ಕೊಪ್ಪಳ: ಸಚಿವ ಸಂಪುಟದಲ್ಲಿ ಮಹಿಳಾ ಶಾಸಕಿಯರಿಗೆ ಸ್ಥಾನ ಕೊಟ್ರೆ ಪುರುಷರಿಗಿಂತ ಚೆನ್ನಾಗಿ ಕೆಲಸ ಮಾಡ್ತಾರೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿದ್ದಾರೆ.
ಕಾಂಗ್ರೆಸ್ನಲ್ಲಿ ಐದು ಜನ ಮಹಿಳಾ ಶಾಸಕಿಯರಿದ್ದಾರೆ. ಡಿಸೆಂಬರ್ 22 ರಂದು ನಡೆಯುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಹಿಳಾ ಶಾಸಕಿಯರಿಗೆ ಅವಕಾಶ ನೀಡಬೇಕು. ಪುರುಷರಿಗಿಂತ ಮಹಿಳೆಯರು ಜಾಸ್ತಿ ಕೆಲಸ ಮಾಡ್ತಾರೆ. ಐದು ಜನರಿಗೆ ಸಚಿವ ಸ್ಥಾನ ಕೊಟ್ರೂ ನಾನು ಖುಷಿ ಪಡ್ತೀನಿ, ಎಲ್ಲರು ಯಶಸ್ವಿಯಾಗಿ ಕೆಲಸ ಮಾಡ್ತಾರೆ ಅಂತ ನಂಬಿಕೆ ಇದೆ ಎಂದು ಪುಷ್ಪಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
Advertisement
ಪುರುಷರಿಗಿಂತ ಚೆನ್ನಾಗಿ ಮಹಿಳೆಯರೇ ಕೆಲಸ ಮಾಡ್ತಾರೆ ಎಂದು ನಾನು ಸಾರಿ ಸಾರಿ ಹೇಳ್ತೀನಿ. ಐದು ಜನರಿಗೆ ಸಚಿವ ಸ್ಥಾನ ಕೊಟ್ರೆ ನಾವು ಹಬ್ಬ ಮಾಡ್ತೀವಿ. ಆದ್ರೆ ಉತ್ತರ ಕರ್ನಾಟಕಕ್ಕೆ ಹೆಚ್ಚು ಸ್ಥಾನ ಕೊಡಬೇಕು ಎಂದು ಹಿರಿಯ ನಾಯಕರು ನಿರ್ಧರಿಸಿದ್ದಾರೆ. ಹಾಗಾಗಿ ಮಹಿಳಾ ಶಾಸಕಿಯರಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನ ಸಿಕ್ಕರೆ ಒಳ್ಳೆಯ ರೀತಿ ಕೆಲಸ ಮಾಡ್ತೀವಿ ಅಂತ ಭರವಸೆ ನೀಡಿದ್ದಾರೆ.
Advertisement
ಸಚಿವ ಸಂಪುಟದಿಂದ ಜಯಮಾಲಾ ಅವರನ್ನು ಕೈಬಿಡೋ ವಿಚಾರ ನನಗೆ ಗೊತ್ತಿಲ್ಲ, ಯಾವುದೇ ಮಾಹಿತಿ ಇಲ್ಲ. ನಾನು ಮಹಿಳೆಯರಿಗೆ ಅವಕಾಶ ಮಾಡಿಕೊಡಿ ಎಂದು ವೇಣುಗೋಪಾಲ್ ಅವರಿಗೆ ಪತ್ರ ಬರೆದಿದ್ದೇನೆ ಎಂದ ಪುಷ್ಪಾ ಅವರು ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv