Sunday, 25th August 2019

Recent News

ಮದ್ವೆಯಾಗಲು ಚಿತ್ರರಂಗ ಬಿಡುತ್ತಿದ್ದಾರಾ ಅನುಷ್ಕಾ ಶೆಟ್ಟಿ?

ಹೈದರಾಬಾದ್: ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಮದುವೆಯಾಗಲು ಚಿತ್ರರಂಗದಿಂದ ದೂರ ಹೋಗುತ್ತಿದ್ದಾರೆ ಎಂಬ ಮಾತುಗಳು ತೆಲುಗು ಇಂಡಸ್ಟ್ರಿಯಲ್ಲಿ ಹರಿದಾಡುತ್ತಿದೆ.

ಅನುಷ್ಕಾ ಶೆಟ್ಟಿ ಸಿನಿಮಾ ಬಿಡುಗಡೆಯಾಗಿ ಒಂದು ವರ್ಷ ಆಗಿದೆ. ಅಲ್ಲದೇ ಅನುಷ್ಕಾ ಈಗ ಯಾವುದೇ ಚಿತ್ರದ ಚಿತ್ರೀಕರಣಕ್ಕೆ ಹೋಗುತ್ತಿಲ್ಲ ಹಾಗೂ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ‘ಬಾಹುಬಲಿ ದಿ ಕನ್‍ಕ್ಲೂಷನ್’ ಸಿನಿಮಾ ನಂತರ ಅನುಷ್ಕಾ ‘ಭಾಗಮತಿ’ ಚಿತ್ರದಲ್ಲಿ ನಟಿಸಿದ್ದರು. ಆದಾದ ಬಳಿಕ ಅವರ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ.

ಅನುಷ್ಕಾ ಶೆಟ್ಟಿ ಕುಟುಂಬದವರು ತಮ್ಮ ಮಗಳಿಗೆ ಮದುವೆ ಮಾಡಿಸಲು ನಿರ್ಧರಿಸಿದ್ದಾರೆ. ಅನುಷ್ಕಾ ಅವರ ಕುಟುಂಬದವರು ಈಗಾಗಲೇ ಮಗಳಿಗೆ ಹುಡುಗವನ್ನು ಹುಡುಕುವ ತಯಾರಿ ನಡೆಸುತ್ತಿದ್ದಾರೆ. ಅಲ್ಲದೇ ಅನುಷ್ಕಾ ತಮ್ಮ ಕುಟುಂಬದ ಜೊತೆ ಕೇದಾರನಾಥ್‍ನಲ್ಲಿ ಕೆಲವು ಶಾಸ್ತ್ರಗಳನ್ನು ಮಾಡಿದ್ದಾರೆ ಎನ್ನುವ ಮಾತುಗಳು ಈಗ ಕೇಳಿ ಬರುತ್ತಿದೆ.

ಬಾಹುಬಲಿ ಖ್ಯಾತಿಯ ಪ್ರಭಾಸ್ ಜೊತೆ ಅನುಷ್ಕಾ ಪ್ರೀತಿಯಲ್ಲಿದ್ದಾರೆ ಎನ್ನುವ ಗಾಸಿಪ್ ಸುದ್ದಿಗಳು ಕೆಲ ವರ್ಷಗಳಿಂದ ಕೇಳಿ ಬರುತ್ತಿವೆ. ಅಲ್ಲದೇ ಅವರಿಬ್ಬರ ನಡವಳಿಕೆಯೂ ಸಹ ಅಭಿಮಾನಿಗಳಿಗೆ ಕುತೂಹಲ ಕೆರಳಿಸಿದೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿದ್ದ ಅವರು, ನಾವು ಒಳ್ಳೆಯ ಸ್ನೇಹಿತರು ಎಂದು ಅಭಿಮಾನಿಗಳಲ್ಲಿ ಹೇಳಿದ್ದರು.

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ `ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಪ್ರಭಾಸ್ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಭಾಸ್ ಜೊತೆ ಬಾಹುಬಲಿ ಚಿತ್ರದ ನಿರ್ದೇಶಕ ರಾಜಮೌಳಿ ಹಾಗೂ ನಟ ರಾಣಾ ದಗ್ಗುಬಾಟಿ ಕೂಡ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ನಿರೂಪಕ ಕರಣ್ ಜೋಹರ್ ಅನುಷ್ಕಾ ಬಗ್ಗೆ ಮಾತನಾಡಿದ್ದರು. ಈ ವೇಳೆ ಪ್ರಭಾಸ್, “ನಾನು ಮತ್ತು ಅನುಷ್ಕಾ ಒಳ್ಳೆಯ ಗೆಳೆಯ-ಗೆಳತಿ ಅಷ್ಟೇ. ಆಕೆ ಜೊತೆ ನಾನು ಯಾವತ್ತೂ ಡೇಟಿಂಗ್ ಮಾಡಿಲ್ಲ. ಬಾಹುಬಲಿಯಲ್ಲಿ ಆಕೆ ನನಗೆ ತಾಯಿಯಾಗಿದ್ದಾಳೆ, ಪ್ರೇಯಸಿಯೂ ಆಗಿದ್ದಾಳೆ. ಈಗ ನೀವೇ ಹೇಳಿ ತಾಯಿಯನ್ನು ಯಾರಾದರೂ ಮದುವೆ ಆಗೋಕೆ ಸಾಧ್ಯನಾ? ಎಂದು ಹೇಳಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *