ಸಕ್ರಿಯ ರಾಜಕಾರಣ ತ್ಯಜಿಸಿದ ಮೆಟ್ರೋಮ್ಯಾನ್ ಇ ಶ್ರೀಧರನ್

Advertisements

ತಿರುವನಂತಪುರ: 2021ರ ಕೇರಳ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಮೆಟ್ರೋಮ್ಯಾನ್ ಎಂದೇ ಖ್ಯಾತಿಯ ಇ ಶ್ರೀಧರನ್ ಸಕ್ರಿಯ ರಾಜಕಾರಣವನ್ನು ತ್ಯಜಿಸುವುದಾಗಿ ಘೋಷಿಸಿದ್ದಾರೆ.

Advertisements

ಕೇರಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಇದೀಗ 90 ವರ್ಷ ವಯಸ್ಸು. ಹಾಗಾಗಿ ನಾನು ಸಕ್ರಿಯ ರಾಜಕೀಯವನ್ನು ತ್ಯಜಿಸುತ್ತಿದ್ದೇನೆ. ವಿಧಾನಸಭೆ ಚುನಾವಣೆಯಲ್ಲಿ ನಾನು ಸೋತಾಗ ತುಂಬಾ ನಿರಾಸೆ ಅನುಭವಿಸಿದ್ದೆ ಆದರೆ ಇದೀಗ ಯಾವುದೇ ನಿರಾಸೆ ಇಲ್ಲ. ಹಾಗಾಗಿ ಇನ್ನುಮುಂದೆ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವುದಿಲ್ಲ ಎಂದರು. ಇದನ್ನೂ ಓದಿ: ಬಿಜೆಪಿ ಗೆದ್ದರೆ ಸಿಎಂ ಸ್ಥಾನ ಅಲಂಕರಿಸಲು ಸಿದ್ಧ: ಮೆಟ್ರೋಮ್ಯಾನ್ ಶ್ರೀಧರನ್

Advertisements

ನಾನು ಯಾವತ್ತು ರಾಜಕಾರಣಿಯಾಗಳು ಬಯಸಿರಲಿಲ್ಲ. ಅದರೆ ಅದೃಷ್ಟದಿಂದ ರಾಜಕಾರಣಕ್ಕೆ ಎಂಟ್ರಿಕೊಟ್ಟಿದ್ದೆ. ಇದೀಗ ರಾಜಕೀಯ ತ್ಯಜಿಸುತ್ತಿದ್ದು ಇದರ ಬದಲು ಇತರ ಮಾರ್ಗಗಳ ಮೂಲಕ ಜನರಿಗೆ ಸಹಾಯ ಮಾಡುತ್ತೇನೆ. ನಾನು ಮೂರು ಟ್ರಸ್ಟ್‌ಗಳನ್ನು ನಡೆಸುತ್ತಿದ್ದು ಆ ಟ್ರಸ್ಟ್‌ಗಳಲ್ಲಿ ಇನ್ನಷ್ಟು ಉತ್ತಮ ಸೇವೆಗಳನ್ನು ಮುಂದುವರಿಸುತ್ತೇನೆ ಎಂದು ನುಡಿದರು.

ಕೇರಳ ವಿಧಾನಸಭಾ ಚುನಾವನೆಯ ಮುನ್ನ ಫೆ.21 ರಂದು ಇ ಶ್ರೀಧರನ್ ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದರು. ಬಳಿಕ ಬಿಜೆಪಿ ಪಕ್ಷ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿತು. ಪಾಲಕ್ಕಾಡ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇ ಶ್ರೀಧರನ್ ಸೋಲು ಕಂಡಿದ್ದರು. ಇದನ್ನೂ ಓದಿ: ಚುನಾವಣೆಯಲ್ಲಿ ಸೋಲು- ಕೊಟ್ಟ ಮಾತು ಉಳಿಸಿಕೊಂಡ ಮೆಟ್ರೋ ಮ್ಯಾನ್ ಶ್ರೀಧರನ್

Advertisements

ಯಾರು ಇ ಶ್ರೀಧರನ್‌?
ಭಾರತೀಯ ಎಂಜಿನಿಯರಿಂಗ್ ಸೇವೆ (ಐಇಎಸ್) ಸಲ್ಲಿಸಿ ಈಗ ನಿವೃತ್ತರಾಗಿರುವ ಇವರು 1995 ರಿಂದ 2012ರ ವರೆಗೂ ದೆಹಲಿ ಮೆಟ್ರೋ ಮುಖ್ಯಸ್ಥರಾಗಿದ್ದರು. ಶ್ರೀಧರನ್‌ ದೇಶಾದ್ಯಂತ ಸ್ವದೇಶಿ ಮೆಟ್ರೋ ರೈಲು ವ್ಯವಸ್ಥೆ ಜಾರಿಗೆ ಮೋದಿ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿಯ ಮುಖ್ಯಸ್ಥರೂ ಆಗಿದ್ದಾರೆ.

ಕೊಂಕಣ ರೈಲ್ವೆ ಮತ್ತು ದಿಲ್ಲಿ ಮೆಟ್ರೋವನ್ನು ನಿರ್ಮಿಸಿದ ನಂತರ ಭಾರತದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬದಲಾಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. 2003 ರಲ್ಲಿ ಟೈಮ್ಸ್ ನಿಯತಕಾಲಿಕೆಯು ಏಷ್ಯಾದ ಸೆಲೆಬ್ರಿಟಿ ಹೀರೋಗಳಲ್ಲಿ ಒಬ್ಬರೆಂದು ಅವರನ್ನು ಹೆಸರಿಸಿತ್ತು. ವಿಶ್ವಸಂಸ್ಥೆಯ ಸುಸ್ಥಿರ ಸಾರಿಗೆ ಕುರಿತು ಉನ್ನತ ಮಟ್ಟದ ಸಲಹಾ ಸಮೂಹದಲ್ಲಿ ಸೇವೆ ಸಲ್ಲಿಸಲು ಶ್ರೀಧರನ್‌ ಅವರನ್ನು ನೇಮಕ ಮಾಡಲಾಗಿತ್ತು.ಇದನ್ನೂ ಓದಿ: ಹೆದ್ದಾರಿಯಲ್ಲಿ ಹೊಂಚು ಹಾಕಿ ಬೇಟೆಯಾಡಿದ ಚಿರತೆ – ವೀಡಿಯೋ ವೈರಲ್

Advertisements
Exit mobile version