Connect with us

ಎಲ್ಲ ಕೊರೊನಾ ದಾಖಲೆಗಳು ಉಡೀಸ್ – 24 ಗಂಟೆಯಲ್ಲಿ 2,34,692 ಜನಕ್ಕೆ ಸೋಂಕು

ಎಲ್ಲ ಕೊರೊನಾ ದಾಖಲೆಗಳು ಉಡೀಸ್ – 24 ಗಂಟೆಯಲ್ಲಿ 2,34,692 ಜನಕ್ಕೆ ಸೋಂಕು

ನವದೆಹಲಿ: ದೇಶದಲ್ಲಿ ಮರಣಮಾರಿ ಕೊರೊನಾ ವೈರಸ್ ತನ್ನ ಎಲ್ಲ ದಾಖಲೆಗಳ ನ್ನು ಉಡೀಸ್ ಮಾಡಿದೆ. 24 ಗಂಟೆಯಲ್ಲಿ 2,34,692 ಜನಕ್ಕೆ ಸೋಂಕು ತಗುಲಿದ್ದು, 1,341 ಸೋಂಕಿತರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಛತ್ತೀಸ್‍ಗಢ ಮತ್ತು ಕರ್ನಾಟಕ ಹೊಸ ಕೊರೊನಾ ಪ್ರಕರಣಗಳಲ್ಲಿ ಮುನ್ನಲೆಯಲ್ಲಿವೆ.

ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 1,45,26,609ಕ್ಕೆ ಏರಿಕೆಯಾಗಿದ್ದು, 16,79,740 ಸಕ್ರಿಯ ಪ್ರಕರಣಗಳಿವೆ. ಸಾವನ್ನಪ್ಪಿದವರ ಸಂಖ್ಯೆ 1,75,649ಕ್ಕೆ ಏರಿಕೆಯಾಗಿದೆ. ಇದುವರೆಗೂ 11,99,37,641 ಜನ ಕೊರೊನಾ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಅತ್ಯಧಿಕ 63,7298 ಕೊರೊನಾ ಪ್ರಕರಣಗಳು ವರದಿಯಾಗಿವೆ. ಉತ್ತರ ಪ್ರದೇಶ 27,360, ದೆಹಲಿ 19,486, ಛತ್ತೀಸ್‍ಗಢ 14,912 ಮತ್ತು ಕರ್ನಾಟಕದಲ್ಲಿ 14,859 ಕೋವಿಡ್ ಪ್ರಕರಣಗಳು ವರದಿಯಾಗಿವೆ. ದೇಶದ ಒಟ್ಟು ಪ್ರಕರಣ ಪೈಕಿ ಮಹಾರಾಷ್ಟ್ರದಲ್ಲಿಯೇ ಶೇ.27.15ರಷ್ಟು ವರದಿಯಾಗಿವೆ. ಐದು ರಾಜ್ಯಗಳಿಂದಲೇ ಶೇ.59.79 ಕೊರೊವಾ ಪ್ರಕರಣಗಳು ದಾಖಲಾಗಿವೆ.

Advertisement
Advertisement