3 ಕ್ಯಾಚ್ ಡ್ರಾಪ್, ನೀರಸ ಫೀಲ್ಡಿಂಗ್- ವಿಂಡೀಸ್‍ಗೆ 8 ವಿಕೆಟ್ ಗಳ ಜಯ

ತಿರುವನಂತಪುರಂ: ಟಿ20 ಸರಣಿಯ 2ನೇ ಪಂದ್ಯದಲ್ಲೂ ಟೀಂ ಇಂಡಿಯಾ ನಿರಸ ಫೀಲ್ಡಿಂಗ್ ಪ್ರದರ್ಶನ ನೀಡಿದ ಪರಿಣಾಮ ವೆಸ್ಟ್ ಇಂಡೀಸ್ 8 ವಿಕೆಟ್ ಗಳ‌ ಜಯ ಸಾಧಿಸಿದ್ದು, ಮೂರು ಪಂದ್ಯಗಳ ಸರಣಿ ಈಗ 1-1ರಲ್ಲಿ ಜಯ ಸಮಗೊಂಡಿದೆ.

ತಿರುವನಂತಪುರಂನ ಗ್ರೀನ್‍ಫಿಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟಿ-20 ಸರಣಿಯ 2ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಲೆಂಡ್ಲ್ ಸಿಮನ್ಸ್ 67 ರನ್, ಎನಿನ್ ಲೂಯಿಸ್ 40 ರನ್, ನಿಕೋಲಸ್ ಪೂರನ್ 38  ರನ್‍ಗಳ ಸಹಾಯದಿಂದ 18.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ173 ರನ್‍ಗಳಿಸಿ ಭರ್ಜರಿ ಗೆಲುವು ಸಾಧಿಸಿದೆ.

ಕ್ಯಾಚ್ ಡ್ರಾಪ್:
ಇನ್ನಿಂಗ್ಸ್‌ನ 3ನೇ ಓವರ್ ಮುಕ್ತಾಯಕ್ಕೆ ವಿಂಡೀಸ್ ತಂಡವು 22 ರನ್ ಗಳಿಸಿತ್ತು. ಈ ವೇಳೆ ಬೌಲಿಂಗ್ ಆರಂಭಿಸಿದ ವಾಷಿಂಗ್ಟನ್ ಸುಂದರ್ ಕೇವಲ ಒಂದು ನೀಡಿ ರನ್ ರೇಟ್‍ಗೆ ಬ್ರೇಕ್ ಹಾಕಿದರು. ಬಳಿಕ ಬೌಲಿಂಗ್ ಮಾಡಿದ ಭುವನೇಶ್ವರ್ ಕುಮಾರ್ ಕೂಡ ಎರಡು ರನ್ ನೀಡಿ ತಂಡಕ್ಕೆ ಆಸರೆ ಆದರು. ಆದರೆ ಈ ಓವರ್ ನ ಎರಡನೇ ಎಸೆತದಲ್ಲಿ ಲೆಂಡ್ಲ್ ಸಿಮನ್ಸ್ ನೀಡಿದ ಕ್ಯಾಚ್ ಅನ್ನು ವಾಷಿಂಗ್ಟನ್ ಸುಂದರ್ ಕೈಚೆಲ್ಲಿದರು. ಈ ಬೆನ್ನಲ್ಲೇ ನಾಲ್ಕನೇ ಎಸೆತದಲ್ಲಿ ಎನಿನ್ ಲೂಯಿಸ್ ನೀಡಿದ್ದ ಕ್ಯಾಚ್ ಅನ್ನು ರಿಷಭ್ ಪಂತ್ ಕೈಬಿಟ್ಟರು. ಜೀವದಾನ ಪಡೆದ ಈ ಜೋಡಿ ಭರ್ಜರಿ ಬ್ಯಾಟಿಂಗ್ ಮುಂದುವರಿಸಿತು.

ಲೆಂಡ್ಲ್ ಸಿಮನ್ಸ್ ಹಾಗೂ ಎನಿನ್ ಲೂಯಿಸ್ ಜೋಡಿಯು ಇನ್ನಿಂಗ್ಸ್ ನ 9ನೇ ಓವರ್ ಮುಕ್ತಾಯಕ್ಕೆ 71 ರನ್ ಸಿಡಿಸಿತ್ತು. ಬಳಿಕ ವಾಷಿಂಗ್ಟ್ ಸುಂದರ್ ಬೌಲಿಂಗ್ ವೇಳೆ ಕೈಚಳಕ ತೋರಿದ ಪಂತ್ ಎನಿನ್ ಲೂಯಿಸ್ ವಿಕೆಟ್ ಕಿತ್ತರು. ಎನಿನ್ ಲೂಯಿಸ್ 35 ಎಸೆತಗಳಲ್ಲಿ (3 ಬೌಂಡರಿ, 3 ಸಿಕ್ಸರ್) 40 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿದ ಶ್ರಿಮೊನ್ ಹೆಟ್ಮೆಯರ್ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದರು. 13ನೇ ಓವರ್ ನಲ್ಲಿ ಜಡೇಜಾ ಬೌಲಿಂಗ್ ಎರಡು ಸಿಕ್ಸರ್ ಸಿಡಿಸಿದ್ದ ಹೆಟ್ಮೆಯರ್ ಮತ್ತೊಮ್ಮೆ ಬೌಂಡರಿ ಸಿಡಿಸಲು ಯತ್ನಿಸಿ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿದರು. 14 ಎಸೆತಗಳಲ್ಲಿ ಹೆಟ್ಮೆಯರ್ 3 ಸಿಕ್ಸರ್ ಸೇರಿ 23 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಬಳಿಕ ಮೈದಾನಕ್ಕಿಳದ ನಿಕೋಲಸ್ ಪೂರನ್ ಲೆಂಡ್ಲ್ ಸಿಮನ್ಸ್ ಗೆ ಸಾಥ್ ನೀಡಿದರು. ಇನ್ನಿಂಗ್ಸ್ ನ 17ನೇ ಓವರ್ ನಲ್ಲಿ ಶ್ರೇಯಸ್ ಅಯ್ಯರ್ ಕ್ಯಾಚ್ ಕೈಚೆಲ್ಲಿಸಿದರು. ಪರಿಣಾಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿ ವಿಂಡೀಸ್ ಜಯಗಳಿಸಿತು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಶಿವಂ ದುಬೆ 54 ರನ್, ರಿಷಭ್ ಪಂತ್ 33 ರನ್‍ಗಳ ಸಹಾಯದಿಂದ 7 ವಿಕೆಟ್ ನಷ್ಟಕ್ಕೆ 170 ರನ್ ಪೇರಿಸಿತ್ತು.

Leave a Reply

Your email address will not be published. Required fields are marked *