ಐಪಿಎಲ್ 2022 – ಯಾರು ಯಾವ ತಂಡಕ್ಕೆ ನಾಯಕ? – ಇಲ್ಲಿದೆ ಪೂರ್ಣ ವಿವರ

Advertisements

ಐಪಿಎಲ್ 2022 ರ ತಂಡದಲ್ಲಿ ಕೆಲವೊಂದು ಆಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆಯು ಈಗಾಗಲೇ ಪೂರ್ಣಗೊಂಡಿದೆ.

Advertisements

ಅಸ್ತಿತ್ವದಲ್ಲಿರುವಂತಹ ಎಲ್ಲಾ ಎಂಟು ಐಪಿಎಲ್ ತಂಡಗಳು ಇನ್ನು ಕೆಲವು ವರ್ಷಗಳ ಕಾಲ ತಮ್ಮ ತಂಡದಲ್ಲಿ ಉಳಿಸಿಕೊಂಡಿರುವ ತಮ್ಮ ಅಗ್ರ ಆಟಗಾರರನ್ನು ಆಯ್ಕೆ ಮಾಡಿಕೊಂಡಿದೆ ಮತ್ತು ಉಳಿದ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿದೆ.

Advertisements

ಈಗಿರುವ 8 ತಂಡಗಳನ್ನು ಬಿಟ್ಟು ಇದೀಗ ಐಪಿಎಲ್ 2022ರ ಸೀಸನ್ 15ಕ್ಕೆ ಎರಡು ಹೊಸ ತಂಡಗಳು ಸೇರ್ಪಡೆಯಾಗಿದೆ. ಐಪಿಎಲ್ 2022ರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಕಳಪೆ ಪ್ರದರ್ಶನ ಮಾಡಿದ ನಾಯಕರನ್ನು ಬದಲಾಯಿಸಿದ್ದಾರೆ. ಉತ್ತಮ ಪ್ರದರ್ಶನ ನೀಡಿದ ನಾಯಕರನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.

10 ತಂಡಗಳ ಅದೃಷ್ಟ ನಾಯಕರು ಯರ‍್ಯಾರು?
1. ಮುಂಬೈ ಇಂಡಿಯನ್ಸ್ _ ರೋಹಿತ್ ಶರ್ಮಾ


ಅತ್ಯಂತ ಯಶಸ್ವಿ ಐಪಿಎಲ್ ನಾಯಕ. ಅದ್ರೆ 2011 ರಲ್ಲಿ ಸಚಿನ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆದ್ದಿದ್ದು, ಇವರ ನಾಯಕತ್ವದಲ್ಲಿ 4 ಬಾರಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ಇವರ ನಾಯಕತ್ವದ ದಾಖಲೆಯು ಐಪಿಎಲ್‌ನಲ್ಲಿ ಯಾವುದಕ್ಕು ಕಮ್ಮಿ ಇಲ್ಲ. ಮುಂಬೈ ಇಂಡಿಯನ್ಸ್ ಎಂಟು ವರ್ಷಗಳಲ್ಲಿ 5 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆದ್ದರಿಂದ ತಂಡದ ನೀರಿಕ್ಷಿತ ನಾಯಕನಾಗಿ ಈ ಬಾರಿಯು ತಂಡವನ್ನು ಮುನ್ನಡೆಸಲಿದ್ದಾರೆ. ಇದನ್ನೂ ಓದಿ: ಐಪಿಎಲ್ 2022 ಹರಾಜು – 5 ವಿದೇಶಿ ವಿಕೆಟ್ ಕೀಪರ್‌ಗಳ ಮೇಲೆ ಫ್ರಾಂಚೈಸಿಗಳ ಕಣ್ಣು

