ಕ್ರೀಡಾಂಗಣದ ಮೇಲೆ ವಿಮಾನ ಹಾರಾಟ ನಿಷೇಧ – ಟಾಸ್ ಗೆದ್ದ ಕಿವೀಸ್ ಬ್ಯಾಟಿಂಗ್ ಆಯ್ಕೆ

ಲಂಡನ್: ವಿಶ್ವಕಪ್ ಸೆಮಿ ಫೈನಲ್ ಕದನ ನಡೆಯುತ್ತಿರುವ ಓಲ್ಡ್ ಟ್ರಾರ್ಫಡ್ ಕ್ರೀಡಾಂಗಣದ ಪ್ರದೇಶದಲ್ಲಿ ಬಿಗಿ ಬಂದೋ ಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಈ ಪ್ರದೇಶದ ಮೇಲೆ ವಿಮಾನ ಹಾರಾಟ ನಿಷೇಧ ಮಾಡಲಾಗಿದೆ.

ಶ್ರೀಲಂಕಾ ವಿರುದ್ಧ ಟೂರ್ನಿಯ ಲೀಗ್ ಹಂತದ ಪಂದ್ಯದ ವೇಳೆ ಭಾರತದ ವಿರೋಧಿ ಹೇಳಿಕೆ ಹೊಂದಿದ್ದ ವಿಮಾನ ಹಾರಾಟ ನಡೆಸಿತ್ತು. ಪರಿಣಾಮ ಆಟಗಾರರ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಬಿಸಿಸಿಐ ಕೂಡಲೇ ಐಸಿಸಿಗೆ ಖರವಾದ ಪತ್ರ ಬರೆದು ಕ್ರಮಕೈಗೊಳ್ಳಲು ಕೋರಿತ್ತು.

ಬಿಸಿಸಿಐ ಪತ್ರಕ್ಕೆ ಕ್ರಮಕೈಗೊಂಡಿರುವ ವೇಲ್ಸ್ ಕ್ರಿಕೆಟ್ ಬೋಡ್ (ಇಸಿಬಿ) ಬಿಸಿಸಿಐಗೆ ಮಾಹಿತಿ ನೀಡಿದೆ. ಆಟಗಾರರ ಭದ್ರತೆ ಬಗ್ಗೆ ನಮಗೆ ಅರಿವಿದೆ. ಈಗಾಗಲೇ ಬಿಗಿ ಭದ್ರತೆ ವಹಿಸಲಾಗಿದೆ. ಕ್ರೀಡಾಂಗಣದ ಪ್ರದೇಶವನ್ನು ‘ನೋ ಫ್ಲೈಯಿಂಗ್ ಝೋನ್’ ಎಂದು ಘೋಷಣೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಯಾವುದೇ ಅಂತರಾಷ್ಟ್ರೀಯ ಪಂದ್ಯ ನಡೆಯುವ ಕ್ರೀಡಾಂಗಣದ ಮೇಲೆ ಯಾವುದೇ ಒಂದು ದೇಶದ ವಿರೋಧವಾಗಿ ಅಥವಾ ಜನಾಂಗದ ವಿರೋಧವಾಗಿ ಘೋಷಣೆ ಮಾಡುವುದು ನಿಯಮ ಬಾಹಿರವಾಗಿದೆ. ಐಸಿಸಿದಂತಹ ಟೂರ್ನಿಯಂತಹ ಪಂದ್ಯಗಳ ವೇಳೆಯೇ ಇಂತಹ ಘಟನೆ ನಡೆದಿರುವ ಬಗ್ಗೆ ಬಿಸಿಸಿಐ ಅಸಮಾಧಾನ ವ್ಯಕ್ತಪಡಿಸಿತ್ತು.

ಚಹಲ್ ಇನ್: ಇತ್ತ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವೂ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಪಂದ್ಯಕ್ಕೆ ಮಳೆ ಅಡ್ಡ ಪಡಿಸುವ ಭೀತಿ ಇದ್ದು, ಇತ್ತಂಡಗಳು ಗೆಲುವಿವಾಗಿ ಹೋರಾಟ ನಡೆಸಿದೆ. ಇತ್ತ ಶ್ರೀಲಂಕಾ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ಚಹಲ್ ತಂಡಕ್ಕೆ ಸೇರ್ಪಡೆಯಾಗಿದ್ದು, ಜಡೇಜಾ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಕುಲ್ದೀಪ್ ಯಾದವ್ ತಂಡದಿಂದ ಹೊರಗುಳಿದಿದ್ದಾರೆ.

Leave a Reply

Your email address will not be published. Required fields are marked *