ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್‌ಗೆ ಇಡಿ ಸಂಕಷ್ಟ- ವಿಚಾರಣೆಗೆ ಹಾಜರಾಗುವಂತೆ ಸಮನ್ಸ್

Advertisements

ರಾಂಚಿ: ಜಾರ್ಖಂಡ್‌ನಲ್ಲಿ (Jharkhand) ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ED) ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ (Hemant Soren) ಅವರಿಗೆ ಸಮನ್ಸ್ ನೀಡಿದೆ. ಗುರುವಾರ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಸಿಎಂಗೆ ತಿಳಿಸಲಾಗಿದೆ.

Advertisements

ಹೇಮಂತ್ ಸೊರೆನ್ ಅವರ ಸಹಾಯಕ ಪಂಕಜ್ ಮಿಶ್ರಾ ತನಿಖೆಯ ವೇಳೆ ಕೆಲವು ಸತ್ಯಗಳು ಬಹಿರಂಗಗೊಂಡಿವೆ, ಅದನ್ನು ಪರಿಶೀಲಿಸಬೇಕಾಗಿದೆ. ಈ ಹಿನ್ನಲೆ ಸಮನ್ಸ್ ನೀಡಲಾಗಿದೆ ಎಂದು ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisements

ಜುಲೈನಲ್ಲಿ ಸೊರೆನ್ ಅವರ ಆಪ್ತ ಸಹಾಯಕ ಮತ್ತು ಬರ್ಹೈತ್ ವಿಧಾನಸಭೆ ಕ್ಷೇತ್ರದ ಶಾಸಕರಾಗಿರುವ ಮಿಶ್ರಾ ಅವರನ್ನು ಏಜೆನ್ಸಿ ಬಂಧಿಸಿತ್ತು. ಬಳಿಕ ಮಿಶ್ರಾ ಒಳಗೊಂಡಂತೆ ಪ್ರಕರಣದಲ್ಲಿ ಇತರ ಇಬ್ಬರ ವಿರುದ್ಧ ಪ್ರಾಸಿಕ್ಯೂಷನ್ ದೂರನ್ನು (ಚಾರ್ಜ್‌ಶೀಟ್‌ಗೆ ಸಮಾನ) ಸಲ್ಲಿಸಿತ್ತು. ಇದರಲ್ಲಿ ಮಿಶ್ರಾ ಅವರ ನಿಯಂತ್ರಣದಲ್ಲಿರುವ ಸಾಹಿಬ್‌ಗಂಜ್ ಜಿಲ್ಲೆ ಮತ್ತು ಜಾರ್ಖಂಡ್‌ನ ಪಕ್ಕದ ಪ್ರದೇಶಗಳಲ್ಲಿ 1,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಪತ್ತೆಹಚ್ಚಿದೆ ಎಂದು ಸೆಪ್ಟೆಂಬರ್‌ನಲ್ಲಿ ಸಂಸ್ಥೆ ರಾಂಚಿಯ ವಿಶೇಷ ನ್ಯಾಯಾಲಯಕ್ಕೆ ತಿಳಿಸಲಾಗಿತ್ತು. ಇದನ್ನೂ ಓದಿ: ʼನಮ್ಮ ಮೆಟ್ರೊʼದಿಂದ ಆನ್‌ಲೈನ್‌ ಟಿಕೆಟ್‌ ಲೋಕಾರ್ಪಣೆ – ಪ್ರಯಾಣಿಕರಿಂದ ಭರ್ಜರಿ ರೆಸ್ಪಾನ್ಸ್‌

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ನ್ಯಾಯಾಲಯಕ್ಕೆ ಸಲ್ಲಿಸಿರುವ ತನ್ನ ಪ್ರಾಸಿಕ್ಯೂಷನ್ ದೂರಿನಲ್ಲಿ ಇಡಿ, ಮಿಶ್ರಾ ಅವರು ಕ್ರಷರ್‌ಗಳ ಸ್ಥಾಪನೆಯನ್ನು ನಿಯಂತ್ರಿಸುತ್ತಿದ್ದರು. ‘ಬಹುತೇಕ ಎಲ್ಲಾ ಗಣಿಗಳಲ್ಲಿ’ ಮತ್ತು ವಸ್ತುಗಳ ಸಾಗಣೆಯಲ್ಲಿ ಸ್ಥಿರ ಪಾಲು ಹೊಂದಿದ್ದಾರೆ ಎಂದು ಹೇಳಿದರು. ಇಡಿ ಮೂವರನ್ನು ಆರೋಪಿಗಳೆಂದು ಹೆಸರಿಸಿದೆ. ಈ ಪೈಕಿ ಮಿಶ್ರಾ, ಅವರ ಸಹವರ್ತಿ ಬಚ್ಚು ಯಾದವ್ ಮತ್ತು ಅಕ್ರಮ ಗಣಿಗಾರಿಕೆಯ ಮೂಲಕ ಗಳಿಸಿದ ಆದಾಯವನ್ನು ಮನಿ ಲಾಂಡರಿAಗ್ ಮಾಡಿದ ಪ್ರೇಮ್ ಪ್ರಕಾಶ್ ಮೂವರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

Advertisements

ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಮಾಜಿ ಖಜಾಂಚಿ ರವಿ ಕೇಜ್ರಿವಾಲ್ ಅವರ ಹೇಳಿಕೆಯನ್ನು ಇಡಿ ತನ್ನ ದೂರಿನಲ್ಲಿ ಉಲ್ಲೇಖಿಸಿದೆ. ಇದರಲ್ಲಿ ಒಮ್ಮೆ ಸಭೆಯಲ್ಲಿ ಅವರು ಕಲ್ಲು ಮತ್ತು ಮರಳು ಗಣಿಗಾರಿಕೆಯಿಂದ ಬರುವ ಹಣವನ್ನು ನೇರವಾಗಿ ಹಸ್ತಾಂತರಿಸುವಂತೆ ಮಿಶ್ರಾ ಅವರಿಗೆ ಸೂಚಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ಭೀಕರ ಮಳೆಗೆ ಇಬ್ಬರು ಬಲಿ- 7 ಜಿಲ್ಲೆಯ ಶಾಲಾ, ಕಾಲೇಜಿಗೆ ರಜೆ

ಜುಲೈ 17 ರಂದು, ಮಿಶ್ರಾ ಬಂಧನಕ್ಕೆ 2 ದಿನಗಳ ಮೊದಲು, ಜೆಎಂಎಂ ಪತ್ರಿಕಾಗೋಷ್ಠಿಯಲ್ಲಿ ಇಡಿ ಸಿಎಂ ಸೊರೆನ್ ಅವರ ಇಮೇಜ್‌ಗೆ ಹಾನಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿತ್ತು.

Live Tv

Advertisements
Exit mobile version