Connect with us

Corona

24 ಗಂಟೆಯಲ್ಲಿ 3,780 ಸಾವು- 15 ರಾಜ್ಯಗಳಲ್ಲಿ ಹೆಚ್ಚಾದ ಕೊರೊನಾ ವೇಗ

Published

on

ನವದೆಹಲಿ: ಕಳೆದ 24 ಗಂಟೆಯಲ್ಲಿ ರಾಕ್ಷಸಿ ಕೊರೊನಾ 3,780 ಜನರನ್ನು ಬಲಿ ಪಡೆದುಕೊಂಡಿದೆ. 15 ರಾಜ್ಯಗಳಲ್ಲಿ ಕೊರೊನಾ ತನ್ನ ಹರಡುವಿಕೆ ಪ್ರಮಾಣದ ವೇಗವನ್ನ ಹೆಚ್ಚಿಸಿಕೊಂಡಿದೆ.

ಕಳೆದ 24 ಗಂಟೆಯಲ್ಲಿ ಒಟ್ಟು 3,82,315 ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 2,06,65,148ಕ್ಕೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ 34,87,226 ಸಕ್ರಿಯ ಪ್ರಕರಣಗಳಿದ್ದು, ಇದವರೆಗೂ 2,26,188 ಜನರು ಸಾವನ್ನಪ್ಪಿದ್ದಾರೆ. ನಿನ್ನೆ ಒಂದೇ ದಿನ 3,38,439 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ತಮಿಳುನಾಡು, ಆಂಧ್ರ ಪ್ರದೇಶ, ದೆಹಲಿ, ರಾಜಸ್ಥಾನ, ಹರಿಯಾಣ, ಬಿಹಾರ, ಗುಜರಾತ, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳ, ಪಂಜಾಬ್, ಉತ್ತರಾಖಂಡ, ಜಾರ್ಖಂಡ್ ನಲ್ಲಿ ಕೊರೊನಾ ವೇಗ ಹೆಚ್ಚಾಗುತ್ತಿದೆ.

Click to comment

Leave a Reply

Your email address will not be published. Required fields are marked *