Connect with us

Corona

32 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ- ದೇಶದಲ್ಲಿ ಒಂದೇ ದಿನ 1,059 ಮಂದಿ ಬಲಿ

Published

on

ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಆರ್ಭಟ ಮುಂದುವರಿದಿದೆ. ನಿನ್ನೆಯಷ್ಟೇ 31 ಲಕ್ಷ ದಾಟಿದ್ದ ಸೋಂಕಿರತ ಸಂಖ್ಯೆ ಕಳೆದ 24 ಗಂಟೆಯಲ್ಲಿ 32 ಲಕ್ಷದ ಗಡಿ ದಾಟಿದೆ.

ಒಂದೇ ದಿನ 67,151 ಮಂದಿಯಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದ್ದು, ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 32,34,475 ಕ್ಕೆ ಏರಿಕೆಯಾಗಿದೆ. ಅಲ್ಲದೇ 1,059 ಮಂದಿ ಚೀನಿ ವೈರಸ್ ಗೆ ಬಲಿಯಾಗಿದ್ದಾರೆ.

32,34,475 ಸೋಂಕಿತರ ಸಂಖ್ಯೆಯಲ್ಲಿ 7,07,267 ಸಕ್ರಿಯ ಪ್ರಕರಣಗಳಿದ್ದು, 24,67,759 ಮಂದಿ ಕೋವಿಡ್ 19 ನಿಂದ ಗುಣಮುಖರಾಗಿದ್ದಾರೆ. ಇದೂವರೆಗೂ ದೇಶದಲ್ಲಿ 59,449 ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ದೇಶದಲ್ಲಿ ನಿನ್ನೆ ಒಂದೇ ದಿನ 8,23,992 ಮಂದಿಯನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದೆ. ಈ ಮೂಲಕ ಇದೂವರೆಗೂ 3,76,51,512 ಮಂದಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

Click to comment

Leave a Reply

Your email address will not be published. Required fields are marked *