Connect with us

ಐಇಡಿ ಬ್ಲಾಸ್ಟ್- ಬಸ್‍ನಲ್ಲಿದ್ದ ಮೂವರು ಯೋಧರು, ಓರ್ವ ಪೊಲೀಸ್ ಹುತಾತ್ಮ

ಐಇಡಿ ಬ್ಲಾಸ್ಟ್- ಬಸ್‍ನಲ್ಲಿದ್ದ ಮೂವರು ಯೋಧರು, ಓರ್ವ ಪೊಲೀಸ್ ಹುತಾತ್ಮ

– ಒಟ್ಟು 14 ಜನರಿಗೆ ಗಾಯ

ರಾಯ್‍ಪುರ: ಛತ್ತಿಸ್‍ಗಡದಲ್ಲಿ ನಕ್ಸಲರು ಐಇಡಿ ಸ್ಫೋಟಿಸಿದ್ದು, ಮೂವರು ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್(ಡಿಆರ್ ಜಿ) ಯೋಧರು ಹಾಗೂ ಓರ್ವ ಪೊಲೀಸ್ ಹುತಾತ್ಮರಾಗಿದ್ದಾರೆ. ಅಲ್ಲದೆ 14 ಭದ್ರತಾ ಸಿಬ್ಬಂದಿಗೆ ಗಂಭೀರ ಗಾಯಗಳಾಗಿವೆ.

ಛತ್ತಿಸ್‍ಗಡದ ನಾರಾಯಣಪುರ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ನಕ್ಸಲರು ನಡೆಸಿದ ಐಇಡಿ ಬ್ಲಾಸ್ಟ್ ನಿಂದಾಗಿ ಮೂವರು ಯೋಧರು ಹಾಗೂ ಓರ್ವ ಪೊಲೀಸ್ ಹುತಾತ್ಮರಾಗಿದ್ದಾರೆ. 14 ಭದ್ರತಾ ಸಿಬ್ಬಂದಿಗೆ ಗಂಭೀರ ಗಾಯಗಳಾಗಿವೆ. ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಐಜಿ ಬಸ್ತಾರ್.ಪಿ.ಸುಂದರ್‍ರಾಜ್ ತಿಳಿಸಿದ್ದಾರೆ.

ಬಸ್‍ನಲ್ಲಿ ಒಟ್ಟು 27 ಡಿಆರ್ ಜಿ ಸಿಬ್ಬಂದಿ ನಾರಾಯಣಪುರದ ಕಡೇನಾರ್ ನಿಂದ ಕನ್ಹಾರ್ ಗಾಂವ್‍ಗೆ ತೆರಳುತ್ತಿದ್ದಾಗ ನಕ್ಸಲರು ಐಇಡಿ ಬ್ಲಾಸ್ಟ್ ಮಾಡಿದ್ದಾರೆ ಎಂದು ಐಟಿಬಿಪಿ ಮಾಹಿತಿ ನೀಡಿದೆ. ಐಟಿಬಿಪಿಯ 45ನೇ ಬೆಟಾಲಿಯನ್ ಸಿಬ್ಬಂದಿಗೆ ಗಾಯಗಳಾಗಿದ್ದು, ಘಟನೆ ನಡೆದ ಇಡೀ ಪ್ರದೇಶವನ್ನು ಸುತ್ತುವರಿದು ಹುಡುಕಾಟ ನಡೆಸಲಾಗುತ್ತಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Advertisement
Advertisement
Advertisement