Connect with us

Davanagere

ಬಿಜೆಪಿ ಪರ ಒನ್ ಟು ಡಬಲ್ ಬೆಟ್ಟಿಂಗ್ – ಎಕ್ಸಿಟ್ ಪೋಲ್ ನಂತರ ಬೆಟ್ಟಿಂಗ್ ಹವಾ

Published

on

ದಾವಣಗೆರೆ: ಎಕ್ಸಿಟ್ ಪೋಲ್ ಸಮೀಕ್ಷೆಗಳ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಬೆಟ್ಟಿಂಗ್ ಹವಾ ಜೋರಾಗಿದ್ದು, ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.

ದೇಶದಲ್ಲಿ ಏಳು ಹಂತದಲ್ಲಿ ನಡೆದ ಲೋಕಸಭಾ ಚುನಾವಣೆಗೆ ತೆರೆ ಬಿದ್ದಿದೆ. ಏಕ್ಸಿಟ್ ಪೋಲ್ ಸಮೀಕ್ಷೆಗಳು ಜೋರಾಗಿದ್ದು ಮೋದಿ ನೇತೃತ್ವದ ಬಿಜೆಪಿ ಪಕ್ಷ ಮುಂಚೂಣಿಯಲ್ಲಿದೆ. ಈ ಸಮೀಕ್ಷೆಗಳ ಫಲಿತಾಂಶವನ್ನೇ ಆಧಾರವಾಗಿ ಇಟ್ಟಿಕೊಂಡು ಕಾಂಗ್ರೆಸ್ ಪರ 1 ಟು 1 ಕಟ್ಟಿದ್ರೆ, ಬಿಜೆಪಿ ಪರ 1 ಟು ಡಬಲ್ ಬೆಟ್ಟಿಂಗ್ ಕಟ್ಟುತ್ತಿರುವ ವಿಚಾರ ಬೆಳಕಿಗೆ ಬಂದಿದೆ.


ಸತತವಾಗಿ ನಾಲ್ಕನೇ ಬಾರಿ ಬಿಜೆಪಿ ಅಭ್ಯರ್ಥಿ ಜಿ.ಎಂ ಸಿದ್ದೇಶ್ವರ್ ಗೆಲುವು ಸಾಧಿಸುತ್ತಾರೆ ಎಂದು ಬಿಜೆಪಿ ಕಾರ್ಯಕರ್ತರು ಬೆಟ್ಟಿಂಗ್ ಕಟ್ಟಿದರೆ. ಈ ಬಾರಿ ಅಹಿಂದ ಅಭ್ಯರ್ಥಿ ಹೆಚ್.ಬಿ ಮಂಜಪ್ಪ ಗೆಲುವು ಸಾಧಿಸುವುದು ಪಕ್ಕ ಎಂದ ಕಾಂಗ್ರೆಸ್ ಕಾರ್ಯಕರ್ತರು ಬೆಟ್ಟಿಂಗ್ ಮಾಡಿದ್ದಾರೆ. ತಮ್ಮ ನೆಚ್ಚಿನ ನಾಯಕರು ಗೆಲ್ಲುತ್ತಾರೆ ಎಂದು ಹಣ, ಕಾರು, ವಸ್ತುಗಳನ್ನು ಬೆಟ್ಟಿಂಗ್‍ಗೆ ಕಟ್ಟುತ್ತಿದ್ದಾರೆ. ಆಟೋ ಮಾಲೀಕರಿಂದ ಹಿಡಿದು ಜನ ಸಾಮಾನ್ಯರು ಕೂಡ ಬೆಟ್ಟಿಂಗ್ ಕಟ್ಟುತ್ತಿದ್ದಾರೆ ಎನ್ನಲಾಗಿದೆ.

ಬಿಜೆಪಿ ಅಭ್ಯರ್ಥಿ ಜಿ.ಎಂ ಸಿದ್ದೇಶ್ವರ್ ಗೆಲುವು ಸಾಧಿಸುವುದು ಪಕ್ಕ ಎಂದು ಬಿಜೆಪಿ ಕಾರ್ಯಕರ್ತರಿಂದ ಬೆಟ್ಟಿಂಗ್ ಜೋರಾಗಿ ನಡೆಯುತ್ತಿದೆ ಎನ್ನಲಾಗಿದೆ. ಬೆಟ್ಟಿಂಗ್ ನಿಯಂತ್ರಣ ಮಾಡಬೇಕು ಎಂದು ಸಾರ್ವಜನಿಕರ ಮತ್ತು ಸ್ಥಳೀಯರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.