Tuesday, 20th November 2018

Recent News

ಬಿನ್ನಿಪೇಟೆ ಬೈಎಲೆಕ್ಷನ್ ಪ್ರಚಾರದ ವೇಳೆ ಮಾರಾಮಾರಿ- ಕೈ ಕಾರ್ಯಕರ್ತನ ಮೇಲೆ ಜೆಡಿಎಸ್‍ನವರಿಂದ ಹಲ್ಲೆ

ಬೆಂಗಳೂರು: ಬಿಬಿಎಂಪಿಯ ಬಿನ್ನಿಪೇಟೆ ವಾರ್ಡ್‍ಗೆ ಉಪ ಚುನಾವಣೆ ನಡೆಯುತ್ತಿದ್ದು, 7 ಗಂಟೆಗೆ ಮತದಾನ ಆರಂಭವಾಗಿದೆ.

ಆದ್ರೆ ಈ ಮೊದಲು ಅಂದರೆ ನಿನ್ನೆ ರಾತ್ರಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಜೆಡಿಎಸ್ ಕಾರ್ಯಕರ್ತರಿಂದ ಹಲ್ಲೆ ಆರೋಪ ಕೇಳಿಬಂದಿದೆ. ಬೆಂಗಳೂರಿನ ಗಾಂಧಿನಗರ ವಿಧಾನಸಭೆ ವ್ಯಾಪ್ತಿಯ ಬಿನ್ನಿಪೇಟೆ ವಾರ್ಡ್‍ನ ಉಪಚುನಾವಣೆ ಇಂದು ನಡೆಯಲಿದ್ದು, ಕೆ.ಪಿ.ಅಗ್ರಹಾರದಲ್ಲಿ ತಡರಾತ್ರಿ ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಕುಮಾರ್ ಪ್ರಚಾರ ಕಾರ್ಯದಲ್ಲಿ ತೋಡಗಿದ್ದರು. ಈ ವೇಳೆ ಸ್ಥಳಕ್ಕೆ ಹತ್ತಕ್ಕೂ ಹೆಚ್ಚು ಕಾರ್ಯಕರ್ತರು ಜೆಡಿಎಸ್‍ಗೆ ಜೈ ಅನ್ನೋವಂತೆ ಬೆದರಿಸಿದ್ರು.

ಸುರೇಶ್ ಇದಕ್ಕೆ ಬಗ್ಗದೇ ಇದ್ದಾಗ, ಹಣ ಹಂಚುತ್ತೀದಿಯ ಅಂತಾ ಆರೋಪಿಸಿ ಹಲ್ಲೆ ಮಾಡಿದ್ದಾರೆ ಅಂತಾ ಸುರೇಶ್ ಆರೋಪಿಸಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಸುರೇಶ್ ಚಿಕಿತ್ಸೆ ಪಡೆಯುತ್ತಿದ್ದು, ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಗಾಂಧಿನಗರ ವಿಧಾನಸಭಾ ವ್ಯಾಪ್ತಿಯಲ್ಲಿರುವ ಈ ವಾರ್ಡ್‍ನ ಕಾರ್ಪೋರೇಟರ್ ಮಹದೇವಮ್ಮ ಹೃದಯಾಘಾತದಿಂದ ನಿಧನರಾಗಿದ್ರು. ಮಹಾದೇವಮ್ಮ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು ಒಟ್ಟು 37 ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದೆ. ಕಾಂಗ್ರೆಸ್‍ನಿಂದ ವಿದ್ಯಾ ಶಶಿಕುಮಾರ್, ಜೆಡಿಎಸ್‍ನಿಂದ ಮಹದೇವಮ್ಮ ಪುತ್ರಿ ಐಶ್ವರ್ಯ ಹಾಗೂ ಬಿಜೆಪಿಯಿಂದ ಜಿ.ಚಾಮುಂಡೇಶ್ವರಿ ಕಣದಲ್ಲಿದ್ದಾರೆ. ವಾರ್ಡ್ ನಲ್ಲಿ ಒಟ್ಟು 34,582 ಮತದಾರರಿದ್ದು, 17,746 ಪುರುಷ ಮತ್ತು 16826 ಮಹಿಳಾ ಮತದಾರರಿದ್ದಾರೆ. ಇದೇ ತಿಂಗಳ 20 ರಂದು ಇದರ ಮತ ಎಣಿಕೆ ನಡೆಯಲಿದೆ.

Leave a Reply

Your email address will not be published. Required fields are marked *