Connect with us

Dharwad

ಹವಾಮಾನ ವೈಪರೀತ್ಯಗಳ ಚಿಂತೆಯಿಲ್ಲ – ಹುಬ್ಬಳ್ಳಿಯಲ್ಲಿ ಇನ್ಮುಂದೆ ಲ್ಯಾಂಡ್ ಆಗುತ್ತೆ ಫ್ಲೈಟ್

Published

on

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ವಿಮಾನ ನಿಲ್ದಾಣ ಮೇಲ್ದರ್ಜೆಗೆ ಏರುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಹೊಸ ಹೊಸ ಪ್ರಯೋಗಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಹವಾಮಾನ ವೈಪರೀತ್ಯಗಳ ನಡುವೆ ವಿಮಾನಗಳ ಲ್ಯಾಂಡಿಂಗ್‍ಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಶೇಷ ಪ್ರಯತ್ನವೊಂದನ್ನು ಕೈಗೆತ್ತಿಕೊಳ್ಳಲಾಗಿದೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಐಎಲ್‍ಎಸ್ (Instrumental landing system) ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ಬಹುತೇಕ ನವೆಂಬರ್‌ನಿಂದ ಕಾರ್ಯಾರಂಭ ಮಾಡಲಿದೆ. ಕಳೆದ ಜನವರಿಯಲ್ಲಿಯೇ ವಿಮಾನ ನಿಲ್ದಾಣದಲ್ಲಿ ಐಎಲ್‍ಎಸ್ ಅಳವಡಿಕೆ ಕಾರ್ಯ, ಆ್ಯಂಟೆನಾ ಅಳವಡಿಕೆ ಸೇರಿದಂತೆ ಇತರ ಕಾರ್ಯಗಳು ಆರಂಭವಾಗಿದ್ದವು. ನಿರೀಕ್ಷೆಯಂತೆ ಮಾರ್ಚ್ ಅಂತ್ಯದಲ್ಲಿ ಇದರ ಕಾರ್ಯಾರಂಭ ಆಗಬೇಕಿತ್ತು. ಆದರೆ ಕೊರೊನಾ ಹಿನ್ನೆಲೆ ಲಾಕ್‍ಡೌನ್ ಕಾರಣದಿಂದ ಕಾಮಗಾರಿ ವಿಳಂಬವಾಗಿತ್ತು. ಇದೀಗ ಐಎಎಲ್‍ಎಸ್‍ನ ತಾಂತ್ರಿಕ ಸಾಮಗ್ರಿಯ ಶೆಡ್, ಟವರ್ ಅಳವಡಿಕೆ ಕಾಮಗಾರಿ ಮುಕ್ತಾಯವಾಗಿದ್ದು, ನವೆಂಬರ್ ತಿಂಗಳಲ್ಲಿ ಐಎಲ್‍ಎಸ್ ತನ್ನ ಕಾರ್ಯವನ್ನು ಪ್ರಾರಂಭಗೊಳಿಸಲಿದೆ.

ಮೋಡಗಳು, ವಿಪರೀತ ಮಳೆ ರೀತಿಯಲ್ಲಿ ಹವಾಮಾನ ವೈಪರೀತ್ಯ ಎದುರಾದರೆ ರನ್‍ವೇ ಗೋಚರ ಆಗುವವರೆಗೆ ವಿಮಾನ ಆಕಾಶದಲ್ಲಿ ಸುತ್ತಬೇಕಾಗುತ್ತದೆ ಅಥವಾ ಸಮೀಪದ ನಿಲ್ದಾಣದಲ್ಲಿ ವಿಮಾನ ಇಳಿಸಬೇಕಾಗುತ್ತದೆ. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಸರಳವಾಗಿ ನಿಭಾಯಿಸಲು ಐಎಲ್‍ಎಸ್‍ನಿಂದ ವ್ಯವಸ್ಥೆ ಕಲ್ಪಿಸಲಾಗಿದೆ.

ಐಎಲ್‍ಎಸ್ ನೆಲಮಟ್ಟದಿಂದ ಕಾರ್ಯನಿರ್ವಹಿಸುವ ರೇಡಾರ್ ಆಧಾರಿತ ತಂತ್ರಜ್ಞಾನ. ಇದು ಹವಾಮಾನ ವೈಪರೀತ್ಯದ ನಡುವೆಯೂ ವಿಮಾನ ರನ್‍ವೇನಲ್ಲಿ ಲ್ಯಾಂಡ್ ಆಗುವಂತೆ ತರಂಗ ಸಂದೇಶ ನೀಡುತ್ತದೆ. ಇನ್ನೊಂದು ರನ್‍ವೇಯ ಪಕ್ಕದಲ್ಲಿಯೇ ಸ್ಥಾಪಿಸಲಾದ ತರಂಗ ಸ್ತಂಭ (ಆ್ಯಂಟೆನಾ) ವಿಮಾನವನ್ನು ರನ್‍ವೇಯ ಮಧ್ಯಭಾಗಕ್ಕೆ ಹೋಗುವಂತೆ ಲೈಟಿಂಗ್, ತರಂಗ ಸಂದೇಶ ರವಾನಿಸುತ್ತ ಸಹಕರಿಸುತ್ತದೆ. ಆಗಸದಿಂದ ರನ್‍ವೇ ಕಾಣದೆ ಇದ್ದರೂ ತರಂಗಗಳ ಸಂದೇಶದ ಸಹಕಾರದಿಂದ ವಿಮಾನಗಳನ್ನು ಲ್ಯಾಂಡ್ ಮಾಡಬಹುದು. ಒಂದು ವೇಳೆ ವಿಮಾನ ಜಾರಿ ಆ್ಯಂಟಿನಾಕ್ಕೆ ತಾಕಿದರೂ ಲಘುವಾಗಿರುವ ಇವುಗಳು ಬೀಳುತ್ತವೆ ವಿನಃ ವಿಮಾನಕ್ಕೆ ಹಾನಿ ಆಗಲಾರದು.

Click to comment

Leave a Reply

Your email address will not be published. Required fields are marked *