Connect with us

International

ನೋಡ ನೋಡ್ತಿದ್ದಂತೆ ದಿಢೀರನೇ ಕುಸಿದು ಬಿತ್ತು ಶೇರು ವಿನಿಮಯ ಕೇಂದ್ರದ ಮಹಡಿ

Published

on

ಜಕಾರ್ತ: ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿರುವ ಶೇರು ವಿನಿಮಯ ಕೇಂದ್ರದ ಮಳಿಗೆಯೊಂದು ಇದ್ದಕ್ಕಿದ್ದಂತೆ ಕುಸಿದು 77ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸೋಮವಾರ ಬಳಗ್ಗೆ ಈ ದುರ್ಘಟನೆ ಸಂಭವಿಸಿದ್ದು, ಎರಡನೇ ಮಳಿಗೆ ಕುಸಿಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶೇರು ವಿನಿಮಯ ಕೇಂದ್ರವನ್ನು ವೀಕ್ಷಿಸಲು ಬಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆ.

ಕೂಡಲೇ ಎಲ್ಲರನ್ನೂ ಸ್ಟ್ರೆಚರ್ ಸಾಗಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವು ಮಂದಿಯ ಕಾಲು ಮತ್ತು ಭುಜಕ್ಕೆ ಪೆಟ್ಟಾಗಿದೆ. 2000ನೇ ಇಸ್ವಿಯಲ್ಲಿ ಉಗ್ರರ ಆತ್ಮಹತ್ಯೆ ಬಾಂಬ್ ದಾಳಿಯ ಬಳಿಕ ಇಲ್ಲಿ ನಡೆದ ಎರಡನೇ ಅತಿ ದೊಡ್ಡ ದುರಂತ ಇದಾಗಿದೆ. ಮೊದಲ ಮಹಡಿಯಲ್ಲಿ ಈ ದುರಂತ ಸಂಭವಿಸಿದ್ದು. ಕಾಂಕ್ರೀಟ್ ಕಲ್ಲುಗಳು ಬಿದ್ದಿದ್ದು, ನೀರಿನ ಪೈಪ್‍ಗಳು ಒಡೆದು ಹೋಗಿವೆ.

ಈ ಘಟನೆ ನಡೆದು ಮಧ್ಯಾಹ್ನದ ಬಳಿಕ  ಶೇರು ವಿನಿಮಯ ಕೇಂದ್ರದಲ್ಲಿ ಎಂದಿನಂತೆ ವ್ಯವಹಾರ ನಡೆದಿದೆ.

https://www.youtube.com/watch?v=mqltuw7ban8