Advertisements

2. ಚೆನ್ನೈ ಸೂಪರ್‌ಕಿಂಗ್ಸ್ _ ಎಂಎಸ್ ಧೋನಿ


ನಾಲ್ಕು (2010, 2011, 2018, 2021) ಬಾರಿ ಇವರ ನಾಯಕತ್ವದಡಿಯಲ್ಲಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ಮುಂಬರುವ ಋತುವಿನಲ್ಲಿ ಮಹೇಂದ್ರ ಸಿಂಗ್ ಧೋನಿಯವರನ್ನು 12 ಕೋಟಿ ರೂಪಾಯಿಗೆ ಉಳಿಸಿಕೊಂಡಿದೆ. ಈ ಸೀಸನ್‌ನಲ್ಲಿ ಚೆನ್ನೈ ಪರ ಕೊನೆಯ ಪಂದ್ಯಗಳನ್ನು ಆಡುವುದಾಗಿ ಹೇಳಿದ್ದಾರೆ. ಹಾಗೆಯೇ 2021ರಲ್ಲಿ ಗೆದ್ದ ನಂತರ ಅವರು ಮತ್ತೊಮ್ಮೆ ತಂಡವನ್ನು ಮುನ್ನಡೆಸಲಿದ್ದಾರೆ.

3. ಡೆಲ್ಲಿ ಕ್ಯಾಪಿಟಲ್ಸ್ – ರಿಷಭ್ ಪಂತ್


ಯುವ ಕೀಪರ್ ಮತ್ತು ಎಡಗೈ  ಬ್ಯಾಟ್ಸ್‌ಮನ್‌ ಕಳೆದ ಸೀಸನ್‌ನಲ್ಲಿ ಯಶಸ್ಸಿನ ನಾಯಕನಾಗಿ ಮುನ್ನಡೆಸಿದ್ದು ಮತ್ತೊಮ್ಮೆ ತಂಡದ ನಾಯಕನಾಗಿ ಮುಂದುರಿಯಲಿದ್ದಾರೆ. ಶ್ರೇಯಸ್ ಅಯ್ಯರ್ ಗಾಯಗೊಂಡಾಗ ಪಂತ್ ಅವರನ್ನು ನಾಯಕರನ್ನಾಗಿ ನೇಮಿಸಲಾಯಿತು. ಬಳಿಕ ನಾಯಕನಾಗಿ ತಂಡವನ್ನು ಪ್ಲೇ ಆಫ್ ಹಂತಕ್ಕೆ ಕರೆದೊಯ್ದಿದ್ದರು.

4.ಸನ್‌ರೈಸರ್ಸ್ ಹೈದರಾಬಾದ್ – ಕೇನ್ ವಿಲಿಯಮ್ಸನ್


ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರು ಕಳೆದ ಋತುವಿನಲ್ಲಿ ತಂಡದ ನಾಯಕನಾಗಿದ್ದು ಈ ಬಾರಿ ಅವರನ್ನು ತಂಡದಲ್ಲಿ 14 ಕೋಟಿಗೆ ಉಳಿಸಿಕೊಂಡಿದೆ. ಕಳೆದ ಬಾರಿ ಡೇವಿಡ್ ವಾರ್ನರ್ ಆನ್ನು ನಾಯಕತ್ವದಿಂದ ಇಳಿಸಿದ ಬಳಿಕ ಇವರಿಗೆ ತಂಡದ ನಾಯಕತ್ವವನ್ನು ವಹಿಸಿದ್ದಾರೆ. ಟಿ20 2021 ವಿಶ್ವಕಪ್‌ನಲ್ಲಿ ತಮ್ಮ ತಂಡವನ್ನು ಫೈನಲ್‌ಗೆ ತೆಗೆದುಕೊಂಡು ಹೋದ ಹೆಗ್ಗಳಿಕೆ ಇವರದಾಗಿದೆ.

