Connect with us

Districts

ನಾನೇನು ರಸ್ತೆಯಲ್ಲಿ ನಾಯಿಯಂತೆ ಬೊಗಳುವುದಿಲ್ಲ – ಯತ್ನಾಳ್‍ಗೆ ಜಿಗಜಿಣಗಿ ಟಾಂಗ್

Published

on

ವಿಜಯಪುರ: ನಾನು ಹಿಂದೆ ಕೇಂದ್ರ ಸಚಿವನಾಗಿದ್ದೆ. ಆದರೆ ಈ ಬಾರಿ ಬೇರೆಯವರಿಗೆ ಅವಕಾಶ ನೀಡಿದರು. ಹಾಗಂತ ನಾನೇನು ರಸ್ತೆಯಲ್ಲಿ ನಾಯಿಯಂತೆ ಬೊಗಳುತ್ತಾ ತಿರುಗಲಿಲ್ಲ ಎನ್ನುವ ಮೂಲಕ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ರನ್ನ ಸಂಸದ ರಮೇಶ್ ಜಿಗಜಿಣಗಿ ಅವರು ಪರೋಕ್ಷವಾಗಿ ನಾಯಿಗೆ ಹೋಲಿಸಿದ್ದಾರೆ.

ಇಂದು ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪನವರಿಗೆ ಈ ಹಿಂದೆಯೇ ಯಾರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳಬೇಡಿ. ನಮ್ಮ ಜೊತೆ ಅವರು ದಕ್ಕುವುದಿಲ್ಲ. ಅವರು ನಮ್ಮ ಸ್ಥಾನದಲ್ಲಿ ನಮಗೆ ಏನೂ ಮಾಡಲು ಆಗುವುದಿಲ್ಲ. ನಿಮಗೆ ಮೂಲ ಆಗುತ್ತಾರೆ ಎಂದು ಬಿಎಸ್‍ವೈಗೆ ಈ ಹಿಂದೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ  ಹೇಳಿದ್ದೆ ಎಂದರು.

ಸಿಎಂ ಯಡ್ಡಿಯೂರಪ್ಪವರು ಈಗ ಅದನ್ನು ಅನುಭವಿಸುತ್ತಿದ್ದಾರೆ. ಬಾಯಿಗೆ ಹಲ್ಲಿಲ್ಲದಂತೆ ತನಾಡಬಾರದು. ಇವರು ಯಾಕೆ ಈ ರೀತಿ ಮಾತನಾಡುತ್ತಾರೆ ನನಗೆ ಅರ್ಥವಾಗುತ್ತಿಲ್ಲ. ಮಂತ್ರಿಯಾಗಲಿಲ್ಲ ಎಂಬುದು ಇವರ ಮನಸ್ಸಿನಲ್ಲಿರಬಹುದು. ಅದನ್ನು ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪಿಸಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಗೆ ಪರೋಕ್ಷವಾಗಿ ಸಲಹೆ ನೀಡಿದರು.

