Connect with us

Karnataka

17 ಸಾವಿರ ಅಡಿ ಎತ್ತರದಲ್ಲಿ ಧ್ವಜ – ಚಳಿಯಲ್ಲೂ ಐಟಿಬಿಪಿಯಿಂದ ದೇಶಪ್ರೇಮ

Published

on

ಲಡಾಖ್: ವೀರಯೋಧರು  ಮೈನಸ್‌ 25 ಡಿಗ್ರಿ ಸೆಲ್ಸಿಯಸ್‌ ಮೈಕೊರೆಯುವ ಚಳಿಯಲ್ಲಿ 17 ಸಾವಿರ ಅಡಿಯ ಎತ್ತರದ ಶಿಖರವನ್ನು ಹತ್ತಿ ಲಡಾಖ್ ಗಡಿಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ.

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) 17 ಸಾವಿರ ಅಡಿ ಮೇಲಕ್ಕೇರಿ ಬಾರ್ಡರ್ ಔಟ್‍ಪೋಸ್ಟ್ ಅಗಿರುವ ಲಡಾಖ್ ಬಳಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಈ ಮೂಲಕವಾಗಿ 72ನೇ ಗಣರಾಜ್ಯೋತ್ಸವವನ್ನು ಆಚರಿಸಿದ್ದಾರೆ. ಮೈಕೊರೆಯವ ಚಳಿಯಲ್ಲಿ ದೇಶಪ್ರೇಮವನ್ನು ಮೆರೆದಿದ್ದಾರೆ.

ಭಾರತ್ ಮಾತಾ ಕೀ ಜೈ ಎನ್ನುವ ಘೋಷಣೆ ಕೂಗುತ್ತಾ ಸಂಭ್ರಮಿಸಿದ್ದಾರೆ. ಹಿಮದ ಮಧ್ಯೆ ಪರೇಡ್ ಮಾಡಿದ್ದಾರೆ. ದೇಶಪ್ರೇಮವನ್ನು ಮರೆದಿರುವ ಸೈನಿಕರ ಈ ವೀಡಿಯೋ ಐಟಿಬಿಪಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಸೈನಿಕರ ದೇಶ ಪ್ರೇಮಕ್ಕೆ ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

Click to comment

Leave a Reply

Your email address will not be published. Required fields are marked *