Connect with us

Karnataka

ಪಂದ್ಯಕ್ಕೂ ಮುನ್ನ ಮೈದಾನದಲ್ಲಿ ಕೊಹ್ಲಿ ಡ್ಯಾನ್ಸ್‌

Published

on

ಶಾರ್ಜಾ: ಕಿಂಗ್ಸ್‌ ಇಲೆವನ್‌ ಪಂಜಾಬ್‌ ವಿರುದ್ಧದ ಪಂದ್ಯ ನಡೆಯುವುದಕ್ಕೆ ಮುನ್ನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ ಮೈದಾನದಲ್ಲಿ ನಡೆಸಿದ ದೈಹಿಕ ಕಸರತ್ತಿನ ವಿಡಿಯೋ ಈಗ ವೈರಲ್‌ ಆಗಿದೆ.

ಮೈದಾನದಲ್ಲಿ ಸಹ ಆಟಗಾರರ ಜೊತೆ ಕೊಹ್ಲಿ ವ್ಯಾಯಾಮ ಮಾಡುತ್ತಿದ್ದರು. ಆದರೆ ಈ ವೇಳೆ ಕೊಹ್ಲಿ ಡ್ಯಾನ್ಸ್‌ ಮಾಡುತ್ತಾ ವ್ಯಾಯಾಮ ಮಾಡಿದ್ದಾರೆ. ಒಮ್ಮೆ ಕುಳಿತುಕೊಂಡೇ ಕೈಯನ್ನು ಅಲ್ಲಡಿಸುತ್ತಾ ನೃತ್ಯ ಮಾಡಿದರೆ ಮತ್ತೊಮ್ಮೆ ಬೆನ್ನನ್ನು ನೆಲಕ್ಕೆ ಹಾಕುತ್ತಾ ನೃತ್ಯ ಮಾಡಿದ್ದಾರೆ.

ವ್ಯಾಯಾಮದ ವೇಳೆ ಕೊಹ್ಲಿ ಬಹಳ ಸಂಭ್ರಮದಲ್ಲಿರುವ ವಿಡಿಯೋ ನೆಟ್ಟಿಗರ ಮನ ಗೆದ್ದಿದ್ದು ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ವಿಡಿಯೋ ಶೇರ್‌ ಮಾಡುತ್ತಿದ್ದಾರೆ. ಇದನ್ನೂ ಓದಿ: ಅಫ್ರಿದಿಗೆ ಸಹಾಯ, ಧೋನಿಗೆ ವ್ಯಂಗ್ಯ- ಬಜ್ಜಿ ವಿರುದ್ಧ ಧೋನಿ ಫ್ಯಾನ್ಸ್ ಫೈರ್

ಇಂದು ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಬೆಂಗಳೂರು 20 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಿದೆ. ವಿರಾಟ್‌ ಕೊಹ್ಲಿ 48 ರನ್‌(39 ಎಸೆತ, 3 ಬೌಂಡರಿ) ಹೊಡೆದು ಔಟಾದರು.

17.5 ಓವರ್‌ಗಳಲ್ಲಿ ತಂಡದ ಮೊತ್ತ136 ಆಗಿದ್ದಾಗ ಕೊಹ್ಲಿ 6ನೇಯವರಾಗಿ ಔಟಾದರು. ನಂತರ ಕ್ರಿಸ್‌ ಮೋರಿಸ್‌ ಮತ್ತು ಉದಾನಾ ಅವರು 13 ಎಸೆತಗಳಲ್ಲಿ 35 ರನ್‌ ಹೊಡೆದರು. ಕ್ರೀಸ್‌ ಮೋರಿಸ್‌ 25 ರನ್‌(8 ಎಸೆತ, 1 ಬೌಂಡರಿ, 3 ಸಿಕ್ಸರ್‌) ಉದಾನಾ 10 ರನ್‌(5 ಎಸೆತ, 1 ಸಿಕ್ಸರ್‌) ಹೊಡೆದು ಅಜೇಯರಾಗಿ ಉಳಿದರು.

Click to comment

Leave a Reply

Your email address will not be published. Required fields are marked *

www.publictv.in