ನನಗೆ ನಿದ್ದೆಯಲ್ಲಿ ನಡೆದಾಡುವ ಕಾಯಿಲೆ ಇದೆ: ನಟಿ ಇಲಿಯಾನಾ

ಮುಂಬೈ: ಬಹುಭಾಷಾ ನಟಿ ಇಲಿಯಾನಾ ಅವರು ತಮಗೆ ನಿದ್ದೆಯಲ್ಲಿ ನಡೆದಾಡುವ ಕಾಯಿಲೆ ಇದೆ ಎಂಬ ವಿಷಯವನ್ನು ರಿವೀಲ್ ಮಾಡಿದ್ದಾರೆ.

ಇಲಿಯಾನಾ ಅವರು ತಮ್ಮ ಟ್ವಿಟ್ಟರಿನಲ್ಲಿ ತನಗಿರುವ ಕಾಯಿಲೆ ಬಗ್ಗೆ ರಿವೀಲ್ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ನನಗೆ ನಿದ್ದೆಯಲ್ಲಿ ನಡೆದಾಡುವ ಕಾಯಿಲೆ ಇದೆ ಎಂದು ನಾನು ಒಪ್ಪಿಕೊಂಡಿದ್ದೇನೆ. ಅಲ್ಲದೇ ಬೆಳಗ್ಗೆ ಎದ್ದಾಗ ನನ್ನ ಕಾಲಿನಲ್ಲಿ ಊತ ಕಾಣಿಸಿಕೊಳ್ಳುವುದರ ಜೊತೆಗೆ ಕಾಲಿಗೆ ಗಾಯಗಳಾಗಿರುತ್ತವೆ. ಇದನ್ನು ಹೇಗೆ ಎಂದು ಹೇಳಲು ನನಗೆ ಬೇರೆ ದಾರಿಯಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ನಟಿ ಇಲಿಯಾನಾ ಈ ಟ್ವೀಟ್ ಮಾಡುತ್ತಿದ್ದಂತೆ, ಕೆಲವರು ರೂಮಿನಲ್ಲಿ ಮತ್ತು ಮನೆಯಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿಸಿಕೊಳ್ಳುವಂತೆ ಸಲಹೆ ಕೊಟ್ಟಿದ್ದಾರೆ. ಮತ್ತೆ ಕೆಲವರು ತಕ್ಷಣವೇ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಕಮೆಂಟ್ ಮಾಡಿದ್ದಾರೆ.

ಇತ್ತೀಚೆಗೆ ಇಲಿಯಾನಾ ಅವರು ತಮ್ಮ ಬಹುಕಾಲದ ಆಸ್ಟ್ರೇಲಿಯಾ ಗೆಳೆಯನ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬಿ-ಟೌನ್‍ನಲ್ಲಿ ಹರಿದಾಡುತ್ತಿತ್ತು. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಇಲಿಯಾನಾ ಹಾಗೂ ಅವರ ಗೆಳೆಯ ಆ್ಯಂಡ್ರ್ಯೂ ನೀಬೋನ್ ಪರಸ್ಪರ ಅನ್‍ಫಾಲೋ ಮಾಡಿದ್ದಾರೆ. ಬಳಿಕ ಸ್ವತಃ ಇಲಿಯಾನಾ ಅವರೇ ಬ್ರೇಕಪ್ ಮಾಡಿಕೊಂಡಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದರು.

ಸದ್ಯ ಇಲಿಯಾನಾ `ಪಾಗಲ್‍ಪಂತಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟ ಜಾನ್ ಅಬ್ರಾಹಂ, ಅನಿಲ್ ಕಪೂರ್, ಅರ್ಷದ್ ವಾರ್ಸಿ ಹಾಗೂ ನಟಿ ಕೃತಿ ಕರಬಂಧ ಅಭಿನಯಿಸುತ್ತಿದ್ದಾರೆ. ನವೆಂಬರ್ 22ರಂದು ಈ ಚಿತ್ರ ಬಿಡುಗಡೆ ಆಗಲಿದೆ.

Leave a Reply

Your email address will not be published. Required fields are marked *