LatestMain PostNational

ಆಫ್ಘನ್ ಮಹಿಳೆಯರ ಶಿಕ್ಷಣ ಬಗ್ಗೆ ಮಾತನಾಡಿ ಟ್ರೋಲ್‍ಗೆ ಒಳಗಾದ ಪಾಕ್ ಪ್ರಧಾನಿ

ಇಸ್ಲಾಮಾಬಾದ್: ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡದಿರುವುದು ಆಫ್ಘನ್ ಸಂಸ್ಕೃತಿಯ ಭಾಗವಾಗಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿವಾದಿತ ಹೇಳಿಕೆ ನೀಡಿದ್ದಾರೆ.

ಇಸ್ಲಾಮಿಕ್ ಸಹಕಾರ ಸಂಘ ಆಯೋಜಿಸಿದ್ದ ಶೃಂಗಸಭೆಯಲ್ಲಿ ಮಾತನಾಡುವ ವೇಳೆ ಇಮ್ರಾನ್ ಖಾನ್, ತಾಲಿಬಾನ್ ಸಮರ್ಥಿಸಿಕೊಳ್ಳುತ್ತಾ ಹೆಣ್ಣುಮಕ್ಕಳಿಗೆ ಶಿಕ್ಷಣ ಒದಗಿಸದಿರುವುದು ಆಫ್ಘನ್ ಸಂಸ್ಕೃತಿಯ ಭಾಗ ಎಂದಿದ್ದಾರೆ. ದನ್ನೂ ಓದಿ: ರಾಹುಲ್ ಗಾಂಧಿ ನಿಜವಾದ ಹಿಂದೂ ಅಲ್ಲ: ನಾರಾಯಣಸ್ವಾಮಿ ವಾಗ್ದಾಳಿ

PAK

ಕಾಬೂಲ್ ನಗರದಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ಮಹಿಳೆಯರ ಫೋಟೋಗಳನ್ನು ಬಳಸುವುದನ್ನು ಮತ್ತು ಇಸ್ಲಾಮಿಕ್ ನಿಯಮಗಳ ವಿರುದ್ಧವಾಗಿ ಫೋಟೋಗಳನ್ನು ಹಾಕುವುದನ್ನು ನಿಷೇಧಿಸಿದೆ. ಈ ವಿಚಾರವಾಗಿ ಎಲ್ಲಡೆ ಟೀಕೆ ವ್ಯಕ್ತವಾಗುತ್ತಿದೆ. ದನ್ನೂ ಓದಿ: ಪಾದಯಾತ್ರೆ ಹಿನ್ನೆಲೆ ಕೊಡಗಿನ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ

ಮಾನವ ಹಕ್ಕುಗಳ ಸಂಘಟನೆ ಪ್ರಕಾರ 2021 ಅಫ್ಘಾನಿಸ್ತಾನ ಮಹಿಳೆಯರ ಪಾಲಿಗೆ ಕೆಟ್ಟ ವರ್ಷವಾಗಿದೆ. ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬರುವುದರೊಂದಿಗೆ ಮಹಿಳೆಯರಿಗೆ ದೇಶದಲ್ಲಿದ್ದ ಅಷ್ಟಿಷ್ಟು ಹಕ್ಕುಗಳು, ಸ್ವಾತಂತ್ರ್ಯ ಕಳೆದುಹೋಗಿದೆ.

Leave a Reply

Your email address will not be published.

Back to top button