Connect with us

ಲಾಠಿಯಲ್ಲಿ ಹೊಡೆಯಬೇಡಿ- ನಟ ಜಗ್ಗೇಶ್ ಪೊಲೀಸರಿಗೆ ಮನವಿ

ಲಾಠಿಯಲ್ಲಿ ಹೊಡೆಯಬೇಡಿ- ನಟ ಜಗ್ಗೇಶ್ ಪೊಲೀಸರಿಗೆ ಮನವಿ

ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಿಸಲು ರಾಜ್ಯಾದ್ಯಂತ 14 ದಿನಗಳ ಕಾಲ ಲಾಕ್‍ಡೌನ್ ಅನ್ನು ರಾಜ್ಯ ಸರ್ಕಾರ ಘೋಷಿಸಿದೆ. ಈ ಕುರಿತಾಗಿ  ಸ್ಯಾಂಡಲ್‌ವುಡ್ ನಟ   ಪೊಲೀಸ್ ಇಲಾಖೆ ಮುಖ್ಯಸ್ಥರಿಗೆ ಮನವಿಯೊಂದನ್ನು ಮಾಡಿ ಟ್ವೀಟ್ ಮಾಡಿದ್ದಾರೆ.

ರಾಜ್ಯದ ಆರಕ್ಷಕ ಇಲಾಖೆಯ ಮುಖ್ಯಸ್ಥರಿಗೆ ವಿನಂತಿ. ಸರ್ಕಾರ ಹಾಗೂ ತಮ್ಮ ಆದೇಶ ಪಾಲಿಸದವರಿಗೆ ದಂಡ ಹಾಕಿ ವಾಹನ ಜಪ್ತಿ ಮಾಡಿದರೆ ತೊಂದರೆ ಇಲ್ಲ. ಆದರೆ ನಿರ್ದಯವಾಗಿ ಲಾಠಿಯಲ್ಲಿ ಹೊಡೆಯಬೇಡಿ. ಯುವಕರಾದರೆ ಪರವಾಗಿಲ್ಲಾ ತಡೆಯುತ್ತಾರೆ. ಆದರೆ ವಯಸ್ಸಾದವರು ಪಾಪ ಯಾವ ಕಾಯಿಲೆ ಇರುತ್ತದೆ ನಿಮಗೇನು ತಿಳಿದಿರುತ್ತದೆ. ಕೆಲ ಅಧಿಕಾರಿಗಳು ಒಂದು ಏಟುಕೊಟ್ಟು ಭಯಪಡಿಸುವ ಬದಲು ಪ್ರಾಣಹೋಗುವಂತೆ ಹೊಡೆಯುತ್ತಾರೆ ಎಂದು ಟ್ವೀಟ್ ಮಡುವ ಮೂಲಕವಾಗಿ ಮನವಿ ಮಾಡಿದ್ದಾರೆ.

ಈ ಹಾಳಾದ ಕೊರೊನಾ ಮನುಕುಲದ ಅನ್ನ ದುಡಿಮೆ ನೆಮ್ಮದಿಯನ್ನು ಕಸಿದಿದೆ. ಮನುಷ್ಯರಾಗಿ ನಾವು ಮನುಷ್ಯತ್ವ ಪಾಲಿಸುವ. ಜನತೆಯಲ್ಲಿ ಒಂದು ಮನವಿ, ಈ ರೋಗ ಮನುಕುಲದ ಸಾವಿಗಾಗಿಯೇ ಬಂದಿದೆ. ದಯಮಾಡಿ ಸ್ವಲ್ಪ ದಿನ ವೈದ್ಯಲೋಕದ ಮಾತಿನಂತೆ ಕೆಲ ತಿಂಗಳು ಎಚ್ಚರವಾಗಿ ಇದ್ದುಬಿಡಿ ಎಂದು ಜಾಗೃತಿ ಮೂಡಿಸುವುದರ ಜೊತೆಗೆ ಮನವಿಯನ್ನು ಮಾಡಿದ್ದಾರೆ.

Advertisement
Advertisement