Tuesday, 22nd October 2019

Recent News

ರಾಜಕೀಯಕ್ಕೆ ಪ್ರವೇಶಿಸಿದ್ದಾಗ ಶಿಷ್ಯ ಅನಂತ್‍ಗೆ ಒಂದು ಸಂದೇಶ ಕಳುಹಿಸಿದ್ದೆ- ಶಿಕ್ಷಕಿ ಸುಜ್ಞಾನಮ್ಮ

ಬೆಂಗಳೂರು: ಅನಂತ ಕುಮಾರ್ ರಾಜಕೀಯಕ್ಕೆ ಪ್ರವೇಶಿಸಿದ್ದಾಗ ನಾನು ಆತನಿಗೆ ಒಂದು ಸಂದೇಶ ಕಳುಹಿಸಿದೆ ಎಂದು ಅವರ ಶಿಕ್ಷಕರಾದ ಸುಜ್ಞಾನಮ್ಮ ಅವರು ನೆನಪಿಸಿಕೊಂಡು ಕಂಬನಿ ಮಿಡಿದಿದ್ದಾರೆ.

ಶಿಕ್ಷಕಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದು ಹೀಗೆ
ಅನಂತ ಅವರಿಗೆ ನಾನು 4ನೇ ತರಗತಿಯಿಂದ 7ನೇ ತರಗತಿವರೆಗೂ ಶಿಕ್ಷಕಿಯಾಗಿದ್ದೆ. ಆದರೆ 4ನೇ ತರಗತಿಯಲ್ಲಿ ನಾನು ಕ್ಲಾಸ್ ಟೀಚರ್ ಆಗಿದ್ದೆ. 7ನೇ ತರಗತಿವರೆಗೂ ಭಾಷಾ ವಿಷಯವನ್ನು ಹೇಳಿಕೊಡುತ್ತಿದ್ದೆ.

ಅನಂತ ತುಂಟ ಬಾಲಕನಾಗಿದ್ದ. ಪ್ರತಿಭಾವಂತನಾಗಿದ್ದ ಅನಂತ್ ಉತ್ತಮ ವಾಕ್ ಚಾತುರ್ಯವನ್ನು ಸಹ ಹೊಂದಿದ್ದ. ಅಲ್ಲದೇ ಎಲ್ಲ ವಿಷಯದಲ್ಲೂ ಜವಾಬ್ದಾರಿಯಿಂದ ಮುಂದುವರಿಯಬೇಕೆಂಬ ಭಾವನೆ ಅವನಿಗೆ ಇತ್ತು.

7ನೇ ತರಗತಿ ನಂತರ ಅನಂತ ನಮ್ಮ ಸಂಪರ್ಕಕ್ಕೆ ಇದ್ದನು. ಅನಂತ್‍ಗೆ ಶಿಕ್ಷಕರೆಂದರೆ ಬಹಳ ಭಕ್ತಿ. ಅಲ್ಲದೇ ನಾನು ಕಾಲೇಜಿಗೆ ಹೋಗುತ್ತಿದ್ದೇನೆ. ಈ ವಿಷಯ ತೆಗೆದುಕೊಂಡಿದ್ದೀನಿ ಎಂದು ನನ್ನ ಹತ್ತಿರ ಬಂದು ಹೇಳುತ್ತಿದ್ದನು. ಅನಂತ ತನ್ನ ಮಗಳ ಮದುವೆಯ ಆಮಂತ್ರಣ ಕಳುಹಿಸಿ ವಿದ್ಯಾರ್ಥಿಯಾದ ನನಗೆ ನನ್ನ ಶಿಕ್ಷಕರನ್ನು ಕರೆತರುವುದು ನನ್ನ ಜವಾಬ್ದಾರಿ ಎಂದಿದ್ದ. ಆಗ ನಾನು ಅಷ್ಟು ದೂರ ಬರುವುದಿಲ್ಲ. ನಾನು ಇಲ್ಲಿಂದನೇ ಅವರಿಗೆ ಆಶೀರ್ವಾದ ಮಾಡುತ್ತೇನೆ ಎಂದು ಹೇಳಿದೆ. ಪಬ್ಲಿಕ್ ಮೀಟಿಂಗ್‍ನಲ್ಲಿ ಗೆಳೆಯರನ್ನು ಭೇಟಿಯಾದಾಗ ಸುಜ್ಞಾನಮ್ಮ ಟೀಚರ್ ಹೇಗಿದ್ದಾರೆ ಎಂದು ಕೇಳುತ್ತಿದ್ದನು.

