Thursday, 18th July 2019

ದಲಿತರ ಮನೆಯಲ್ಲಿ ಬಿಎಸ್‍ವೈಗೆ ಇಡ್ಲಿ, ಕೇಸರಿಬಾತ್, ಉಪ್ಪಿಟ್ಟು, ಬೋಂಡ ರೆಡಿ- ಮದುಮಗಳಂತೆ ಸಿಂಗಾರಗೊಂಡ ಬೀದಿ

ಬೆಂಗಳೂರು: ಇಂದು ಡಾ.ಬಿ.ಆರ್. ಅಂಬೇಡ್ಕರ್ ರ 127 ನೇ ಜಯಂತಿ ಹಾಗೂ ಕರ್ನಾಟಕ ವಿಧಾನಸಭಾ ಚುನಾವಣೆ ಬೇರೆ ಇದೆ. ಈ ಹಿನ್ನೆಲೆಯಲ್ಲಿ ದಲಿತರ ಮತ ಸೆಳೆಯಲು ಬಿಜೆಪಿ ಸರ್ಕಸ್ ಮಾಡುತ್ತಿದೆ.

ಚುನಾವಣಾ ಭಾಗವಾಗಿ ಪಕ್ಷದ ಸಿಎಂ ಅಭ್ಯರ್ಥಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ದಲಿತರ ಕಾಲೋನಿಯ ಮನೆಯಲ್ಲಿ ತಿಂಡಿ ಮಾಡಲಿದ್ದಾರೆ. ಬೆಂಗಳೂರು ಹೊರವಲಯದಲ್ಲಿರುವ ನೆಲಮಂಗಲದ ಮೈಲನಹಳ್ಳಿಯ ಮಾರುತಿ ಅನ್ನೋರ ಮನೆಯಲ್ಲಿ ಉಪಹಾರ ಸೇವಿಸಲಿದ್ದಾರೆ.

ರಾಜ್ಯಾಧ್ಯಕ್ಷರಿಗಾಗಿ ಇಡ್ಲಿ, ಉಪ್ಪಿಟ್ಟು, ಕೇಸರಿಬಾತ್ ಮತ್ತು ಬೋಂಡ ರೆಡಿಯಾಗಿದೆ. ಅಷ್ಟೇ ಅಲ್ಲದೇ ಬಿಜೆಪಿ ಅಧ್ಯಕ್ಷರು ಬರುತ್ತಾರೆ ಎಂದು ಮನೆಗೆ ಹಸಿರು ತೋರಣ ಕಟ್ಟಿದ್ದಾರೆ. ಇನ್ನು ರಂಗುರಂಗಿನ ರಂಗೋಲಿಯಿಂದ ಮಾರುತಿಯವರ ಮನೆಯ ಬೀದಿಯನ್ನು ಮದುಮಗಳಂತೆ ಮಹಿಳೆಯರು ಸಿಂಗರಿಸಿದ್ದಾರೆ. ನಂತರ ಬಿಎಸ್‍ವೈ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಮಾರ್ಲಾಪಣೆ ಮಾಡಲಿದ್ದಾರೆ.

Leave a Reply

Your email address will not be published. Required fields are marked *