Connect with us

Crime

ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ 19 ವರ್ಷದ ಯುವತಿಗೆ 10 ವರ್ಷ ಜೈಲು

Published

on

ನವದೆಹಲಿ: ಹಾಲಿವುಡ್ ನಟಿ ಏಂಜಲೀನಾ ಜೋಲಿಯನ್ನು ಹೋಲುವ ಇರಾನಿಯನ್ ಯುವತಿ ಸಹರ್ ತಬಾರ್‍ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಸಹರ್ ತಬಾರ್ (19)ಹಲವಾರು ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗಳಿಂದ ಖ್ಯಾತಿ ಗಳಿಸಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಹಲವಾರು ವಿಕೃತ ಚಿತ್ರಗಳನ್ನು ಪೋಸ್ಟ್ ಮಾಡಿದ್ದ ಸಹರ್ ತಬರ್ ಳನ್ನು ಸಾಮಾಜಿಕ ಮಾಧ್ಯಮ ಚಟುವಟಿಕೆಗಳಲ್ಲಿ ಆರೋಪದ ಮೇಲೆ ಬಂಧಿಸಲಾಗಿತ್ತು. ಈಗ ಆಕೆಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಆಕೆಯ ವಕೀಲರು ತಿಳಿಸಿದ್ದಾರೆ.

ಸಹರ್ ತಬಾರ್ ಅವರ ನಿಜವಾದ ಹೆಸರು ಫಾತಿಮೆ ಖಿಶ್ವಾಂಡ್ ಮತ್ತು ಅವಳು ಟೆಹ್ರಾನ್ ಮೂಲದವಳು. ಹಾಲಿವುಡ್ ಸೆಲೆಬ್ರಿಟಿ ಏಂಜಲೀನಾ ಜೋಲಿಯ ಜೊಂಬಿ ಆವೃತ್ತಿಯಂತೆ ಕಾಣುವ ತನ್ನ ವಿಲಕ್ಷಣ ಮುಖದ ಮಾರ್ಫಡ್ ಚಿತ್ರಗಳನ್ನುಪೋಸ್ಟ್ ಮಾಡಿದ ನಂತರ ಅವರು ಖ್ಯಾತಿಗೆ ಏರಿದಳು.

ಹಾಲಿವುಡ್ ನಟಿ ಏಂಜಲೀನಾ ಜೋಲಿಯಂತೆ ಕಾಣಲು ಈಕೆ 50 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ ಎಂಬ ಸುದ್ದಿ ಕೇಳಿ ಜನ ದಂಗಾಗಿದ್ದರು. ಕಳೆದ ವರ್ಷ ಅಕ್ಟೋಬರ್‍ನಲ್ಲಿ ಸಾಂಸ್ಕøತಿಕ ಅಪರಾಧಗಳು ಮತ್ತು ಸಾಮಾಜಿಕ ಮತ್ತು ನೈತಿಕ ಭ್ರಷ್ಟಾಚಾರ ಆರೋಪದ ಮೇಲೆ ಸಹರ್ ತಬಾರ್‍ನನ್ನು ಬಂಧಿಸಲಾಗಿತ್ತು ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

 

ತನ್ನ ನೆಚ್ಚಿನ ನಟಿ ಏಂಜಲೀನಾಳಂತೆ ಕಾಣಲು ಏನು ಬೇಕಾದ್ರೂ ಮಾಡ್ತೀನಿ ಅಂತ ಈ ಯುವತಿ ಹೇಳಿದ್ದಾಳೆಂದು ಪತ್ರಿಕೆಯೊಂದು ವರದಿ ಮಾಡಿತ್ತು. ಇನ್‍ಸ್ಟಾಗ್ರಾಮ್‍ನಲ್ಲಿ ಯುವತಿಯ ಪೋಟೋಗಳನ್ನ ನೋಡಿದ ನಂತರ ಆಕೆಯ ಫಾಲೋವರ್ ಗಳ ಸಂಖ್ಯೆಯೂ ಹೆಚ್ಚಾಗಿದೆ. ಇನ್ನು ಈಕೆಯ ಹಳೆಯ ಪೋಟೋಗಳು ಕೂಡ ಹರಿದಾಡ್ತಿದ್ದು, ಅದನ್ನ ನೋಡಿ ಇವಳಿಗ್ಯಾಕೆ ಬೇಕಿತ್ತು ಇದೆಲ್ಲಾ ಅಂತಲೂ ಜನ ಮಾತನಾಡಿಕೊಂಡಿದ್ದರು.

ಈಕೆಗೆ ಇನ್‍ಸ್ಟಾಗ್ರಾನಲ್ಲಿ 6 ಲಕ್ಷಕ್ಕಿಂತಲೂ ಅಧಿಕ ಫಾಲೋವರ್‍ಗಳಿದ್ದು ಪೋಟೋ ಹಾಗೂ ವಿಡಿಯೋಗಳನ್ನ ಶೇರ್ ಮಾಡುತ್ತಿದ್ದಳು. ಆದರೆ ಇತರೆ ಬಳಕೆದಾರರು ಈಕೆಯ ಪೋಟೋಗೆ ದೆವ್ವ, ಭೂತ ಎಂದೆಲ್ಲಾ ಪದಗಳನ್ನ ಬಳಸಿ ಕಮೆಂಟ್ ಮಾಡಿದ್ದರು. ಇನ್ನೂ ಕೆಲವರು ಇದು ಮೇಕಪ್ ಮಹಿಮೆ, ಫೆÇೀಟೋಶಾಪ್ ಮಾಡಿರಬಹುದು ಎಂದು ಕೂಡ ಹೇಳಿದ್ದರು. ಈ ಯುವತಿ ಏಂಜಲೀನಾಳಂತೆ ಕಾಣಲು ಕಠಿಣ ಡಯಟ್ ಕೂಡ ಮಾಡಿದ್ದಾಳೆ.

Click to comment

Leave a Reply

Your email address will not be published. Required fields are marked *