Connect with us

Bollywood

ಮರ್ಡರ್ 2 ಗರ್ಲ್ ಟಾಪ್‍ಲೆಸ್ ಫೋಟೋ

Published

on

ಮುಂಬೈ: ಮರ್ಡರ್ 2 ಗರ್ಲ್ ಜಾಕ್ವೆಲಿನ್ ಫರ್ನಾಂಡೀಸ್ ಟಾಪ್‍ಲೆಸ್ ಫೋಟೋ ಶೇರ್ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಟಾಪ್‍ಲೆಸ್ ಆಗಿರುವ ಕುಳಿತ ಕಪ್ಪು ಬಿಳುಪಿನ ಫೋಟೋ ಪಡ್ಡೆ ಹೈಕಳ ಹಾರ್ಟ್ ನಲ್ಲಿ ಮಿಂಚು ಹರಿಸಿದೆ. ಫೋಟೋಗೆ ಸಾವಿರಾರು ಕಮೆಂಟ್ ಗಳು ಬಂದಿದ್ದು, ಸೆಕ್ಸಿ ಅಂತ ಕಮೆಂಟ್ ಮಾಡುತ್ತಿದ್ದಾರೆ. ಫೋಟೋ ಶೇರ್ ಮಾಡಿರುವ ಜಾಕ್ವೆಲಿನ್ ‘ತುಂಬಾ ತುಂಬಾ ದೂರ’ ಎಂದು ಬರೆದುಕೊಂಡಿದ್ದಾರೆ.

ಶ್ರೀಲಂಕಾ ಮೂಲದ ಜಾಕ್ವೆಲಿನ ಮೊದಲ ಸಿನಿಮಾದಲ್ಲಿ ತಮ್ಮ ಗ್ಲ್ಯಾಮರ್ ಮೂಲಕ ಯುವ ಮನಸ್ಸುಗಳ ಕನಸಿನ ರಾಣಿ ಆಗಿದ್ದರು. ಮರ್ಡರ್ 3 ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿರುವ ಜಾಕ್ವೆಲಿನ್ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಜಾಕ್ವೆಲಿನ್ ತಮ್ಮ ಹಾಟ್ ಫೋಟೋಗಳಿಂದಲೇ 4 ಕೋಟಿಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ.

ಜಾಕ್ವೆಲಿನ್ ಟಾಪ್‍ಲೆಸ್ ಫೋಟೋ ಹಂಚಿಕೊಳ್ಳುತ್ತಿರೋದು ಇದೇ ಮೊದಲೇನಲ್ಲ. ಕೆಲ ದಿನಗಳ ಹಿಂದೆ ಇನ್‍ಸ್ಟಾಗ್ರಾಂನಲ್ಲಿ 4.6 ಕೋಟಿ ಫಾಲೋವರ್ಸ್ ಹೊಂದಿದ ಖುಚಿಯಲ್ಲಿ ಎದೆ ಭಾಗಕ್ಕೆ ಹೂಗುಚ್ಛ ಹಿಡಿದುಕೊಂಡು ಪೋಸ್ ನೀಡಿರೋ ಫೋಟೋ ಹಂಚಿಕೊಂಡಿದ್ದರು.

Click to comment

Leave a Reply

Your email address will not be published. Required fields are marked *

www.publictv.in