1 ಜೊತೆ ಸಾಕ್ಸ್ ಖರೀದಿಗೆ 85 ಸಾವಿರ ರೂ. ಖರ್ಚು ಮಾಡಿದ ಪಾಪ್ ಗಾಯಕಿ

ವಾಷಿಂಗ್ಟನ್: ಅಮೆರಿಕದ ಖ್ಯಾತ ಗಾಯಕಿ ಜೆನ್ನಿಫರ್ ಲೋಪೇಜ್ ಅವರು ದುಬಾರಿ ಬೆಲೆಯ ಸಾಕ್ಸ್ ಖರೀದಿಸಿ ಈಗ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾರೆ.

ಅಮೇರಿಕಾದ ಖ್ಯಾತ ಗಾಯಕಿ ಜೆನ್ನಿಫರ್ ಲೋಪೇಜ್ 1 ಜೊತೆ ಸಾಕ್ಸ್ ಗಾಗಿ ಬರೋಬ್ಬರಿ 85 ಸಾವಿರ ರೂ. ಗಳನ್ನು ಖರ್ಚು ಮಾಡಿದ್ದಾರೆ. ಈಗ ಆ ಸಾಕ್ಸ್ ಹಾಕಿಕೊಂಡಿರುವ ಫೋಟೋವನ್ನು ತಮ್ಮ ಇನ್‍ ಸ್ಟಾಗ್ರಾಂನಲ್ಲಿ ಹಾಕಿದ್ದು, ಅದಕ್ಕೆ ಇಂದು ನನಗೆ ಹೊಸ ಜೊತೆ ಸಾಕ್ಸ್ ಸಿಕ್ಕಿತ್ತು ಎಂದು ಬರೆದು #ಗುಸ್ಸಿಗ್ಯಾಂಗ್ ಎಂದು ಹ್ಯಾಷ್‍ ಟ್ಯಾಗ್ ಹಾಕಿ ಪೋಸ್ಟ್ ಮಾಡಿದ್ದಾರೆ.

I got a new pair of socks today…🧦 #guccigang

A post shared by Jennifer Lopez (@jlo) on

ಈ ಗುಸ್ಸಿ ಸಾಕ್ಸ್ ನಲ್ಲಿ ಬಿಳಿ ಹರಳುಗಳು ಹೊಂದಿದ್ದು, ಅದಕ್ಕೆ ಬಿಳಿ ಬಣ್ಣದ ಫುರ್ ಟಾಪ್ ಹಾಗೂ ಉದ್ದದ ಟ್ಯೂಲ್ ಸ್ಕರ್ಟ್ ಧರಿಸಿದ್ದಾರೆ. ನಂತರ ಗುಸ್ಸಿ ಸಾಕ್ಸ್ ಧರಿಸಿ ಅದಕ್ಕೆ ನೇರಳೆ ಬಣ್ಣದ ಸ್ಯಾಂಡಲ್ಸ್ ಧರಿಸಿದ್ದಾರೆ. ಇದು 80ರ ದಶಕದ ಫ್ಯಾಶನ್ ಆಗಿದ್ದು, ಜೆನ್ನಿಫರ್ ಈ ಟ್ರೆಂಡ್ ಮತ್ತೆ ಮರುಕಳಿಸಿದ್ದಾರೆ.

ಜೆನ್ನಿಫರ್ ಫ್ಯಾಶನ್ ಮ್ಯಾಗಜೀನ್‍ ಗಳಲ್ಲಿ ಪಾದರಕ್ಷೆಯ ಬಗ್ಗೆ ಹೇಳುತ್ತಾರೆ. ಈ ಹಿಂದೆ ನಡೆದ ಸಂದರ್ಶನದಲ್ಲಿ ಜೆನ್ನಿಫರ್,’ನನಗೆ ಹೀಲ್ಸ್ ಅಥವಾ ತೂಕವಿರುವ ಪಾದರಕ್ಷೆಗಳು ಇಷ್ಟವಿಲ್ಲ. ನನಗೆ ನಯವಾದ, ಸಂಸ್ಕರಿಸಿದ ಪಾದರಕ್ಷೆಗಳು ಇಷ್ಟವಾಗುತ್ತದೆ’ ಎಂದು ತಿಳಿಸಿದ್ದರು.

Leave a Reply

Your email address will not be published. Required fields are marked *