Connect with us

Bengaluru City

10 ವರ್ಷದ ಪ್ರೀತಿಯನ್ನು ವಿವರಿಸಿದ ರಾಧಿಕಾ

Published

on

ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಪ್ರೇಮಿಗಳ ಹಬ್ಬದ ದಿನದಂದು ತಮ್ಮ 10 ವರ್ಷದ ಪ್ರೀತಿಯನ್ನು ವಿವರಿಸಿದ್ದಾರೆ.

ರಾಧಿಕಾ ಅವರು ತಮ್ಮ ಇನ್‍ಸ್ಟಾದಲ್ಲಿ ಯಶ್ ಜೊತೆಗಿರುವ 8 ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ಈ ಎಂಟು ಫೋಟೋದಲ್ಲಿ ಯಶ್ ಹಾಗೂ ರಾಧಿಕಾ ತಮ್ಮ ಮಗಳು ಐರಾಳ ಕೈಯನ್ನು ಹಿಡಿದುಕೊಂಡಿರುವ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ.

ಈ ಫೋಟೋಗಳನ್ನು ಪೋಸ್ಟ್ ಮಾಡಿದ ರಾಧಿಕಾ ಅದಕ್ಕೆ, “ಇಂದು ನಮ್ಮ 10ನೇ ವರ್ಷದ ಪ್ರೇಮಿಗಳ ದಿನ. 8 ವರ್ಷದ ಫೋಟೋಗಳು ಇದಾಗಿದ್ದು, ಮೊದಲ ಹಾಗೂ ಎರಡನೇ ವರ್ಷದ ಫೋಟೋ ಪೋಸ್ಟ್ ಮಾಡಲು ಆಗಲಿಲ್ಲ. ಆದರೆ ಇದರಲ್ಲಿ ನನ್ನ ಫೇವರೇಟ್ ಫೋಟೋ ಯಾವುದು ಎಂದು ಹೇಳುವುದು ಕಷ್ಟವಾಗುವುದಿಲ್ಲ. ಐರಾಳ ಕೈ ಹಿಡಿದುಕೊಂಡು ನಿಂತಿರುವ ಫೋಟೋ ನನ್ನ ಫೇವರೇಟ್. ಪ್ರೇಮಿಗಳ ದಿನದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

ಡಿಸೆಂಬರ್ 9, 2016ರಂದು ಯಶ್ ಹಾಗೂ ರಾಧಿಕಾ ಪಂಡಿತ್ ಹಸೆಮಣೆ ಏರಿದ್ದರು. ಇಬ್ಬರ ವಿವಾಹ ಸಮಾರಂಭಕ್ಕಾಗಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಐತಿಹಾಸಿಕ ಸೋಮನಾಥೇಶ್ವರ ದೇವಸ್ಥಾನದ ಸೆಟ್ ನಿರ್ಮಾಣವಾಗಿತ್ತು. ಅಲ್ಲದೆ ಒಂದು ಸಾವಿರಕ್ಕೂ ಹೆಚ್ಚು ತಾವರೆ ಹೂ, ಸೇವಂತಿ ಹೂ, ನಂದಿ ಬಟ್ಟಲು ಹೂ, ಮೈಸೂರು ಮಲ್ಲಿಗೆ ಹೂ, ಸುಗಂಧ ರಾಜ ಹೂಗಳಿಂದ ಅಲಂಕಾರಗೊಂಡಿದ್ದ ಮದುವೆ ಮಂಟಪದಲ್ಲಿ ರಾಧಿಕಾ ಅವರಿಗೆ ಯಶ್ ತಾಳಿ ಕಟ್ಟಿದ್ದರು.

ರಾಧಿಕಾ 2018 ಡಿಸೆಂಬರ್ 2ರಂದು ಐರಾಳಿಗೆ ಜನ್ಮ ನೀಡಿದ್ದರು. ಅಲ್ಲದೆ ಡಿಸೆಂಬರ್ ನಲ್ಲಿ ಮಗಳ ಮೊದಲ ಹುಟ್ಟುಹಬ್ಬವನ್ನು ಯಶ್ ಹಾಗೂ ರಾಧಿಕಾ ಅದ್ಧೂರಿಯಾಗಿ ಆಚರಿಸಿದ್ದರು. ಅಕ್ಟೋಬರ್ ತಿಂಗಳಿನಲ್ಲಿ ರಾಧಿಕಾ ಎರಡನೇ ಬಾರಿ ತಾಯಿಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದರು.