ನಾನು ರಾಗಿ ಕದ್ದಿಲ್ಲ- ಧರ್ಮಸ್ಥಳದಲ್ಲಿ ಆಣೆ ಮಾಡಿದ ಶಿವಲಿಂಗೇಗೌಡ

Advertisements

ಮಂಗಳೂರು: ನಾನು ರಾಗಿ ಕಳ್ಳ ಅಂದಿದ್ದರು, ಆದರೆ ನಾನು ಏನೂ ಕದ್ದಿಲ್ಲ ಎಂದು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ್ದೇನೆ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ತಿಳಿಸಿದರು.

Advertisements

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನದ ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ರಾಗಿ ಕದ್ದಿರುವ ಬಗ್ಗೆ ನನ್ನ ಮೇಲೆ ಆರೋಪವನ್ನು ಯಾಕೆ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ನಾನು ರೈತರಿಗೆ ರಾಗಿ ಕೊಡಿಸಲು ಸಾಕಷ್ಟು ಹೋರಾಟ ಮಾಡಿದ್ದೇನೆ. ಆದರೆ ನನಗೆ ಈ ಆರೋಪ ಯಾಕೆ ಮಾಡಿದ್ದಾರೆ ಎಂದು ಅವರನ್ನೇ ಕೇಳಬೇಕು. ಬಿಜೆಪಿಯ ರವಿಕುಮಾರ್ ಈ ಆರೋಪ ಮಾಡಿದ್ದಾರೆ. ಹಾಗಾಗಿ ಅವರನ್ನು ಕರೆದಿದ್ದೆ. ಆದರೆ ಅವರು ಬಂದಿಲ್ಲ. ಅವರು ಬೇಕಾದರೆ ಬರಲಿ, ನಾನೇ ಬಂದು ಆಣೆ ಮಾಡಿದ್ದೇನೆ ಎಂದು ತಿಳಿಸಿದರು.

Advertisements

ಹೆಗ್ಗಡೆಯವರ ಜೊತೆ ಈ ಬಗ್ಗೆ ಚರ್ಚೆ ಮಾಡಿಲ್ಲ, ಭೇಟಿ ಮಾಡಿದ್ದೇನೆ. ನಾನು ಇಲ್ಲಿಗೆ ಬಂದಿರುವ ವಿಚಾರ ವರಿಷ್ಠರು ಯಾರ ಗಮನಕ್ಕೂ ತಂದಿದ್ದೇನೆ. ಸ್ಥಳೀಯ ಮುಖಂಡರ ಜೊತೆ ಚರ್ಚೆ ಮಾಡಿ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ನಾಯಕರ ಆರೋಪ: ಧರ್ಮಸ್ಥಳದಲ್ಲಿ ಆಣೆ ಮಾಡಲು ಹೊರಟ ಶಾಸಕ ಕೆ.ಎಂ.ಶಿವಲಿಂಗೇಗೌಡ

ಘಟನೆಯೇನು?: ಆ.8ರಂದು ಅರಸೀಕೆರೆಯಲ್ಲಿ ಶಾಸಕ ಶಿವಲಿಂಗೇಗೌಡ ವಿರುದ್ಧ ನಡೆದ ಪ್ರತಿಭಟನೆ ವೇಳೆ ಬಿಜೆಪಿ ಎಂಎಲ್‍ಸಿ ರವಿಕುಮಾರ್, ಶಿವಲಿಂಗೇಗೌಡರನ್ನು ರಾಗಿ ಕಳ್ಳ, ಸಿಮೆಂಟ್ ಕಳ್ಳ, ಕಬ್ಬಿಣ ಕಳ್ಳ ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಆ.22 ರಂದು ಕೆ.ಎ.ಶಿವಲಿಂಗೇಗೌಡರು ಅರಸೀಕೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ನಾನು ಒಂದು ಕೆಜಿ ರಾಗಿ ಕಳ್ಳತನ ಮಾಡಿಲ್ಲ. ಮಾಡಿದ್ದರೆ ದಾಖಲೆ ಸಮೇತ ಸಾಬೀತು ಮಾಡಲಿ. ಇಲ್ಲ ಧರ್ಮಸ್ಥಳಕ್ಕೆ ಬನ್ನಿ ದೇವರ ಮೇಲೆ ಆಣೆ ಮಾಡೋಣಾ ಎಂದು ಸವಾಲು ಹಾಕಿದ್ದರು. ಇದನ್ನೂ ಓದಿ: ರಾಷ್ಟ್ರಗೀತೆಗೆ ಅಪಮಾನ : ಬರಗೂರು ವಿರುದ್ಧ ಬಿಜೆಪಿಯಿಂದ ದೂರು

Advertisements

Live Tv

Advertisements
Exit mobile version