Connect with us

Latest

ಎಲ್‍ಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ನಿತೀಶ್ ವಿರುದ್ಧ ತನಿಖೆ: ಚಿರಾಗ್ ಪಾಸ್ವಾನ್

Published

on

ಪಾಟ್ನಾ: ಬಿಹಾರದಲ್ಲಿ ಲೋಕ ಜನಶಕ್ತಿ ಪಕ್ಷ(ಎಲ್‍ಜೆಪಿ) ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ‘7 ನಿಶ್ಚಿಯ’ ಯೋಜನೆಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಲಾಗುವುದು. ಅಲ್ಲದೆ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಸಿಎಂ ನಿತೀಶ್ ಕುಮಾರ್ ವಿರುದ್ಧ ಚಿರಾಗ್ ಪಾಸ್ವಾನ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಬಕ್ಸಾರ್‍ನ ಡುಮ್ರಾನ್‍ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ದೊಡ್ಡ ಪ್ರಮಾಣದ ಹಗರಣ ಮತ್ತು ಭ್ರಷ್ಟಾಚಾರದ ಬಗ್ಗೆ ಸಿಎಂಗೆ ತಿಳಿದಿಲ್ಲ ಎಂದು ಹೇಳಲು ಹೇಗೆ ಸಾಧ್ಯ?. ಸಿಎಂ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಅವರು ತಪ್ಪಿತಸ್ಥರಾಗಿದ್ದರೆ, ತನಿಖೆಯ ನಂತರ ಅವರನ್ನು ಜೈಲಿಗೆ ಕಳುಹಿಸಲಾಗುತ್ತೆ ಎಂದರು.

ಮದ್ಯ ನಿಷೇಧವನ್ನು ಆದೇಶವನ್ನು ಏಕೆ ಪರಿಶೀಲಿಸಲಾಗುತ್ತಿಲ್ಲ, ರಾಜ್ಯದಲ್ಲಿ ಮದ್ಯ ಕಳ್ಳಸಾಗಣೆ ನಡೆಯುತ್ತಿಲ್ಲವೇ?. ಪ್ರತಿಯೊಬ್ಬರೂ ರಾಜ್ಯದಲ್ಲಿ ಮದ್ಯವನ್ನು ಪಡೆಯುತ್ತಿದ್ದಾರೆ. ಸರ್ಕಾರ ಮತ್ತು ಅಧಿಕಾರಿಗಳು ಒಟ್ಟಾಗಿ ಈ ಅವ್ಯವಹಾರ ಮಾಡುತ್ತಿದ್ದಾರೆ. ಬಿಹಾರ ಸರ್ಕಾರದಲ್ಲಿ ಒಬ್ಬ ಮಂತ್ರಿ ಕೂಡ ಇಲ್ಲಿ ಭಾಗಿಯಾಗಿಲ್ಲ ಎಂದಾದರೇ ಸರ್ಕಾರ ಈ ಬಗ್ಗೆ ಪರಿಶೀಲಿಸಬೇಕು. ಅವರು ಪರಿಶೀಲಿಸಲು ಬಯಸದಿದ್ದರೆ ಸರ್ಕಾರವೇ ಇಲ್ಲಿ ಭಾಗಿಯಾಗಿದೆ ಎಂದರ್ಥ ಎಂದು ಆರೋಪಿಸಿದರು.

ಮದ್ಯ ಕಳ್ಳ ಸಾಗಾಣಿಕೆ ಹಣ, 7 ನಿಶ್ವಯ ಯೋಜನೆಯ ಅಕ್ರಮ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಇವೆಲ್ಲವೂ ತನಿಖೆಯ ವಿಷಯವಾಗಿದೆ. ಇದನ್ನು ನಮ್ಮ ಸರ್ಕಾರದಿಂದ ತನಿಖೆ ಮಾಡಲಾಗುವುದು ಎಂದು ಎಲ್‍ಜೆಪಿ ನಾಯಕ ಚಿರಾಗ್ ಪಾಸ್ವಾನ್ ಜನರಿಗೆ ಭರವಸೆ ನೀಡಿದರು.

Click to comment

Leave a Reply

Your email address will not be published. Required fields are marked *