತ ಸಂಖ್ಯೆ 90ಕ್ಕೆ ಏರಿಕೆಯಾಗಿದೆ. ಹೀಗಾಗಿ 10 ಸಾವಿರಕ್ಕೂ ಹೆಚ್ಚು ಮಂದಿ ನೌಕರರಿಗೆ ಹೋಮ್ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.

ಈ ಬಗ್ಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಮಾತನಾಡಿ, ಜಿಂದಾಲ್ ಕಾರ್ಖಾನೆಯನ್ನು ಸಂಪೂರ್ಣ ಬಂದ್ ಮಾಡೋಕೆ ಚಿಂತನೆ ನಡೆಸಲಾಗಿದೆ. ಜಿಂದಾಲ್ ಕಾರ್ಖಾನೆಯಲ್ಲಿನ ಕೆಲವು ಬಾಯ್ಲರ್ ಬಂದ್ ಮಾಡಲು ಸಾಧ್ಯವಿಲ್ಲ. ಕೊರೊನಾ ಸಂಪರ್ಕ ಕೊಂಡಿಯನ್ನು ಹೇಗೆ ಕಡಿತಗೊಳಿಸಬೇಕು. ಹೀಗಾಗಿ ತಾತ್ಕಾಲಿಕವಾಗಿ ಜಿಂದಾಲ್ ಕಂಪನಿ ಮುಚ್ಚುವ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಬಳ್ಳಾರಿಯಲ್ಲಿ ಇವತ್ತು 97 ಹೊಸ ಕೊರೊನಾ ಒಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 168ಕ್ಕೇರಿಕೆ ಆಗಿದೆ. ಇದುವರೆಗೂ 43 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಜಿಲ್ಲೆಯಲ್ಲಿ 124 ಸಕ್ರಿಯ ಪ್ರಕರಣಗಳಿವೆ.