Districts
ಸರ್ಕಾರಿ ಜಾಗದಲ್ಲಿ ಪೆಟ್ರೋಲ್ ಬಂಕ್ – ಅಧಿಕಾರಿಗಳಿಂದ ತೆರವು ಕಾರ್ಯ

ಕೋಲಾರ : ನಗರದ ಹೃದಯ ಭಾಗದಲ್ಲಿ ಸರ್ಕಾರಿ ಜಾಗದಲ್ಲಿದ್ದ ಪೆಟ್ರೋಲ್ ಬಂಕ್ ಒಂದನ್ನು ಕಂದಾಯ ಇಲಾಖೆ ಅಧಿಕಾರಿಗಳು ಇಂದು ತೆರವುಗೊಳಿಸಿದ್ದಾರೆ.
ಕೋಲಾರ ಉಪ ವಿಭಾಗಾಧಿಕಾರಿ ಸೋಮಶೇಖರ್ ಹಾಗೂ ತಹಶೀಲ್ದಾರ್ ಶೋಭಿತಾ ನೇತೃತ್ವದಲ್ಲಿ ಕೋಲಾರದ ಟೀಕಲ್ ರಸ್ತೆ ಬಳಿಯಿರುವ ಇಂಡಿಯನ್ ಆಯಿಲ್ ಬಂಕ್ ತೆರವುಗೊಳಿಸಲಾಯಿತು.
ತೆರವು ಸಂದರ್ಭದಲ್ಲಿ ಅಧಿಕಾರಗಳ ಮತ್ತು ಪೆಟ್ರೋಲ್ ಬಂಕ್ ಮಾಲೀಕ ಸತೀಶ್ ನಡುವೆ ನಡುವೆ ಮಾತಿನ ಚಕಮಕಿ ನಡೆಯಿತು.
1948ರಲ್ಲಿ ನಮ್ಮ ತಂದೆಯವರು ಬೇರೆಯವರಿಂದ ಈ ಜಾಗವನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಪೆಟ್ರೋಲ್ ಬಂಕ್ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳಿಂದ ಅನುಮತಿ ಪಡೆಯಲಾಗಿದೆ. ಈಗ ಏಕಾಏಕಿ ಪೆಟ್ರೋಲ್ ಬಂಕ್ ತೆರವುಗೊಳಿಸುತ್ತಿರುವುದು ಎಷ್ಟು ಸರಿ ಎಂದು ಬಂಕ್ ಮಾಲೀಕರು ಪ್ರಶ್ನೆ ಮಾಡಿದ್ದಾರೆ.
ಮಾತಿನ ಚಕಮಕಿ ನಡೆದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
