Wednesday, 17th July 2019

8 ಮಕ್ಕಳಿದ್ದರೂ ಸ್ನೇಹಿತನ ಪತ್ನಿಯ ಜೊತೆ ಲವ್ವಿಡವ್ವಿ-ಲವರ್ ಜೊತೆ ಸೇರಿ ಗಂಡನನ್ನೇ ಕೊಂದ ಪತ್ನಿ

ಬಳ್ಳಾರಿ: ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಪತ್ನಿಯನ್ನು ಪ್ರೀತಿಸಿ ಕೊನೆಗೆ ಪ್ರೇಯಸಿಯ ಜೊತೆಗೂಡಿ ಆಪ್ತಮಿತ್ರನನ್ನೆ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಖಾನಾಹೊಸಹಳ್ಳಿಯಲ್ಲಿ ನಡೆದಿದೆ.

ಮಹ್ಮದ್ ಫಯಾಜ್ ಕೊಲೆಯಾದ ದುರ್ದೈವಿ. ಪತ್ನಿ ಫಮೀದಾ ಹಾಗೂ ಆಪ್ತಮಿತ್ರ ನೂರೂಲ್ಲಾ ಇಬ್ಬರು ಸೇರಿ ಫಯಾಜ್ ನನ್ನು ಕೊಲೆ ಮಾಡಿದ್ದಾರೆ. ಪತಿಯನ್ನು ಕೊಲೆಗೈದು ಕಾರಿನಲ್ಲಿ ಮದ್ಯದ ಬಾಟಲಿ, ಸ್ತ್ರೀಯರ ಒಳ ಉಡುಪು ಮತ್ತು ಚಪ್ಪಲಿಗಳನ್ನಿಟ್ಟು ಪೊಲೀಸರ ದಿಕ್ಕು ತಪ್ಪಿಸಲು ಮುಂದಾಗಿದ್ದರು. ಆದರೆ ಇದೀಗ ಅವರಿಬ್ಬರು ಪೊಲೀಸರ ಅತಿಥಿಯಾಗಿದ್ದಾರೆ.

ಕೊಲೆಯಾದ ಮಹ್ಮದ್ ಫಯಾಜ್ ಹಾಗೂ ಫಮೀದಾ ಮದುವೆಯಾಗಿ 12 ವರ್ಷಗಳಾಗಿದ್ದು, ಇಬ್ಬರು ಮಕ್ಕಳು ಕೂಡ ಇದ್ದರು. ಮಹ್ಮದ್ ಫಯಾಜ್ ಆರೋಪಿ ನೂರೂಲ್ಲಾ ಆಪ್ತ ಸ್ನೇಹಿತರಾಗಿದ್ದರು. ನೂರೂಲ್ಲಾ ಸ್ನೇಹಿತನ ಮನೆ ಹಾಗೂ ಫಮೀದಾ ನಡೆಸುತ್ತಿದ್ದ ಕಿರಾಣಿ ಅಂಗಡಿಗೆ ಬಂದು ಹೋಗುತ್ತಿದ್ದನು. ನೂರೂಲ್ಲಾ ಆಪ್ತಮಿತ್ರನ ಪತ್ನಿಯೊಂದಿಗೆ ಕಳೆದ 2 ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದನು. ನೂರೂಲ್ಲಾ ಲೈನ್‍ಮ್ಯಾನ್ ಕೆಲಸ ಮಾಡುತ್ತಿದ್ದು, ಮದುವೆಯಾಗಿ 8 ಮಕ್ಕಳಿದ್ದರು ಸ್ನೇಹಿತನ ಪತ್ನಿಯ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು.

ಫಮೀದಾಳ ಅನೈತಿಕ ಸಂಬಂಧದ ಬಗ್ಗೆ ಮಹಮ್ಮದ್ ಫಯಾಜ್‍ಗೆ ಗೊತ್ತಾಗುತ್ತಿದ್ದಂತೆ, ಇಬ್ಬರು ಸೇರಿ ಫಯಾಜ್‍ನನ್ನ ನೀರಿನಲ್ಲಿ ನಿದ್ರೆ ಮಾತ್ರೆ ಹಾಕಿ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಹೊಸಪೇಟೆ- ಬೆಂಗಳೂರು ಹೆದ್ದಾರಿ ಮಧ್ಯೆ ಕಾರನ್ನ ನಿಲ್ಲಿಸಿ ಯಾರೋ ಕೊಲೆ ಮಾಡಿದ್ದಾರೆ ಅನ್ನೋ ರೀತಿ ಬಿಂಬಿಸಲು ಹೋಗಿದ್ದಾರೆ. ಆದರೆ ಫಯಾಜ್ ಪತ್ನಿ ಫಮೀದಾಳ ಪ್ಲಾನ್ ಪೊಲೀಸರ ತನಿಖೆಯಿಂದ ಬಯಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅರುಣ ರಂಗರಾಜನ್ ಹೇಳಿದ್ದಾರೆ.

ಈ ಪ್ರಕರಣದ ಬಗ್ಗೆ ಕೂಟ್ಟೂರು ಸಿಪಿಐ ರವೀಂದ್ರ ಕುರಬಗಟ್ಟಿ ನೇತೃತ್ವದ ತಂಡ ತನಿಖೆ ನಡೆಸುತ್ತಿದ್ದಂತೆ ಲೈನಮ್ಯಾನ್ ಹಾಗೂ ಫಮಿದಾರ ಅಕ್ರಮ ಸಂಬಂಧದಿಂದ ಕೊಲೆಯಾಗಿರುವುದು ಇದೀಗ ಬೆಳಕಿಗೆ ಬಂದಿದೆ. ಹೀಗಾಗಿ ಖಾನಾಹೊಸಹಳ್ಳಿ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿ ಕಂಬಿ ಹಿಂದೆ ಕಳುಹಿಸುವಲ್ಲಿ ಯಶ್ವಸಿಯಾಗಿದ್ದಾರೆ. ಅಲ್ಲದೇ ಪೊಲೀಸರ ದಿಕ್ಕನ್ನೆ ತಪ್ಪಿಸಲು ಮುಂದಾಗಿದ್ದ ಆರೋಪಿ ಪ್ರಕರಣವನ್ನ ಮೂರೇ ದಿನದಲ್ಲಿ ಕೊಟ್ಟೂರು ಪೊಲೀಸರು ಬೇಧಿಸಿರುವುದು ನಿಜಕ್ಕೂ ವಿಶೇಷವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *