Connect with us

Districts

ವಿಪಕ್ಷ ಸ್ಥಾನದಿಂದ ನನ್ನನ್ನು ತೆಗೆಯುವ ಕುರಿತು ಮಾಹಿತಿಯಿಲ್ಲ, ಊಹಾಪೋಹದ ಬಗ್ಗೆ ಮಾತಾಡಲ್ಲ: ಖರ್ಗೆ

Published

on

ಕಲಬುರಗಿ: ವಿಪಕ್ಷ ಸ್ಥಾನದಿಂದ ನನ್ನನ್ನು ತೆಗೆಯುವ ಕುರಿತು ಯಾವುದೇ ಮಾಹಿತಿಯಿಲ್ಲ ಅಂತಾ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಹೈಕಮಾಂಡ್ ನನ್ನ ಜೊತೆ ಯಾವುದೇ ಚರ್ಚೆ ಮಾಡಿಲ್ಲ. ಹೀಗಾಗಿ ಈ ವಿಷಯ ರಾಹುಲ್ ಗಾಂಧಿಗೆ ಬಿಟ್ಟಿದೆ. ಇನ್ನು ನನ್ನನ್ನು ಕೆಪಿಸಿಸಿ ಅಧ್ಯಕ್ಷನನ್ನಾಗಿ ಮಾಡ್ತಾರೆ ಅನ್ನೋ ಬಗ್ಗೆ ಸಹ ಯಾವುದೇ ಮಾಹಿತಿ ಇಲ್ಲಾ. ಆ ಗೋಜಿಗೂ ಹೋಗಿಲ್ಲ ಅಂದ್ರು.

ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ನನ್ನ ಕರೆದು ಕೇಳಿದ್ರೆ ನನ್ನ ಅಭಿಪ್ರಾಯ ಹೇಳಬಹುದು. ಉಹಾಪೋಹಗಳ ಮೇಲೆ ಮಾತಾಡೋದು ಸರಿಯಲ್ಲ. ಹೈಕಮಾಂಡ್ ಏನು ತಿರ್ಮಾನ ತೆಗೆದುಕೊಳ್ಳುತ್ತೋ ಅದಕ್ಕೆ ಬದ್ಧನಾಗಿರುತ್ತೇನೆ. ಅವರು ಏನು ಹೇಳ್ತಾರೋ ಅದನ್ನು ಪಾಲಿಸುತ್ತೇನೆ ಅಂತ ಹೇಳುವ ಮೂಲಕ ಖರ್ಗೆ ಹೈಕಮಾಂಡನತ್ತ ಇದೀಗ ಮುಖ ಮಾಡಿದ್ದಾರೆ.