Connect with us

International

ಪಾಕ್ ಮೇಲೆ ಇರಾನ್ ಸರ್ಜಿಕಲ್ ಸ್ಟ್ರೈಕ್ – ಹಲವು ಉಗ್ರರು ಬಲಿ

Published

on

– ಪಾಕ್ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಯಶಸ್ವಿ 3ನೇ ರಾಷ್ಟ್ರ
– ಸೈನಿಕರನ್ನು ರಕ್ಷಿಸಲು, ಉಗ್ರರ ಗುಂಪನ್ನು ಗುರಿಯಾಗಿಸಿ ದಾಳಿ

ಟೆಹರಾನ್: ಅಮೆರಿಕ, ಭಾರತದ ಬಳಿಕ ಇರಾನ್ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ಒಳ ನುಗ್ಗಿ ನಡೆಸಿದ ದಾಳಿಗೆ ಹಲವು ಉಗ್ರರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಫೆಬ್ರವರಿ 2ರ ರಾತ್ರಿ ಇರಾನ್‍ನ ಎಲೈಟ್ ರೆವಲ್ಯೂಶನರಿ ಗಾಡ್ರ್ಸ್(ಐಆರ್ ಜಿಸಿ) ಸೈನಿಕರು ದಾಳಿ ನಡೆಸಿದ್ದು, ಪಾಕ್‍ನ ಹಲವು ಸೇನಾಧಿಕಾರಿಗಳು ಈ ಸರ್ಜಿಕಲ್ ಸ್ಟ್ರೈಕ್‍ನಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇರಾನ್‍ನ ಇಬ್ಬರು ಸೈನಿಕರನ್ನು ಪಾಕಿಸ್ತಾನದ ಉಗ್ರರು ಮೂರು ವರ್ಷಗಳ ಹಿಂದೆ ಒತ್ತೆಯಾಳಾಗಿರಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತೀಕಾರವಾಗಿ ಇರಾನ್ ಈ ಬೃಹತ್ ದಾಳಿ ನಡೆಸಿದ್ದು, ಭಯೋತ್ಪಾದಕರಿಗೆ ರಕ್ಷಣೆ ನೀಡಿದ್ದ ಹಲವು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮಿಷನ್ ಸಕ್ಸಸ್‍ಫುಲ್ ಎಂದು ಫೆಬ್ರವರಿ 3ರಂದು ಐಆರ್ ಜಿಸಿ ಹೇಳಿಕೆ ಬಿಡುಗಡೆ ಮಾಡಿದ್ದು, ಕಿಡ್ನಾಪ್ ಆಗಿದ್ದ ಇಬ್ಬರು ಸೈನಿಕರನ್ನು ಸಹ ರಕ್ಷಿಸಲಾಗಿದೆ ಎಂದು ಹೇಳಿದೆ. ಎರಡೂವರೆ ವರ್ಷಗಳ ಹಿಂದೆ ಜೈಶ್ ಉಲ್-ಆಡ್ಲ್ ಸಂಘಟನೆಯಿಂದ ಅವರನ್ನು ಒತ್ತೆಯಾಳಾಗಿ ಮಾಡಿಕೊಳ್ಳಲಾಗಿತ್ತು. ಇದೀಗ ಸರ್ಜಿಕಲ್ ಸ್ಟ್ರೈಕ್ ವೇಳೆ ಅವರನ್ನು ರಕ್ಷಿಸಿ ಮರಳಿ ಇರಾನ್‍ಗೆ ಕರೆ ತರಲಾಗಿದೆ ಎಂದು ಐಆರ್ ಜಿಸಿ ಹೇಳಿಕೆ ನೀಡಿದೆ.

ಅಕ್ಟೋಬರ್ 16,2018ರಲ್ಲಿ ಕನಿಷ್ಠ 12 ಐಆರ್ ಜಿಸಿ ಸೈನಿಕರನ್ನು ಜೈಶ್ ಉಲ್-ಆಡ್ಲ್ ಸಂಘಟನೆಯ ಉಗ್ರರು ಮರ್ಕಾವಾ, ಸಿಸ್ತಾನ್ ಹಾಗೂ ಬಲುಚಿಸ್ತಾನ್ ಪ್ರದೇಶದಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿತ್ತು. ಬಳಿಕ ಇವರನ್ನು ಬಿಡುಗಡೆ ಮಾಡಲು ಸೇನೆಯ ಅಧಿಕಾರಿಗಳು ಎರಡೂ ದೇಶಗಳ ಜಂಟಿ ಸಮಿತಿ ರಚಿಸಿದ್ದರು. ಇದರ ಫಲವಾಗಿ ಐವರನ್ನು ನವೆಂಬರ್ 15, 2018ರಲ್ಲಿ ಬಿಡುಗಡೆ ಮಾಡಲಾಗಿತ್ತು. ಮತ್ತೆ ನಾಲ್ವರು ಇರಾನಿ ಸೈನಿಕರನ್ನು ಮಾರ್ಚ್ 21, 2019ರಂದು ಪಾಕಿಸ್ತಾನಿ ಸೇನೆ ರಕ್ಷಣೆ ಮಾಡಿತ್ತು. ಇದೀಗ ಇರಾನ್ ಸರ್ಜಿಕಲ್ ಸ್ಟ್ರೈಕ್ ನಡೆಸುವ ಮೂಲಕ ಉಳಿದ ಇಬ್ಬರು ಸೈನಿಕರನ್ನು ರಕ್ಷಿಸಿದೆ.

Click to comment

Leave a Reply

Your email address will not be published. Required fields are marked *