5. ರಾಜಸ್ತಾನ್ ರಾಯಲ್ಸ್ – ಸಂಜು ಸ್ಯಾಮ್ಸನ್


ಸ್ಟೀವ್ ಸ್ಮಿತ್ ಅವರ ವೈಫಲ್ಯದ ನಂತರ ಐಪಿಎಲ್ 2021ರ ಸಮಯದಲ್ಲಿ ಸ್ಯಾಮನ್ಸ್ ಅವರನ್ನು ರಾಜಸ್ಥಾನದ ನಾಯಕರನ್ನಾಗಿ ನೇಮಿಸಲಾಯಿತು. ಸೀಸನ್ 14 ರಲ್ಲಿ ಅವರ ತಂಡ ಒಳ್ಳೆಯ ಪ್ರದರ್ಶನ ನೀಡದಿದ್ದರೂ ಅವರ ತಂಡವನ್ನು ಈ ಸೀಸನ್‌ನಲ್ಲಿ ಉತ್ತಮವಾಗಿ ನಡೆಸಬಲ್ಲರು ಎಂಬ ನಂಬಿಕೆ ಇವರ ಮೇಲಿದೆ. ಹಾಗೂ ತಂಡ 14 ಕೋಟಿ ರೂಪಾಯಿಗೆ ಉಳಿಸಿಕೊಂಡಿದೆ.

6. ಪಂಜಾಬ್ ಕಿಂಗ್ಸ್ – ಮಯಾಂಕ್ ಅಗರ್ವಾಲ್


ಮುಂಬರುವ ಹರಾಜಿನಲ್ಲಿ ಮಯಾಂಕ್ ಅಗರ್ವಾಲ್ ತಂಡವನ್ನು ಮುನ್ನಡೆಸುವ ಸಂಭಾವ್ಯ ಅಭ್ಯರ್ಥಿ. ಕೆಎಲ್ ರಾಹುಲ್ ಅನ್ನು ಈಗಾಗಲೇ ತಂಡದಿಂದ ಬೇರ್ಪಟ್ಟಿದ್ದಾರೆ. ಇವರನ್ನು ತಂಡ 12 ಕೋಟಿಗೆ ಉಳಿಸಿಕೊಂಡಿದೆ. ಅವರು ನಾಯಕತ್ವಕ್ಕೆ ಉತ್ತಮ ಅಭ್ಯರ್ಥಿ ಎಂಬ ಕಾರಣಕ್ಕೆ ಈ ಸಲವು ಪಂಜಾಬ್ ಕಿಂಗ್ಸ್ ಗೆ ನಾಯಕರನ್ನಾಗಿ ನೇಮಿಸಿದೆ.

7. ಕೋಲ್ಕತ್ತಾ ನೈಟ್ ರೈಡರ್ಸ್ – ಡೇವಿಡ್ ವಾರ್ನರ್


ಎರಡು ಬಾರಿ ಐಪಿಎಲ್ ವಿಜೇತ ತಂಡವಾಗಿ ಹೊರಹೊಮ್ಮಿದ ಕೋಲ್ಕತ್ತಾ ತಂಡ ಇದೀಗ ಡೇವಿಡ್ ವಾರ್ನರ್ ಅನ್ನು ನಾಯಕನ್ನಾಗಿ ನೇಮಿಸಲು ಯೋಜನೆ ಮಾಡಿದೆ ಎನ್ನಲಾಗುತ್ತಿದೆ. ಫ್ರಾಂಚೈಸಿಯು ಇತ್ತೀಚಿನ ಆಟಗಾರರನ್ನು ಉಳಿಸಿಕೊಳ್ಳುವ ಸಮಯದಲ್ಲಿ ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಆಯ್ಯರ್ ಮತ್ತು ಸುನೀಲ್ ನರೈನ್ ಅವರನ್ನು ಉಳಿಸಿಕೊಂಡಿದೆ.

ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಆಸ್ಟ್ರೇಲಿಯದ ಆರಂಭಿಕ ಬ್ಯಾಟ್ಸ್‌ಮನ್‌ ಆಟಗಾರ ಡೇವಿಡ್ ವಾರ್ನರ್ ಅವರನ್ನು ಖರೀದಿಸಲು ಕೆಕೆಆರ್ ಪ್ರಯತ್ನಿಸುತ್ತದೆ. ವಾರ್ನರ್ ಐಪಿಎಲ್‌ನಲ್ಲಿ ಉತ್ತಮ ಬ್ಯಾಟರ್ ಮತ್ತು ನಾಯಕನಾಗಿ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ.

8. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) – ಗ್ಲೇನ್ ಮ್ಯಾಕ್ಸ್‌ವೆಲ್

ಮುಂಬರುವ ಐಪಿಎಲ್ ಋತುವಿಗೆ ನಾಯಕನಾಗಿ ಗ್ಲೇನ್ ಮ್ಯಾಕ್ಸ್‌ವೆಲ್ ಅವರ ಹೆಸರು ಕೇಳಿ ಬಂದಿದೆ. ಆಸ್ಟ್ರೇಲಿಯನ್ ಆಲ್‌ರೌಂಡರ್ ಗ್ಲೇನ್ ಮ್ಯಾಕ್ಸ್‌ವೆಲ್ ಆರ್‌ಸಿಬಿ ತಂಡದ ನಾಯಕತ್ವಕ್ಕೆ ಸೂಕ್ತವಾದ ಆಟಗಾರ ಎಂದು ಪರಿಗಣಿಸಲಾಗಿದೆ. ಏಕೆಂದರೆ ಕಳೆದ ಸೀಸನ್‌ನಲ್ಲಿ ಆರ್‌ಸಿಬಿ ಇನ್ನೇನೂ ಪಂದ್ಯ ಸೋಲುತ್ತದೆ ಎಂಬ ಸಂದರ್ಭದಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರಿಂದ ಆರ್‌ಸಿಬಿ 11 ಕೋಟಿ ನೀಡಿ ಉಳಿಸಿಕೊಂಡಿದೆ.

9. ಅಹಮದಾಬಾದ್ – ಶ್ರೇಯಸ್ ಅಯ್ಯರ್


ಈ ಋತುವಿನಲ್ಲಿ ಹೊಸ ತಂಡವದ ಅಹಮದಾಬಾದ್ ತಂಡವು ಶ್ರೇಯಸ್ ಅಯ್ಯರ್ ಮೇಲೆ ಕಣ್ಣಿಟ್ಟಿದೆ. ಅಯ್ಯರ್ 2020ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಫೈನಲ್‌ಗೆ ತೆಗೆದುಕೊಂಡು ಹೋಗಿದ್ದರು. ಅಯ್ಯರ್ ಎರಡು ವರ್ಷಗಳ ಅನುಭವ ಹೊಂದಿರುವ ಪ್ರಬಲ ನಾಯಕರಾಗಿದ್ದು ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದನ್ನೂ ಓದಿ: ಪಿ. ವಿ ಸಿಂಧುಗೆ BWF ಗೌರವ

10. ಲಕ್ನೋ – ಕೆಎಲ್ ರಾಹುಲ್


ಪಂಜಾಬ್ ಕಿಂಗ್ಸ್ ಮಾಜಿ ನಾಯಕನಾದ ರಾಹುಲ್ ಹೆಸರು  ಲಕ್ನೋ ಮೂಲದ ಹೊಸ ಫ್ರಾಂಚೈಸಿಯಲ್ಲಿ ಕೇಳಿಬರುತ್ತಿದ್ದು, ತಂಡದ ನಾಯಕನಾಗುವ ಸಾಧ್ಯತೆಯಿದೆ. ಪಂಜಾಬ್ಸ್ ಕಿಂಗ್ಸ್ ನಲ್ಲಿದ್ದಾಗ ರಾಹುಲ್ ಅತ್ಯುತ್ತಮ ಆಟವಾಡಿದ್ದು ಅವರು ಕಳೆದ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಹೊಡೆದ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದ್ದರು. ಈ ಬಾರಿಯ ಐಪಿಎಲ್ ನಲ್ಲಿ ಅವರನ್ನು ಪಂಜಾಬ್ ಕಿಂಗ್ಸ್ ತಂಡದಿಂದ ಹೊರ ನಡೆದಿದ್ದು ಲಕ್ನೋ  ತಂಡದೊಂದಿಗೆ  ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

Advertisements
Exit mobile version