Connect with us

Bengaluru City

105 ಶಾಸಕರಿಂದ ಸರ್ಕಾರ ರಚಿಸುವ ವಿಶ್ವಾಸವಿದ್ರೆ ರಾಜ್ಯಪಾಲರ ಬಳಿ ಹಕ್ಕು ಮಂಡಿಸಿ: ಸಿದ್ದರಾಮಯ್ಯ ಸವಾಲ್

Published

on

– ಕ್ಷುಲ್ಲಕ ರಾಜಕಾರಣದಲ್ಲಿ 1 ನಿಮಿಷ ಬಳಿಸಿ ಪ್ರಜಾಪ್ರಭುತ್ವದ ಲೆಕ್ಕ ಕಲಿಯಿರಿ

ಬೆಂಗಳೂರು: ಕೇವಲ 105 ಶಾಸಕರಿಂದ ಸರ್ಕಾರ ರಚಿಸಬಹುದು ಎನ್ನುವ ವಿಶ್ವಾಸ ನಿಮಗಿದ್ದರೆ ರಾಜ್ಯಪಾಲರ ಮುಂದೆ ಹಕ್ಕು ಮಂಡಿಸಿ. ಅವರು ಒಪ್ಪಿದರೆ ನಾವಾಗಿಯೇ ಸರ್ಕಾರದಿಂದ ಹೊರಹೋಗುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಂಸದೆ ಶೋಭಾ ಕರಂದ್ಲಾಜೆಗೆ ಸವಾಲ್ ಹಾಕಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಂದು ವೇಳೆ ರಾಜ್ಯಪಾಲರು ನಿಮ್ಮ ಹಕ್ಕು ಮಂಡನೆಯನ್ನ ಒಪ್ಪಿಕೊಂಡರೆ ನಾವಾಗಿಯೇ ಸರ್ಕಾರದಿಂದ ಹೊರಹೋಗುತ್ತೇವೆ. 105ಕ್ಕಿಂತ 113 ದೊಡ್ಡದು ಎಂಬುದು ನನ್ನ ತಿಳುವಳಿಕೆ. ಕರ್ನಾಟಕ ವಿಧಾನಸಭೆಯಲ್ಲಿ 113 ಶಾಸಕರ ಬೆಂಬಲವಿದ್ದರೆ ಯಾರೂ ಬೇಕಾದರೂ ಸರ್ಕಾರ ರಚನೆ ಮಾಡಬಹುದು.

ಶೋಭಾ ಐಎಂಎ ಹಗರಣ ಸಂಬಂಧ ಲೋಕಸಭೆಯಲ್ಲಿ ಮಾಡಿದ್ದ ಹಿಂದಿ ಭಾಷಣದಲ್ಲಿ ಬಳಸಿದ್ದ `ಏಕೀ ಮಿನಿಟ್’ ಪದವನ್ನ ಉಲ್ಲೇಖಿಸಿ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದ್ದಾರೆ.

ಕರಂದ್ಲಾಜೆ ಹೇಳಿದ್ದೇನು?
78ಕ್ಕಿಂತ 105 ದೊಡ್ಡದು. ರಾಜ್ಯದ ಜನತೆ ಬಿಜೆಪಿ ಪರ ತೀರ್ಪು ಕೊಟ್ಟರೂ ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿಯಿಂದ ಸರ್ಕಾರ ರಚಿಸಿದೆ. ಲೋಕಸಭಾ ಚುನಾವಣೆಯಲ್ಲಿ ಸೋಲಿನ ಬಳಿಕ ಕಾಮನ್‍ಸೆನ್ಸ್ ಇಲ್ಲವಾಯಿತೆ? ಆರಂಭದಿಂದಲೇ ಶಾಸಕರ ಗುಂಪು ಮಾಡಿಕೊಂಡು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದೀರಿ. ನಿಮ್ಮ ನೀಚ್ ಪಾಲಿಟಿಕ್ಸ್ ಬಿಟ್ಟು ಬಿಡಿ. ಸಮ್ಮಿಶ್ರ ಸರ್ಕಾರದ ವಿಫಲತೆಗೆ ಬಿಜೆಪಿ ದೂರುವುದನ್ನು ಬಿಟ್ಟುಬಿಡಿ ಎಂದು ಕರಂದ್ಲಾಜೆ ಟ್ವೀಟ್ ಮಾಡಿದ್ದರು.