Wednesday, 17th July 2019

ಕಣ್ಸನ್ನೆ ವಿಡಿಯೋ ವೈರಲ್ ಆಗ್ತಿದ್ದಂತೆ ಮನೆಯಲ್ಲಿ ಕೂಡಿ ಹಾಕಿದ್ದರು: ಪ್ರಿಯಾ ವಾರಿಯರ್

ತಿರುವನಂತಪುರಂ: ಕಣ್ಸನ್ನೆ ವಿಡಿಯೋ ವೈರಲ್ ಆಗುತ್ತಿದ್ದಂತೆ ನನ್ನ ಕುಟುಂಬದವರು ನನ್ನನ್ನು ಗೃಹಬಂಧನದಲ್ಲಿಟ್ಟಿದ್ದರು ಎಂದು ನಟಿ ಪ್ರಿಯಾ ವಾರಿಯರ್ ಹೇಳಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಾವು ನಟಿಸಿದ ‘ಒರು ಅಡಾರ್ ಲವ್’ ಚಿತ್ರದ ಬಗ್ಗೆ ಮಾತನಾಡಿ ಇದು ಶಾಲಾ ಜೀವನದ ಕತೆ ಎಂದು ಹೇಳಿದ್ದಾರೆ. ಇದಾದ ಬಳಿಕ ಪ್ರಿಯಾ ತಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಾರೆ.

ನನ್ನ ಕಣ್ಸನ್ನೆ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನಾನು ಹಾಗೂ ನನ್ನ ಕುಟುಂಬದವರು ಎಲ್ಲರೂ ಒಟ್ಟಿಗೆ ಸೇರಿ ಅಭಿಮಾನಿಗಳನ್ನು ನಿಭಾಯಿಸುತ್ತಿದ್ದೆವು. ಏಕೆಂದರೆ ಇದು ನನಗೆ ಹಾಗೂ ನನ್ನ ಕುಟುಂಬಕ್ಕೆ ತುಂಬಾ ಹೊಸದು. ನನ್ನ ಕುಟುಂಬದವರು ನನಗೆ ಮೊಬೈಲ್ ನೀಡುತ್ತಿರಲಿಲ್ಲ. ಕೆಲವು ದಿನಗಳವರೆಗೆ ನಾನು ಮನೆಯಲ್ಲಿ ಬಂಧಿ ಆಗಿದೆ. ಅಲ್ಲದೆ ನನ್ನ ಪೋಷಕರು ನನಗೆ ಹೊರಗೆ ಹೋಗಲು ಬಿಡುತ್ತಿರಲಿಲ್ಲ. ಮಾಧ್ಯಮದವರು ಕೂಡ ನಮಗೆ ಮಾಹಿತಿ ನೀಡದೆ ಮನೆ ಮುಂದೆ ಬರುತ್ತಿದ್ದರು ಎಂದು ಪ್ರಿಯಾ ಹೇಳಿದ್ದಾರೆ. ಇದನ್ನೂ ಓದಿ: ಕಣ್ಸನ್ನೆ ನಂತ್ರ ಪ್ರಿಯಾ ವಾರಿಯರ್ ಕಿಸ್ಸಿಂಗ್ ವಿಡಿಯೋ ವೈರಲ್

ನಾನು ಕಾಲೇಜು ಮುಗಿಸಿ ಬರುತ್ತಿದ್ದಂತೆಯೇ ಯೂನಿಫಾರಂನಲ್ಲೇ ಮಾಧ್ಯಮದವರಿಗೆ ಸಂದರ್ಶನ ನೀಡುತ್ತಿದ್ದೆ. ಕೆಲ ಅಭಿಮಾನಿಗಳು ನನ್ನ ಮನೆಗೆ ಬಂದು ಇದು ಪ್ರಿಯಾ ವಾರಿಯರ್ ಮನೆನಾ? ನಾವು ಅವರನ್ನು ನೋಡಬಹುದಾ? ಎಂದು ಕೇಳುತ್ತಿದ್ದರು. ಆಗ ನನ್ನ ತಂದೆ ಆಕೆ ಮನೆಯಲ್ಲಿ ಇಲ್ಲ. ಆಕೆ ಹಾಸ್ಟಲ್‍ನಲ್ಲಿ ಇದ್ದಾಳೆ ಎಂದು ನೆಪ ಹೇಳಿ ಅಭಿಮಾನಿಗಳನ್ನು ವಾಪಸ್ ಕಳುಹಿಸುತ್ತಿದ್ದರು ಎಂದು ಕಣ್ಸನ್ನೆ ಬೆಡಗಿ ತಿಳಿಸಿದ್ದಾರೆ.

ಒರು ಅಡಾರ್ ಲವ್ ಚಿತ್ರ ಹೈಸ್ಕೂಲ್ ರೊಮ್ಯಾಂಟಿಕ್ ಚಿತ್ರವಾಗಿದ್ದು, ಫೆ. 14ರಂದು ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ಪ್ರಿಯಾಗೆ ನಟನಾಗಿ ರೋಶನ್ ಅಬ್ದುಲ್ ರಹೂಫ್ ನಟಿಸಿದ್ದು, ಓಮರ್ ಲುಲು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮಲಯಾಳಂ ಭಾಷೆಯಲ್ಲಿ ಸೇರಿದಂತೆ ಕನ್ನಡ ಹಾಗೂ ತೆಲುಗು ಭಾಷೆಯಲ್ಲೂ ಈ ಚಿತ್ರ ಬಿಡುಗಡೆ ಆಗುತ್ತಿದೆ. ಕನ್ನಡದಲ್ಲಿ `ಕಿರಿಕ್ ಲವ್ ಸ್ಟೋರಿ’ ಎಂಬ ಹೆಸರಿನಲ್ಲಿ ಚಿತ್ರ ತೆರೆ ಕಾಣಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *