Connect with us

ಅಡ್ಡಾದಿಡ್ಡಿ ನುಗ್ಗಿದ ಜೀಪ್ – ಬೈಕಿಗೆ ಡಿಕ್ಕಿ, ತಂತಿಯಲ್ಲಿ ನೇತಾಡಿದ ವಿದ್ಯುತ್ ಕಂಬ

ಅಡ್ಡಾದಿಡ್ಡಿ ನುಗ್ಗಿದ ಜೀಪ್ – ಬೈಕಿಗೆ ಡಿಕ್ಕಿ, ತಂತಿಯಲ್ಲಿ ನೇತಾಡಿದ ವಿದ್ಯುತ್ ಕಂಬ

ಮಡಿಕೇರಿ: ಜೀಪಿನ ಬ್ರೇಕ್ ಫೇಲ್ ಆದ ಪರಿಣಾಮ ಜೀಪು ಅಡ್ಡಾ ದಿಡ್ಡಿ ನುಗ್ಗಿ ಬೈಕ್ ಮತ್ತು ಎರಡು ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದಲ್ಲಿ ನಡೆದಿದೆ.

ವಿರಾಜಪೇಟೆ ಪಟ್ಟಣದ ನಿವಾಸಿ ವಾಸು ಜೀಪ್ ಚಾಲನೆ ಮಾಡುತ್ತಿದ್ದಾಗ ಬ್ರೇಕ್ ಫೇಲ್ ಆಗಿದೆ. ಪರಿಣಾಮ ಜೀಪು ಚಾಲಕನ ನಿಯಂತ್ರಣಕ್ಕೆ ಸಿಗದೆ, ಅಡ್ಡಾದಿಡ್ಡಿ ನುಗ್ಗಿದೆ. ಈ ವೇಳೆ ಪಕ್ಕದಲ್ಲಿ ಬರುತ್ತಿದ್ದ ಬೈಕಿಗೆ ಜೀಪು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಚಾಲಕ ಹಸೈನರ್ ಉರುಳಿ ಬಿದ್ದಿದ್ದು, ಚಿಕ್ಕ ಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಗಾಯಗೊಂಡಿರುವ ಬೈಕ್ ಚಾಲಕನನ್ನು ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕಿಗೆ ಡಿಕ್ಕಿ ಹೊಡೆದ ಜೀಪು ಅಷ್ಟಕ್ಕೆ ನಿಲ್ಲದೆ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ವಿದ್ಯುತ್ ಕಂಬ ತುಂಡಾಗಿ ತಂತಿಯಲ್ಲೇ ನೇತಾಡಿದೆ. ಅಲ್ಲಿಂದಲೂ ಮುಂದೆ ನುಗ್ಗಿದ ಜೀಪು ಮತ್ತೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಲ್ಲಿ ನಿಂತಿದೆ. ಆದರೆ ಜೀಪು ಚಾಲಕ ವಾಸು ಚಿಕ್ಕಪುಟ್ಟ ಗಾಯಗಳೊಂದಿಗೆ ಗ್ರೇಟ್ ಎಸ್ಕೇಪ್ ಆಗಿದ್ದಾರೆ.

ಘಟನೆ ಸಂಬಂಧ ವಿರಾಜಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೀಪು ಅಡ್ಡಾ ದಿಡ್ಡಿ ನುಗ್ಗಿ ಬೈಕ್ ಗೆ ಡಿಕ್ಕಿ ಹೊಡೆದಿರುವ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

Advertisement
Advertisement