Recent News

ಮತ್ತೆ ಐಶ್ವರ್ಯ ರೈ ಗರ್ಭಿಣಿ?

ಮುಂಬೈ: ಮಾಜಿ ವಿಶ್ವ ಸುಂದರಿ, ನಟಿ ಐಶ್ವರ್ಯ ರೈ ಬಚ್ಚನ್ ಮತ್ತೊಮ್ಮೆ ಗರ್ಭಿಣಿ ಆಗಿದ್ದಾರೆ ಎನ್ನುವ ವಿಚಾರದ ಬಗ್ಗೆ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಒಟ್ಟಿಗೆ ಸಮಯ ಕಳೆಯಲು ಗೋವಾ ಬೀಚ್‍ಗೆ ಹೋಗಿದ್ದರು. ಈ ವೇಳೆ ಅವರು ಇಬ್ಬರು ನಡೆದುಕೊಂಡು ಹೋಗುತ್ತಿರುವ ಫೋಟೋ ವೈರಲ್ ಆಗಿದೆ. ಈ ಫೋಟೋ ನೋಡಿದ ಅಭಿಮಾನಿಗಳು ಐಶ್ವರ್ಯ ಎರಡನೇ ಮಗುವಿಗೆ ಗರ್ಭಿಣಿ ಆಗಿದ್ದಾರೆ ಎಂದು ಮಾತನಾಡುತ್ತಿದ್ದಾರೆ.

ಬೀಚ್‍ನಲ್ಲಿ ಅಭಿಷೇಕ್ ಬಿಳಿ ಬಣ್ಣದ ಶರ್ಟ್ ಹಾಕಿ ಅದಕ್ಕೆ ಶಾರ್ಟ್ಸ್ ಧರಿಸಿದ್ದರು. ಆದರೆ ಐಶ್ವರ್ಯ ಧರಿಸಿದ ಉಡುಪಿನಲ್ಲಿ ಅವರು ಗರ್ಭಿಣಿಯಂತೆ ಕಾಣಿಸುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳು ಅವರು ಮತ್ತೆ ಗರ್ಭಿಣಿ ಆಗಿದ್ದಾರೆ ಎಂದುಕೊಂಡಿದ್ದರು.

ಈ ಫೋಟೋ ನೋಡಿ ಅಭಿಮಾನಿಯೊಬ್ಬ ಐಶ್ವರ್ಯ ಮತ್ತೆ ಪ್ರೆಗ್ನೆಂಟ್ ಆಗಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಮತ್ತೊಬ್ಬರು ಇಲ್ಲ ಅವರು ಗರ್ಭಿಣಿ ಆಗಿಲ್ಲ ಎಂದರು. ಇದೇ ವೇಳೆ ಮತ್ತೊಬ್ಬರು ಐಶ್ವರ್ಯ ಮತ್ತೊಂದು ಮಗುವಿಗೆ ಜನ್ಮ ನೀಡಲು ನಾನು ಕಾಯುತ್ತಿದ್ದೇನೆ ಎಂದು ಕಮೆಂಟ್ ಮಾಡಿದ್ದಾರೆ.

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ 2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2011ರಲ್ಲಿ ಐಶ್ವರ್ಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗಳಿಗೆ ಆರಾಧ್ಯ ಎಂದು ಹೆಸರನ್ನಿಟ್ಟಿದ್ದಾರೆ.

Leave a Reply

Your email address will not be published. Required fields are marked *