Crime
ಡಾಬಾ ಹೆಸರಿನಲ್ಲಿ ರಾಜಕೀಯ ಮುಖಂಡನ ಸೆಕ್ಸ್ ದಂಧೆ

– ಹೊರಗೊಂದು, ಒಳಗೊಂದು ಡಾಬಾದ ಕಳ್ಳಾಟ ಬಯಲು
– ಊಟಕ್ಕೆ ಬರೋರಿಗೆ ಹುಡುಗಿಯರ ಸಪ್ಲೈ
ಚಂಡೀಗಢ: ಡಾಬಾದ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಪಂಜಾಬ್ ರಾಜ್ಯದ ಗುರುದಾಸ್ಪುರ ಜಿಲ್ಲೆಯ ಟೀನಾನಗರದಲ್ಲಿ ಡಾಬಾ ಹೆಸರಿನಲ್ಲಿ ಸೆಕ್ಸ್ ದಂಧೆ ನಡೆಯುತ್ತಿತ್ತು.
ಕಳೆದ ಒಂದೂವರೆ ವರ್ಷದಿಂದ ಡಾಬಾದಲ್ಲಿ ಮಾಂಸದಂಧೆ ನಡೆಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರ ತಂಡ ಕೋಣೆಯಲ್ಲಿದ್ದ ಜೋಡಿ ಮತ್ತು ಓರ್ವನನ್ನು ಬಂಧಿಸಿದ್ದಾರೆ. ಡಾಬಾಗೆ ಹುಡುಗಿಯರನ್ನು ಕಳುಹಿಸುತ್ತಿದ್ದ ಮಹಿಳೆ ಎಸ್ಕೇಪ್ ಆಗಿದ್ದಾಳೆ.
ಪಂಜಾಬ್ ರಾಜ್ಯದ ಶಿವಸೇನೆಯ ಉಪಾಧ್ಯಕ್ಷರ ಡಾಬಾದ ಮಾಲೀಕ ಎಂದು ವರದಿಯಾಗಿದೆ. ಮುಖಂಡನಿಗೆ ಪೊಲೀಸ್ ಭದ್ರತೆ ಸಹ ನೀಡಿದ್ದರಿಂದ ವಿಷಯ ತಿಳಿದಿದ್ರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿರಲಿಲ್ಲ ಎಂದು ವರದಿಯಾಗಿದೆ.
