Advertisements

ಪಾರ್ಟಿ ಮೂಡ್‌ನಲ್ಲಿ ಸಿಎಸ್‌ಕೆ ಅಂಡ್ ಟೀಂ – ಸಾಂಪ್ರದಾಯಿಕ ಉಡುಗೆಯ ಸಂಭ್ರಮ

ಮುಂಬೈ: ಐಪಿಎಲ್ ಬ್ಯೂಸಿ ಶೆಡ್ಯೂಲ್ ನಡುವೆಯು ಚೆನ್ನೈ ಸೂಪರ್‌ಕಿಂಗ್ಸ್ (CSK) ತಂಡವು ಫ್ರೀವೆಡ್ಡಿಂಗ್ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ

Advertisements

ನ್ಯೂಜಿಲೆಂಡ್ ಹಾಗೂ ಚೆನ್ನೈಸೂಪರ್‌ಕಿಂಗ್ಸ್ ತಂಡದ ಕ್ರಿಕೆಟಿಗ ಡಿವೈನ್ ಕಾನ್ವೇ ಹಾಗೂ ಕಿಮ್ ವಾಟ್ಸನ್ ಅವರ ಫ್ರೀವೆಡ್ಡಿಂಗ್ (ವಿವಾಹಪೂರ್ವ) ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಸಿಎಸ್‌ಕೆ ಅಂಡ್ ಟೀಂ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ಸಂಭ್ರಮಿಸಿದ್ದಾರೆ. ಭಾರತೀಯ ಸಂಪ್ರದಾಯಿಕ ಶೈಲಿಯ ಉಡುಗೆಗಳನ್ನೇ ಧರಿಸಿದ್ದ ಪ್ರಮುಖ ಕ್ರಿಕೆಟಿಗರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Advertisements

ಮಹೇಂದ್ರಸಿಂಗ್ ಧೋನಿ, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಿವಂ ದುಬೆ, ಮೊಯಿನ್ ಅಲಿ, ಕೋಚ್ ಸ್ಟೀಫನ್ ಫ್ಲೆಮಿಂಗ್, ಋತುರಾಜ್ ಗಾಯಕ್ವಾಡ್ ಸೇರಿದಂತೆ ಹಲವರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.

Advertisements

15ನೇ ಆವೃತ್ತಿಯಲ್ಲಿ 1 ಕೋಟಿ ರೂ.ಗೆ ಖರೀದಿಯಾಗಿ ಚೆನ್ನೈ ತಂಡದ ಮೂಲಕ ಐಪಿಎಲ್ ಪ್ರವೇಶಿಸಿದ ಕಾನ್ವೇ ಕೋಲ್ಕತ್ತಾ ನೈಟ್‌ರೈಡರ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 3 ರನ್‌ಗಳಿಸಿ ನಿರ್ಗಮಿಸಿದ್ದರು. ಅದಾದ ಬಳಿಕ ಯಾವುದೇ ಮ್ಯಾಚ್‌ನಲ್ಲೂ ಅವರು ಆಟವಾಡಲಿಲ್ಲ. ಇದೀಗ ತಮ್ಮ ವಿವಾಹ ಮುಗಿದಿದ್ದು, ನಾಳೆ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುವ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಸಿಎಸ್‌ಕೆ ತಂಡದಿಂದ ಕಣಕ್ಕಿಳಿಯಲಿದ್ದಾರೆ.

Advertisements
Exit mobile version