Connect with us

Dakshina Kannada

ಬಶೀರ್ ಹತ್ಯೆಯಲ್ಲಿ ನಳಿನ್ ಕೈವಾಡ ಇದೆಯೇ? ಹೀಗೆಂದು ನಾನು ಹೇಳಿಕೆ ನೀಡಲ್ಲ: ರಮಾನಾಥ ರೈ

Published

on

ಮಂಗಳೂರು: ಸುರತ್ಕಲ್ ಸಮೀಪದ ಕಾಟಿಪಳ್ಳದ ದೀಪಕ್ ರಾವ್ ಹತ್ಯೆ ವಿಚಾರದಲ್ಲಿ ತನ್ನ ಪಾತ್ರವಿದೆಯೆಂದು ಸಂಸದ ನಳಿನ್ ಕುಮಾರ್ ಹೇಳಿದ್ದರು. ಹಾಗಾದ್ರೆ ಬಶೀರ್ ಹತ್ಯೆಯಲ್ಲಿ ನಳಿನ್ ಕುಮಾರ್ ಪಾತ್ರ ಇದೆಯೇ ಅಂತಾ ನಾನು ಕೇಳಬಹುದೇ ಎಂದು ಸಚಿವ ರಮಾನಾಥ ರೈ ಹೇಳಿದ್ದಾರೆ.

ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವ ರಮಾನಾಥ ರೈ, ದೀಪಕ್ ಹತ್ಯೆಯಾದಾಗ ದೆಹಲಿಯಲ್ಲಿದ್ದ ನಳಿನ್, ಹತ್ಯೆ ಪ್ರಕರಣದಲ್ಲಿ ನನ್ನ ಹೆಸರನ್ನು ಹೇಳಿದ್ದರು. ಹಾಗಾದ್ರೆ ಬಶೀರ್ ಹತ್ಯೆಯಲ್ಲಿ ನಳಿನ್ ಕೈವಾಡ ಇದೆಯೇ? ಹೀಗಂತ ಕೆಟ್ಟ ಹೇಳಿಕೆ ನಾನು ನೀಡುವುದಿಲ್ಲ. ಇವರ ಮೇಲೆ ಆರೋಪ ಬಂದಾಗ ನೋವಾಗುತ್ತಂತೆ. ಹಾಗಾದ್ರೆ ಇಲ್ಲಿನ ಎಲ್ಲಾ ಕೊಲೆಗಳಿಗೂ ನಾನೇ ಕಾರಣನಾ? ಎಂದು ಪ್ರಶ್ನಿಸಿದ ಅವರು, ನನಗೆ, ನನ್ನ ಕುಟುಂಬದವರಿಗೆ ನೋವಾಗುವುದಿಲ್ಲವೇ ಅಂತ ಪ್ರಶ್ನಿಸಿದ್ರು.  ಇದನ್ನೂ ಓದಿ:  ಕರಾವಳಿಯಲ್ಲಿ ಹಿಂದೂಗಳು ಹತ್ಯೆ ಮಾಡ್ತಿದ್ದಾರೆ- ಸಿಎಂ ಎದುರೇ ರೈ ವಿವಾದಾತ್ಮಕ ಹೇಳಿಕೆ

ಕುಮಾರಸ್ವಾಮಿಯವರು ದೀಪಕ್ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಕಾರ್ಪೋ ರೇಟರ್ ಕೈವಾಡ ಇದೆಯೆಂದು ಹೇಳಿದಾಗಲೂ ಇವರಿಗೆ ನೋವಾಗಿದ್ಯಂತೆ. ಇದಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾದ್ರೆ ಇಲ್ಲಿ ನಡೆದ ಎಲ್ಲ ಕೊಲೆಗಳಿಗೆ ನನ್ನ ಹೆಸರನ್ನು ಹೇಳ್ತಾ ಬಂದಿದ್ದಾರೆ. ಇದರಿಂದ ನನಗೆ ನೋವಾಗುವುದಿಲ್ಲವೇ? ನಾನು ಕೂಡ, ದೇವರಲ್ಲಿ ಬೇಡಿಕೊಂಡಿದ್ದೇನೆ. ನನ್ನ ವಿರುದ್ಧ ಅಪಪ್ರಚಾರ ಮಾಡಿದವರಿಗೆ ಬುದ್ಧಿ ಕಲಿಸೆಂದು ಪ್ರಾರ್ಥಿಸಿದ್ದೇನೆ ಅಂತಾ ಹೇಳಿದರು. ಇದನ್ನೂ ಓದಿ: ದೀಪಕ್ ಹತ್ಯೆ ನಡೆದ ರಾತ್ರಿ ಮಂಗ್ಳೂರಿನಲ್ಲಿ ವ್ಯಾಪಾರಿಯ ಮೇಲೆ ಮಾರಣಾಂತಿಕ ಹಲ್ಲೆ: ಸಿಸಿಟಿವಿಯಲ್ಲಿ ಸೆರೆ

ಇದನ್ನೂ ಓದಿ: ದೀಪಕ್ ರಾವ್, ಬಶೀರ್ ಮನೆಗೆ ಸಿಎಂ ಭೇಟಿ- ದೀಪಕ್ ರಾವ್ ತಮ್ಮನಿಗೆ ಎಂಆರ್ ಪಿಎಲ್ ನಲ್ಲಿ ಕೆಲಸ ನೀಡುವಂತೆ ಸೂಚನೆ