ಅನಂತ ಸಾವಿನ ದುಃಖವನ್ನು ಯಾರೂ ತಂದುಕೊಡುತ್ತಾರೆ. ಅನಂತನನ್ನು ಯಾರೂ ತಂದುಕೊಡುತ್ತಾರೆ. ಆ ದುಃಖಗಿಂತ ಬೇರೆ ಯಾವ ದುಃಖನೂ ಇಲ್ಲ. ಒಂದು ಪಕ್ಷದ ಶಕ್ತಿ, ಹೆತ್ತವರು, ಶಿಕ್ಷಕರು ಹೆಮ್ಮೆ ಪಡುವಂತಹ ವ್ಯಕ್ತಿ ಇಂದು ಕಣ್ಮರೆಯಾದನು. ಈಗೀಗ ನಾನು ಆತನ ಭಾಷಣವನ್ನು ಲಕ್ಷ್ಯ ಕೊಟ್ಟು ಕೇಳುತ್ತಿದ್ದೇನೆ. ನಾನು ಯಾವಾಗಲೂ ಆಫೀಸ್ ಒಳಗಡೆ ಸೈನ್ ಮಾಡಿ ಬರುವರೆಗೆ ಎಲ್ಲ ಹುಡುಗರನ್ನು ಮೌನವಾಗಿ ಕುಳಿತಿಕೊಳ್ಳುವಂತೆ ನೋಡುತ್ತಿದ್ದ.

ಆಟದಲ್ಲಿ ಬಹಳ ತುಂಟನಾಗಿದ್ದ. ಆಟದಲ್ಲಿ ಸೋತರೂ ಗೆದ್ದಿದ್ದೇನೆ ಎಂದು ಹೇಳುತ್ತಿದ್ದ. ಮತ್ತೆ ಆಡಿಸಿ ಎಂದು ಹೇಳುತ್ತಿದ್ದ.

ನಾನು ಅವನ ಮಗಳ ಮದುವೆಗೆ ಹೋಗಿರಲಿಲ್ಲ. ಯಾವುದೋ ಕಾರ್ಯಕ್ರಮದಲ್ಲಿ ಕೊನೆಯದಾಗಿ ಅವನನ್ನು ಭೇಟಿ ಮಾಡಿದ್ದೆ. ನನಗೆ ಅವನ ರಾಜಕೀಯ ಮಾತುಗಳು ನೆನಪು ಬರುತ್ತೆ ಹೊರತು ಆತ ಆಡುವ ಮಾತು ಈಗ ನೆನಪಿಗೆ ಬರುವುದಿಲ್ಲ. ಅನಂತ ರಾಜಕೀಯಕ್ಕೆ ಹೋಗುತ್ತಾನೆ ಎಂದು ಅಂದುಕೊಂಡಿರಲಿಲ್ಲ. ಆರಂಭದಲ್ಲಿ ನಾನು ಇವನಿಗೆ ರಾಜಕೀಯ ಯಾಕೆ ಬೇಕು? ಸುಮ್ಮನೆ ಒಂದು ಉದ್ಯೋಗ ಮಾಡಿ ಆರಾಮಾಗಿ ಇರಬೇಕಿತ್ತು ಎಂದು ಯೋಚಿಸುತ್ತಿದ್ದೆ.

ಅವನು ರಾಜಕೀಯಕ್ಕೆ ಹೋದಾಗ ನಾನು ಒಂದು ಸಂದೇಶ ಕಳುಹಿಸಿದೆ. ಅಪ್ಪಾ ನೀನು ಎಷ್ಟೇ ದೊಡ್ಡ ಸ್ಥಾನಕ್ಕೆ ಹೋದರೂ ಚಿಂತೆ ಇಲ್ಲ ನ್ಯಾಯವಾಗಿ ನಡೆದುಕೋ ಮತ್ತು ಬಡವರ ಬಗ್ಗೆ ದಯೆಯಿರಲಿ ಎಂದು ಹೇಳಿ ಇದೇ ಆಶೀರ್ವಾದ ಎಂಬ ಸಂದೇಶ ನೀಡಿದ್ದೆ. ನಾನು ರಾಜಕೀಯದ ಬಗ್ಗೆ ಅವನ ಜೊತೆ ಏನೂ ಮಾತನಾಡಿರಲಿಲ್ಲ. ಹೇಗಿದ್ದೀಯಾ, ಟೆನ್ಷನ್ ಕಡಿಮೆ ಮಾಡಿಕೋ ಎಂದು ಹೇಳುತ್ತಿದ್ದೆ. ಮುಂದೊಂದು ದಿನ ಆತ ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿ ಆಗುತ್ತಾನೆ ಎಂದು ನಾನು ಕನಸು ಕಂಡಿದ್ದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply

Your email address will not be published. Required fields are marked *