ಸಿಡಿ ವಿಚಾರ ನನಗೆ ಗೊತ್ತಿಲ್ಲ. ಏನೇ ನೋವಿದ್ದರೂ ಪಕ್ಷದ ವೇದಿಕೆಯಲ್ಲಿ ಮಾತನಾಡಬೇಕು. ರೋಡಿನಲ್ಲಿ ಮಾತನಾಡಿದರೆ ತಲೆ ಕೆಟ್ಟಿದೆ ಎಂದು ಮತದಾರರು ಹೇಳುತ್ತಾರೆ. ಇವರಿಗೆ ಮತ ಹಾಕಿದವರು ಈಗ ಬೈಯ್ಯುತ್ತಿದ್ದಾರೆ. ನಾನೂ ಹಿಂದೆ ಕೇಂದ್ರ ಸಚಿವನಾಗಿದ್ದೆ. ಆದರೆ ಈ ಬಾರಿ ಬೇರೆಯವರಿಗೆ ಅವಕಾಶ ನೀಡಿದರು. ನಾನೇನೂ ರಸ್ತೆಯಲ್ಲಿ ನಾಯಿಯಂತೆ ಬೊಗಳುತ್ತಾ ತಿರುಗಲಿಲ್ಲ ಎನ್ನುವ ಮೂಲಕ ಯತ್ನಾಳ್ ರನ್ನ ನಾಯಿ ಎಂದು ಪರೋಕ್ಷವಾಗಿ ಹೇಳಿದರು. ಯಡಿಯೂರಪ್ಪ ಹಿರಿಯ ಮನುಷ್ಯ. ಹಿರಿಯ ಮನುಷ್ಯನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ವೇಳೆ ರಾಜ್ಯದಲ್ಲಿ ದಲಿತರು ರಾಜ್ಯದಲ್ಲಿ ಒಂದಿಲ್ಲ ಒಂದು ದಿನ ದಲಿತ ಸಮುದಾಯದವರು ಸಿಎಂ ಆಗಬೇಕು. ಆಗಿಯೇ ಆಗುತ್ತಾರೆ. ಈ ಕುರಿತು ಯಾರಿಗೂ ಸಂಶಯ ಬೇಡ. ಐವತ್ತು- ಎಪ್ಪತ್ತು ವರ್ಷಗಳಿಂದ ಬೇರೆ ಸಮುದಾಯದವರಿಗೆ ಅವಕಾಶ ಸಿಗುತ್ತಿದೆ. ರಾಜ್ಯದಲ್ಲಿರುವ ಶೇ.1 -ಶೇ.2 ಸಮುದಾಯದ ಮಂದಿಯನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಶೇ.23 ಇರುವಂತಹ ದಲಿತರಿಗೆ ಅವರಲ್ಲಿಯೇ ಬೇಧ-ಭಾವ ಮಾಡಿ ಎಲ್ಲರಿಗೂ ತಂದಿಟ್ಟು ನೀವೆಲ್ಲ ಮಜಾ ಮಾಡುತ್ತಿದ್ದಿರಾ. ಇದಕ್ಕೆ ಕಾರಣ ನಮ್ಮ ಜನಾಂಗದಲ್ಲಿರುವವರಿಗೆ ಸಹನೆ ಕಡಿಮೆ. ಆದರೂ ನಮ್ಮೆಲ್ಲರಲ್ಲಿ ಬೇಧ-ಭಾವವಿಲ್ಲ ಎಂದರು.

 

ಇಂದು ನೀವೆಲ್ಲರೂ ಹೇಗೆ ಒಗ್ಗಟ್ಟಿನಿಂದ ಇರುತ್ತೀರೋ ಹಾಗೇ ಒಂದಲ್ಲ ಒಂದು ದಿನ ನಮ್ಮ ಸಮುದಾಯದವರೆಲ್ಲಾ ಒಗ್ಗಟ್ಟಾಗಿ ಯಾರಾದರೂ ದಲಿತ ಸಮುದಾಯದವರು ಸಿಎಂ ಆಗೇ ಆಗುತ್ತಾರೆ. ಈ ಕುರಿತು ಯಾರಿಗೂ ಸಂಶಯ ಬೇಡ ಎಂದು ಸಂಸದ ರಮೇಶ್ ಜಿಗಜಿಣಗಿ ಹೇಳಿದರು.

ಇತರ ಎಲ್ಲಾ ಸಮುದಾಯದವರಿಗೂ ಸಿಎಂ ಆಗುವ ಅವಕಾಶ ಸಿಕ್ಕಿದೆ. ಆದರೆ ರಾಜ್ಯದಲ್ಲಿ 23 ಪ್ರತಿಶತದಷ್ಟು ಸಮುದಾಯ ಇರುವ ದಲಿತರು ಯಾಕೆ ಆಗಬಾರದು ಎಂದು ಪ್ರಶ್ನಿಸಿದರು. ಎಲ್ಲ ಸಮುದಾಯದವರಂತೆ ದಲಿತರಿಗೂ ಸ್ಥಾನಮಾನ ಸಿಗಬೇಕೆಂದು 800 ವರ್ಷಗಳ ಹಿಂದೆಯೇ ಬಸವಣ್ಣನವರು ಕನಸು ಕಂಡಿದ್ದರು. ಅವರ ಕನಸು ನನಸಾಗುತ್ತದೆ. ರಾಜ್ಯದಲ್ಲಿ ಒಂದಿಲ್ಲ ಒಂದು ದಿನ ದಲಿತ ಸಮುದಾಯದವರು ಸಿಎಂ ಆಗಿ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

Click to comment

Leave a Reply

Your email address will not be published. Required fields are marked *