Connect with us

Corona

ದೇಶದಲ್ಲಿ ಒಂದೇ ದಿನ 63 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ

Published

on

– ಸೋಂಕಿತರ ಸಂಖ್ಯೆ 72 ಲಕ್ಷಕ್ಕೇರಿಕೆ

ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ದೇಶದಲ್ಲಿ ದಿನದಿಂದ ದಿನಕ್ಕೆ ತನ್ನ ರೌದ್ರನರ್ತನವನ್ನು ತೋರಿಸುತ್ತಿದ್ದು, ಇದೀಗ ಸೋಂಕಿತರ ಸಂಖ್ಯೆ 72 ಲಕ್ಷದ ಗಡಿ ದಾಟಿದೆ.

ಕಳೆದ 24 ಗಂಟೆಯಲ್ಲಿ 63,509 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 72,39,390 ಆಗಿದೆ. ಸೋಂಕಿತರ ಪೈಕಿ 8,26,876 ಸಕ್ರಿಯ ಪ್ರಕರಣಗಳಿದ್ದರೆ, 63,01,928 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಒಂದೇ ದಿನ 730 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದುವರೆಗೆ ದೇಶದಲ್ಲಿ 1,10,586 ಮಂದಿ ಮೃತಪಟ್ಟಿದ್ದಾರೆ. ಒಟ್ಟಿನಲ್ಲಿ ಪ್ರತಿನಿತ್ಯ ಸರಾಸರಿ 90 ಸಾವಿರದ ಗಡಿಯಲ್ಲಿದ್ದ ಹೊಸ ಪ್ರಕರಣಗಳ ಪ್ರಮಾಣ ಕಳೆದ ಐದು ದಿನಗಳಿಂದ ಇಳಿಮುಖವಾಗಿದೆ. ಹೊಸ ಪ್ರಕರಣಗಳು ಇಳಿಮುಖವಾಗಿರುವುದರಿಂದ ದೇಶವು ನಿಧಾನವಾಗಿ ಕೊರೊನಾದಿಂದ ಹೊರಬರುತ್ತಿದೆ ಎಂಬ ಅಶಾಭಾವವನ್ನು ಮೂಡಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಸಾವಿನ ವಿಚಾರದಲ್ಲಿ ಭಾರತ ದಿ ಬೆಸ್ಟ್ ಎನಿಸಿಕೊಂಡಿದ್ದು, ಇಡೀ ವಿಶ್ವಕ್ಕೆ ಹೋಲಿಸಿದರೆ ಭಾರತದಲ್ಲಿ ಅತಿ ಕಡಿಮೆ ಕೊರೊನಾ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಪ್ರತಿ ಮಿಲಿಯನ್ ಜನಸಂಖ್ಯೆಗೆ ಹೊಲಿಸಿಕೊಂಡ್ರೆ ಸಾವಿನ ಸಂಖ್ಯೆ ಕಡಿಮೆ ಇದೆ. ವಿಶ್ವದಲ್ಲಿ ಪ್ರತಿ ಮಿಲಿಯನ್ ಜನ ಜನಸಂಖ್ಯೆಗೆ 138 ಮಂದಿ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿ ಕೊರೊನಾದಿಂದ ಪ್ರತಿ ಮಿಲಿಯನ್ ಜನ ಸಂಖ್ಯೆಗೆ 79 ಮಂದಿ ಸಾವನ್ನಪ್ಪಿದರೆ, ರಷ್ಯಾದಲ್ಲಿ 156, ಸೌತ್ ಆಫ್ರಿಕಾದಲ್ಲಿ 300, ಫ್ರಾನ್ಸ್ ನಲ್ಲಿ 498, ಬ್ರಿಟನ್ ನಲ್ಲಿ 631, ಅಮೆರಿಕದಲ್ಲಿ 642, ಬ್ರೇಜಿಲ್ ನಲ್ಲಿ 706 ಮಂದಿ ಬಲಿಯಾಗುತ್ತಿದ್ದಾರೆ.

ದೇಶದಲ್ಲಿ ನಿನ್ನೆ ಒಂದೇ ದಿನ 11,45,015 ಮಂದಿಯನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದೆ. ಈ ಮೂಲಕ ಇದೂವರೆಗೂ 9,00,90,122 ಮಂದಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

Click to comment

Leave a Reply

Your email address will not be published. Required fields are marked *

www.publictv.in