Connect with us

Latest

ಸಿಕ್ಸರ್‌, ಬೌಂಡರಿ ಚಚ್ಚಿ ಭಾರತದ ಪರ ದಾಖಲೆ ಬರೆದ ಪಾಂಡ್ಯ

Published

on

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಭಾರತದ ಪರ ದಾಖಲೆ ಬರೆದಿದ್ದಾರೆ.

ಹಾರ್ದಿಕ್‌ ಪಾಂಡ್ಯ 857 ಎಸೆತಗಳಲ್ಲಿ 1 ಸಾವಿರ ರನ್‌ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಕಡಿಮೆ ಎಸೆತದಲ್ಲಿ ಸಾವಿರ ರನ್‌ ಪೂರ್ಣಗೊಳಿಸಿದ ಆಟಗಾರ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಈ ಪಂದ್ಯಕ್ಕೂ ಮುನ್ನ 54 ಏಕದಿನದ 38 ಇನ್ನಿಂಗ್ಸ್‌ ಆಡಿದ್ದ ಪಾಂಡ್ಯ 957 ರನ್‌ ಹೊಡೆದಿದ್ದರು. ಇಂದು 43 ರನ್‌ ಹೊಡೆಯುವ ಮೂಲಕ ಸಾವಿರ ರನ್‌ಗಳ ಗಡಿಯನ್ನು ದಾಟಿದರು.

ಕಡಿಮೆ ಎಸೆತದಲ್ಲಿ ಸಾವಿರ ರನ್‌ ಪೂರ್ಣಗೊಳಿಸಿದ ವಿಶ್ವದ ಆಟಗಾರರ ಪೈಕಿ ವೆಸ್ಟ್‌ಇಂಡೀಸ್‌ ಆಟಗಾರ ಆಂಡ್ರೆ ರಸೆಲ್‌ ಮೊದಲ ಸ್ಥಾನದಲ್ಲಿದ್ದಾರೆ. ಪಾಂಡ್ಯ 5ನೇ ಸ್ಥಾನದಲ್ಲಿದ್ದಾರೆ. ರಸೆಲ್‌ 767 ಎಸೆತದಲ್ಲಿ ಸಾವಿರ ರನ್‌ ಹೊಡೆದಿದ್ದರು.

ನಂತರದ ಸ್ಥಾನದಲ್ಲಿ ನ್ಯೂಜಿಲೆಂಡ್‌ನ ಲ್ಯೂಕ್ ರೊಂಚಿ(807 ಎಸೆತ), ಪಾಕಿಸ್ತಾನ ಶಾಹಿದ್‌ ಅಫ್ರಿದಿ(834 ಎಸೆತ), ನ್ಯೂಜಿಲೆಂಡಿನ ಕೊರೆ ಆಂಡರ್‌ಸನ್‌(854 ಎಸೆತ), ಹಾರ್ದಿಕ್ ಪಾಂಡ್ಯ(857), ಇಂಗ್ಲೆಂಡಿನ ಜೋಸ್‌ ಬಟ್ಲರ್‌(860 ಎಸೆತ) ಇದ್ದಾರೆ.

ಇಂದಿನ ಪಂದ್ಯದಲ್ಲಿ 31 ಎಸೆತದಲ್ಲಿ ಅರ್ಧಶತಕ ಹೊಡೆದ ಪಾಂಡ್ಯ(3 ಬೌಂಡರಿ, 4 ಸಿಕ್ಸರ್‌) ಅಂತಿಮವಾಗಿ 90 ರನ್‌(76 ಎಸೆತ, 7 ಬೌಂಡರಿ, 4 ಸಿಕ್ಸರ್‌) ಹೊಡೆದು ಔಟಾದರು.

Click to comment

Leave a Reply

Your email address will not be published. Required fields are marked *

www.publictv.in