Connect with us

Latest

ಬೆಸ್ಟ್‌ ಫೀಲ್ಡಿಗ್‌ – ಬೌಂಡರಿ ಗೆರೆಯ ಬಳಿ ಬಾಲ್‌ ತಡೆದು ಮೇಲಕ್ಕೆ ಎಸೆದು ಪಡಿಕಲ್‌ ಕ್ಯಾಚ್‌

Published

on

ದುಬೈ: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ದೇವದತ್‌ ಪಡಿಕ್ಕಲ್‌ ಅತ್ಯುತ್ತಮ ಕ್ಯಾಚ್‌ ಹಿಡಿದಿದ್ದಾರೆ.

ಮೊಯಿನ್‌ ಅಲಿ ಎಸೆದ 12ನೇ ಓವರಿನ ಮೂರನೇ ಎಸೆತವನ್ನು ನಾಯಕ ಶ್ರೇಯಸ್‌ ಅಯ್ಯರ್‌ ಸಿಕ್ಸ್‌ ಹೊಡೆಯುವ ಪ್ರಯತ್ನದಲ್ಲಿ ಡೀಪ್‌ ಮಿಡ್‌ ವಿಕೆಟ್‌ ಕಡೆಗೆ ಬಲವಾಗಿ ಹೊಡೆದಿದ್ದರು.

ಬೌಂಡರಿ ಗೆರೆಯ ಬಳಿ ಇದ್ದ ಪಡಿಕ್ಕಲ್‌ ಹಿಂದಕ್ಕೆ ಬಾಗಿ ಕ್ಯಾಚ್‌ ಹಿಡಿದು ಮೇಲಕ್ಕೆ ಎಸೆದರು. ಈ ವೇಳೆ ಪಡಿಕ್ಕಲ್‌ ಅವರು ಬೌಂಡರಿ ಗೆರೆಯ ಒಳಗಡೆ ನಿಲ್ಲಲು ಸಾಧ್ಯವಾಗಲಿಲ್ಲ. ಬೌಂಡರಿ ಗೆರೆ ದಾಟಿದ ಬಳಿಕ ಮತ್ತೆ ಒಳಗಡೆಗೆ ಬಂದು ಕ್ಯಾಚ್‌ ಹಿಡಿದರು. ಒಂದು ವೇಳೆ ಪಡಿಕ್ಕಲ್‌ ತಡೆ ಹಿಡಿಯದಿದ್ದರೆ ಸಿಕ್ಸ್‌ ಆಗುವ ಸಾಧ್ಯತೆಯಿತ್ತು.

ಶ್ರೇಯಸ್‌ ಅಯ್ಯರ್‌ 13 ಎಸೆತದಲ್ಲಿ 11 ರನ್‌ ಹೊಡೆದು ಔಟಾದರು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ಆರ್‌ಸಿಬಿಗೆ 197 ರನ್‌ಗಳ ಟಾರ್ಗೆಟ್‌ ನೀಡಿದೆ. ಇದನ್ನೂ ಓದಿ: ಆಡಿದ್ದು 4 ಎಸೆತವಾದ್ರೂ, ಐಪಿಎಲ್‍ನಲ್ಲಿ ಕೃನಾಲ್ ಪಾಂಡ್ಯ ಆಲ್‍ಟೈಮ್ ರೆಕಾರ್ಡ್

Click to comment

Leave a Reply

Your email address will not be published. Required fields are marked *