Connect with us

Crime

ಗಂಗಾ ನದಿಯಲ್ಲಿ ಬಿದ್ದ ಜೀಪ್- ಪ್ರಯಾಣಿಕರು ನಾಪತ್ತೆ

Published

on

ಪಾಟ್ನಾ: ಗಂಗಾ ನದಿಗೆ ಜೀಪ್ ಉರುಳಿ ಬಿದ್ದಿದೆ. ಜೀಪ್‍ನಲ್ಲಿದ್ದ ಸುಮಾರು 15 ಮಂದಿ ಪ್ರಯಾಣಿಕರಲ್ಲಿ 10 ಮಂದಿ ನಾಪತ್ತೆಯಾಗಿರುವ ಘಟನೆ ಪಾಟ್ನಾದ ಪೀಪಾಪುಲ್‍ನಲ್ಲಿ ನಡೆದಿದೆ.

ಜೀಪ್ 15 ಮಂದಿ ಪ್ರಯಾಣಿಕರನ್ನು ಹೊತ್ತು ಪೀಪಾ ಸೇತುವೆ ಮೇಲೆ ಸಾಗುತ್ತಿತ್ತು. ಆದರೆ ಆಯತಪ್ಪಿ ನದಿಗೆ ಉರುಳಿಬಿದ್ದಿದೆ. ಈ ವೇಳೆ ಬ್ರಿಡ್ಜ್‍ನ ರೇಲಿಂಗ್ ಮುರಿದು ಅಪಘಾತ ಸಂಭವಿಸಿದೆ.

ಜೀಪ್‍ನಲ್ಲಿ 15 ಮಂದಿ ಪ್ರಯಾಣಿಕರಿದ್ದರು ಎನ್ನಲಾಗುತ್ತಿದೆ. 10 ಮಂದಿ ಪ್ರಯಾಣಿಕರು ಕಾಣುತ್ತಿಲ್ಲ. ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ದೌಡಾಯಿಸಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯವನ್ನು ಮಾಡುತ್ತಿದ್ದಾರೆ. ಜೀಪ್‍ನಲ್ಲಿದ್ದ ಪ್ರಯಾಣಿಕರು ಅಖಿಲ್‍ಪುರ್ ಮೂಲದವರು ಎಂದು ತಿಳಿದು ಬಂದಿದೆ. ಇನ್ನು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Click to comment

Leave a Reply

Your email address will not be published. Required fields are marked *