Connect with us

International

ರಾಜೀನಾಮೆಗೆ ಮುಂದಾದ ಜಪಾನ್ ಪ್ರಧಾನಿ ಶಿಂಜೊ ಅಬೆ

Published

on

ಟೋಕಿಯೊ: ಜಪಾನಿನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆ ಪಡೆದಿರುವ ಶಿಂಜೊ ಅಬೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಜಪಾನ್ ಸಾರ್ವಜನಿಕ ಪ್ರಸಾರ ವಾಹಿನಿ ಎನ್‍ಎಚ್‍ಕೆ ವರದಿ ಮಾಡಿದೆ.

ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಸರ್ಕಾರಕ್ಕೆ ಸಮಸ್ಯೆ ಆಗುವುದನ್ನು ತಪ್ಪಿಸಲು ಬಯಸಿ ಶಿಂಜೊ ಅಬೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಂದಹಾಗೇ ಅಬೆ ಅವರ ಆಡಳಿತಾವಧಿ 2021 ಸೆಪ್ಟೆಂಬರ್ ಗೆ ಕೊನೆಯಾಗಲಿದೆ.

ಶಿಂಜೊ ಅಬೆ ಹಲವು ವರ್ಷಗಳಿಂದ ಅಲ್ಸರೇಟಿವ್ ಕೊಲೈಟಿಸ್ (ದೊಡ್ಡ ಕರಳಿನ ಭಾಗದಲ್ಲಿ ಅಲ್ಸರ್)ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇತ್ತೀಚೆಗಷ್ಟೇ ಒಂದು ವಾರದಲ್ಲಿ ಎರಡು ಬಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದರು. ಈ ನಡೆ ಅವರು ತಮ್ಮ ಪದವಿಯಲ್ಲಿ ಮುಂದುವರಿಯುವ ಕುರಿತು ಅನುಮಾನಕ್ಕೆ ಕಾರಣವಾಗಿತ್ತು.

ಇಂದು ಸಂಜೆ ಈ ಕುರಿತು ಇಂದು ಸಂಜೆ 5 ಗಂಟೆಗೆ ಅಧಿಕೃತ ಪತ್ರಿಕಾಗೋಷ್ಠಿ ನಡೆಯುವ ಸಾಧ್ಯತೆ ಇದೆ. ಉಳಿದಂತೆ ಕಳೆದ ಸೋಮವಾರದಂದು ಜಪಾನ್ ಪ್ರಧಾನಿಯಾಗಿ ಶಿಂಜೊ ಅಬೆ ಅವರು ದೀರ್ಘ ಕಾಲ ಸೇವೆ ಸಲ್ಲಿಸಿದ ದಾಖಲೆ ಬರೆದರು. ಈ ಹಿಂದೆ ಶಿಂಜೊ ಅಬೆ ಅವರ ದೊಡ್ಡಪ್ಪ ಐಸಾಕು ಸಾಟೊ ಅವರು 1964 ರಿಂದ 1972ರ ವರೆಗೂ 2798 ದಿನ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು. ಈ ದಾಖಲೆಯನ್ನು ಶಿಂಜೊ ಮುರಿದ್ದರು. 2012ರಿಂದ ಈವರೆಗೂ ಶಿಂಜೊ ಅಧಿಕಾರದಲ್ಲಿದ್ದು, ಸೋಮವಾರಕ್ಕೆ 2,799 ದಿನಗಳನ್ನು ಪೂರೈಸಿದ್ದರು. ಉಳಿದಂತೆ ಮುಂದಿನ ತಿಂಗಳು ಶಿಂಜೊ ಅಬೆ ತಮ್ಮ 66ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

ಕೊರೊನಾ ನಿರ್ವಹಣೆ ಹಾಗೂ ಪಕ್ಷದ ನಾಯಕರು ನಡೆಸಿದ ಹಗರಣಗಳನ್ನು ಉತ್ತಮವಾಗಿ ನಿಭಾಯಿಸದ ಹಿನ್ನೆಲೆಯಲ್ಲಿ ಅವರ ಬೆಂಬಲದ ಸಂಖ್ಯೆ ಸುಮಾರು 8 ವರ್ಷಗಳ ಅವಧಿಯಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿತ್ತು. ಅಬೆ ತಮ್ಮ ಆಡಳಿತ ಅವಧಿಯಲ್ಲಿ ಸಶಸ್ತ್ರ ಪಡೆಗಳ ಖರ್ಚು ಹಾಗೂ ಅವುಗಳ ಪಾತ್ರವನ್ನು ವಿಸ್ತರಿಸಿದ್ದರು. ಅಲ್ಲದೇ ಅವರ ಶಾಂತಿ ಮಂತ್ರದ ಕನಸು ಸಾರ್ವಜನಿಕ ಅಭಿಪ್ರಾಯದಿಂದಾಗಿ ದೂರವಾಗಿತ್ತು ಎನ್ನಲಾಗಿದೆ. 2007 ರಲ್ಲಿ ಸರ್ಕಾರದಲ್ಲಾದ ಹಗರಣ ಹಾಗೂ ಭಾರೀ ಚುನಾವಣಾ ನಷ್ಟವನ್ನುಂಟು ಮಾಡಿದ ಕಾರಣ ಅವರು ಏಕಾಏಕಿ ರಾಜೀನಾಮೆ ನೀಡಿದ್ದರು.

Click to comment

Leave a Reply

Your email address will not be published. Required fields are marked *