Wednesday, 24th April 2019

Recent News

ಜೇಬಲ್ಲಿ ದುಡ್ಡಿಲ್ದೇ ದರ್ಶನ್ ಜನರ ಬಳಿ ತಿನ್ನೋಕೆ ಬರೋನು: ಜೆಡಿಎಸ್ ಮುಖಂಡ

ಮಂಡ್ಯ: ನಟ ದರ್ಶನ್ ಜೇಬಲ್ಲಿ ದುಡ್ಡಿಲ್ಲದೆ ಜನರ ಬಳಿ ತಿನ್ನೋಕೆ ಬರೋನು ಎಂದು ಹೇಳುವ ಮೂಲಕ ಸುಮಲತಾ ಬೆಂಬಲಕ್ಕೆ ನಿಂತ ನಟರ ವಿರುದ್ಧ ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಎಂ. ಸಂತೋಷ್ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದಲ್ಲಿ ಚಿತ್ರ ನಟರ ವಿರುದ್ಧ ಜೆಡಿಎಸ್ ನಾಯಕರ ವಾಗ್ದಾಳಿ ಮುಂದುವರಿದಿದೆ. ಸುಮಲತಾ ಬೆಂಬಲಕ್ಕೆ ನಿಂತರುವ ದರ್ಶನ್ ವಿರುದ್ಧ ಜೆಡಿಎಸ್ ಮುಖಂಡರು ನಿಂದಿಸಿದ್ದಾರೆ. ಶ್ರೀರಂಗಪಟ್ಟಣದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಮುಖಂಡರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ದರ್ಶನ್ ದನದ ಚಾಕಣ(ಸ್ಕಿನ್) ತಿಂತಿದ್ದ:
ದರ್ಶನ್ ಜೇಬಲ್ಲಿ ದುಡ್ಡಿಲ್ಲದೆ ಜನರ ಬಳಿ ತಿನ್ನೋಕೆ ಬರೋನು. ಇವರ ಸಿನಿಮಾಗೆ ನಾವು ಹಣ ಕೊಡ್ತೀವಿ. ಅವರು ಎಲ್ಲೆಲ್ಲಿ ಏನೇನು ಕೆಲಸ ಮಾಡಿದ್ದಾರೆ. ದರ್ಶನ್ ಹೋಗಿ ಎಲ್ಲಿ ಚಾಕಣ ತಿಂತಿದ್ದ, ಯಾರಿಗೆ ಟೀ ತಂದು ಕೊಡ್ತಿದ್ದ ಎನ್ನುವುದು ಮೈಸೂರಿನ ಪಡುವಾರಳ್ಳಿ ಜನರಿಗೆ ಗೊತ್ತು. ನಾನು ಆ ಸಂದರ್ಭದಲ್ಲಿ ಎಲ್ ಎಲ್ ಬಿ ಓದುತ್ತಾ ಇದ್ದೆ. ಅವನ ಜೇಬಲ್ಲಿ ದುಡ್ಡಿಲ್ಲದೆ ದನದ ಮಾಂಸದ ಚಾಕಣ ತಿನ್ನೋಕೆ ಬರುತ್ತಿದ್ದನು. ನಿಜವಾಗಲೂ ಅದನ್ನೆಲ್ಲಾ ಹೇಳಬಾರದು ಎಂದು ಸಂತೋಷ್ ಅವರು ದರ್ಶನ್ ಹಾಗೂ ಯಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಮಾತನಾಡಿರುವ ಶಾಸಕ ರವೀಂದ್ರ ಶ್ರೀಕಂಠಯ್ಯ, ಅಂಬರೀಶ್ ಹಾಗೂ ಯಶ್ ವಿರುದ್ಧ ಹರಿಹಾಯ್ದಿದ್ದಾರೆ. “ಅಂಬರೀಶ್‍ಗೆ ಅನೇಕ ವರ್ಷಗಳ ಕಾಲ ಅಧಿಕಾರ ನೀಡಿದ್ದೆವು. ಆದರೆ ಜಿಲ್ಲೆಗೆ ಏನ್ ಮಾಡಿದ್ದಾರೆ. ಮೆಡಿಕಲ್ ಕಾಲೇಜು ಐದಾರು ಜನರ ಪ್ರಯತ್ನದಿಂದ ಬಂದಿರೋದೆ ಹೊರತು ಒಬ್ಬರ ಶ್ರಮದಿಂದಲ್ಲ. ಸಮಾಜನ ತಿಳಿ ಮಾಡಲು ಸಹಕರಿಸಬೇಕಾದ ಜನ ನೀವು. ನೀವುಗಳೇ ಜನರನ್ನ ತಪ್ಪುದಾರಿಗೆ ಎಳೆಯುವಂತೆ ನಡೆದುಕೊಳ್ಳುವುದು ಪ್ರಚೋದನೆ ಮಾಡುವುದು ನಿಮಗೆ ಸಿಂಧುವಲ್ಲ” ಎಂದು ಚಿತ್ರನಟರ ವಿರುದ್ಧ ಹರಿಹಾಯ್ದಿದ್ದಾರೆ.

One thought on “ಜೇಬಲ್ಲಿ ದುಡ್ಡಿಲ್ದೇ ದರ್ಶನ್ ಜನರ ಬಳಿ ತಿನ್ನೋಕೆ ಬರೋನು: ಜೆಡಿಎಸ್ ಮುಖಂಡ

  1. ನಿಮ್ಮಂತವರೇ ಅವನ ಮುಖವಾಡ ಕಲಚಬೇಕು, ನಾವೆಲ್ಲಾ ಹೇಳಿದ್ರೆ ನಮ್ಮ ವಿರುದ್ಧ ನಮ್ಮವರೇ ತಿರುಗಿಬಿಳುತ್ತಾರೆ,ಅಂಥವರನ್ನು ಬೆಳೆಸಬಾರದು.

Leave a Reply

Your email address will not be published. Required fields are marked *