Connect with us

Cricket

ಆಟಗಾರನ ಅಮ್ಮನ ಬಗ್ಗೆ ಕಾಮೆಂಟ್ ಮಾಡಿದ್ದ ಪಾಕ್ ನಾಯಕನಿಗೆ ಅಮಾನತು ಶಿಕ್ಷೆ

Published

on

ದುಬೈ: ದಕ್ಷಿಣ ಆಫ್ರಿಕಾ ಆಟಗಾರರನ ಮೇಲೆ ಕೆಟ್ಟ ಕಾಮೆಂಟ್ ಮಾಡಿ ಜನಾಂಗಿಯ ನಿಂದನೆ ಮಾಡಿದ್ದ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ವಿರುದ್ಧ ಐಸಿಸಿ ಶಿಸ್ತು ಕ್ರಮಕೈಗೊಂಡಿದ್ದು, 4 ಅಂತರಾಷ್ಟ್ರಿಯ ಕ್ರಿಕೆಟ್ ಪಂದ್ಯಗಳಿಂದ ಅಮಾನತು ಮಾಡಿದೆ.

ಡರ್ಬನಿನ ಕಿಂಗ್ಸ್ ಮೇಡ್ ಸ್ಟೇಡಿಯಂನಲ್ಲಿ ನಡೆದ 4ನೇ ಏಕದಿನ ಪಂದ್ಯದ ವೇಳೆ ಸರ್ಫರಾಜ್ ಆಫ್ರಿಕಾ ಆಟಗಾರ ಆಂಡಿಲೆ ಫೆಹ್ಲುಕ್ವೆವೊರನ್ನು ಉರ್ದುವಿನಲ್ಲಿ ಕೆಟ್ಟ ಕಾಂಮೆಟ್ ಮಾಡಿ ಕೆಣಕಿದ್ದರು. ವಿಕೆಟ್ ಕೀಪರ್ ಆಗಿದ್ದರಿಂದ ಸರ್ಫರಾಜ್ ಅವರ ಮಾತುಗಳು ವಿಕೆಟ್ ಸ್ಟಂಪ್ ಮೈಕಿನಲ್ಲಿ ದಾಖಲಾಗಿತ್ತು.

ಡರ್ಬನ್ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದ ಆಂಡಿಲೆ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಸರ್ಫರಾಜ್ ಉರ್ದುವಿನಲ್ಲಿ ಟೀಕೆ ಮಾಡಿದ್ದರು. ‘ಅಬೆ ಕಾಲೆ, ತೆರಿ ಅಮ್ಮಿ ಕಹಾ ಬೈಟಿ ಉಹಿ ಹೈ ಆಜ್, ಕ್ಯಾ ಪರ್ವಾ ಕಿಯಾಯೇ ಆಜ್?’ (ಲೋ ಕರಿಯ, ನಿನ್ನ ಅಮ್ಮ ಇವತ್ತು ಎಲ್ಲಿ ಕೂತಿದ್ದಾಳೆ, ಇವತ್ತು ಅದೇನು ಪ್ರಾರ್ಥನೆ ಮಾಡಿ ಬಂದಿದ್ದೀಯಾ?) ಎಂದಿದ್ದರು.

ಘಟನೆಯ ಬಳಿಕ ಕ್ರಿಕೆಟ್ ಅಭಿಮಾನಿಗಳಿಂದ ವ್ಯಾಪಕ ಟೀಕೆ ಕೇಳಿ ಬಂದ ಪರಿಣಾಮ ಸರ್ಫರಾಜ್ ಟ್ವಿಟ್ಟರ್ ನಲ್ಲಿ ಕ್ಷಮೆ ಕೇಳಿದ್ದರು. ಅಲ್ಲದೇ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಕೂಡ ಈ ಬಗ್ಗೆ ವಿಷಾದ ವ್ಯಕ್ತಪಡಿಸಿತ್ತು. ಆದರೆ ಸರ್ಫರಾಜ್ ಕ್ಷಮೆ ಕೇಳಿದ್ದರಿಂದ ತೃಪ್ತರಾಗದ ಐಸಿಸಿ ಸಮಿತಿ 4 ಪಂದ್ಯಗಳಿಂದ ಅಮಾನತುಗೊಳಿಸಿದೆ.

ಸರ್ಫರಾಜ್ ಖಾನ್ ಮೇಲೆ ಅಮಾನತು ಶಿಕ್ಷೆ ವಿಧಿಸಿದ್ದರಿಂದ ಇಂದಿನ ಪಂದ್ಯದಲ್ಲಿ ಶೋಯೆಬ್ ಮಲ್ಲಿಕ್ ಪಾಕ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv